More

    ಸೋಂಕು ನಿಯಂತ್ರಣಕ್ಕೆ ಹುದ್ದೆ ಭರ್ತಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಕರೊನಾ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಪ್ರಸ್ತುತ ಕೈಗೊಂಡಿರುವ ಕ್ರಮಗಳಿಂದ ನಿಯಂತ್ರಣ ಆಗುತ್ತಿಲ್ಲ. ಹಾಗಾಗಿ ಸೋಂಕು ನಿಯಂತ್ರಣಕ್ಕೆ ಖಾಲಿ ಇರುವ ‘ಡಿ’ ಗ್ರೂಪ್ ನೌಕರರು, ಕಾಯಂ ಶುಶ್ರೂಷಕರು ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.

    ಸಿಮ್್ಸ (ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ) ಸಭಾಂಗಣದಲ್ಲಿ ಸೋಂಕು ನಿಯಂತ್ರಿಸುವ ಕುರಿತು ಸೋಮವಾರ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಖಾಲಿ ಇರುವ ತಲಾ 50 ‘ಡಿ’ ಗ್ರೂಪ್ ನೌಕರರು ಮತ್ತು ಕಾಯಂ ಶುಶ್ರೂಷಕರ ನೇಮಿಸಿಕೊಳ್ಳಬೇಕು. ಅದರಲ್ಲಿ ತಲಾ 25 ಜನರನ್ನು ತಕ್ಷಣವೇ ನೇಮಿಸಿಕೊಳ್ಳಬೇಕು ಹಾಗೂ 6 ತಿಂಗಳವರೆಗೆ 25 ವೈದ್ಯರನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಎಂಬಿಬಿಎಸ್ ಮುಗಿಸಿದ ವೈದ್ಯರು ಒಂದು ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಬೇಕೆಂಬ ಆದೇಶವಿದೆ. ಅದರಂತೆ ಅವರನ್ನು ಕರೊನಾ ಚಿಕಿತ್ಸೆಗೆ ಬಳಸಿಕೊಳ್ಳಲು ಸಂಬಂಧಪಟ್ಟ ಸಚಿವರ ಜತೆ ಮಾತನಾಡುತ್ತೇನೆ. ಆದಷ್ಟು ಬೇಗ ಸಿಬ್ಬಂದಿ ನೇಮಕಾತಿ ಕುರಿತು ಪ್ರಕಟಣೆ ಹೊರಡಿಸಬೇಕು ಎಂದು ಸೂಚಿಸಿದರು.

    ವೈದ್ಯರ ನೇಮಕಾತಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅನಿಲ್​ಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಸಿಮ್ಸ್ ನಿರ್ದೇಶಕರಿಗೆ ಸೂಚಿಸಿದ ಅವರು, ಮೆಗ್ಗಾನ್​ನಲ್ಲಿ ಕೆಲಸ ಮಾಡಲು ಇಚ್ಛಿಸುವವರನ್ನು ಕರೆತರಲು ಸರ್ಕಾರದ ಅನುಮತಿ ಪಡೆಯಲು ಈ ಪ್ರಯತ್ನ ಅವಶ್ಯಕ. ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳ ವೈದ್ಯರನ್ನೂ ಬಳಸಿಕೊಳ್ಳಲು ಸೂಚಿಸಿದ ಸಚಿವರು, ವಾರಕ್ಕೆ ಎಷ್ಟು ದಿನ ಬಂದು ಕೆಲಸ ಮಾಡಲಿಚ್ಛಿಸುವರೋ ಅಂತಹ ವೈದ್ಯರನ್ನೂ ಬಳಸಿಕೊಳ್ಳಬಹುದು ಎಂದರು.

    ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸಿಮ್್ಸ ನಿರ್ದೇಶಕ ಡಾ. ಒ.ಎಸ್.ಸಿದ್ದಪ್ಪ, ಸಿಮ್್ಸ ಸಲಹಾ ಸಮಿತಿ ಸದಸ್ಯರಾದ ಡಾ. ವಾಣಿಕೋರಿ, ದಿವಾಕರ ಶೆಟ್ಟಿ, ಡಿಎಚ್​ಒ ಡಾ. ರಾಜೇಶ್ ಸುರಗೀಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts