More

    ಕರೊನಾ ವೈರಸ್ ಹುಟ್ಟಿನ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ಅಮೆರಿಕ ಗುಪ್ತಚರ ವಿಭಾಗ

    ವಾಷಿಂಗ್ಟನ್ : ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಕ ಕರೊನಾ ವೈರಸ್ ಚೀನಾದಲ್ಲೇ ಹುಟ್ಟಿದೆ, ಆದರೆ ಇದು ಮಾನವ ನಿರ್ಮಿತ ವೈರಸ್ ಅಲ್ಲ ಎಂದು ಅಮೆರಿಕದ ಗುಪ್ತಚರ ವಿಭಾಗ ಗುರುವಾರ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗುಪ್ತಚರ ವಿಭಾಗದ ನಿರ್ದೇಶಕರ ಕಚೇರಿ,

    ಕರೊನಾ ವೈರಸ್ ಮಾನವ ನಿರ್ಮಿತ ಅಲ್ಲ ಎಂಬ ಒಮ್ಮತಕ್ಕೆ ಬರಲಾಗಿದೆ. ಆದರೆ ಪ್ರಾಣಿಗಳ ಸಂಪರ್ಕದ ಮೂಲಕ ಏಕಾಏಕಿ ವೈರಸ್ ಹರಡಿದೆಯೇ ಅಥವಾ ವುಹಾನ್‌ನ ಪ್ರಯೋಗಾಲಯದಲ್ಲಿ ನಡೆದ ಯಡವಟ್ಟಿನಿಂದಾಗಿ ಸೋಂಕು ಪಸರಿಸಿದೆಯೇ ಎಂಬ ಬಗ್ಗೆ ಗುಪ್ತಚರ ದಳದ ಕಟ್ಟುನಿಟ್ಟಿನ ತನಿಖೆ ಮುಂದುವರೆಯಲಿದೆ ಎಂದು ತಿಳಿಸಿದೆ.

    ಇದನ್ನೂ ಓದಿ: ತಲೆನೋವಿನಿಂದ ಬಳಲುತ್ತಿದ್ದ ಯುವತಿಗೆ ಆಪರೇಷನ್​ ಮಾಡುವಾಗ ಮೆದುಳಿನಲ್ಲಿ ಸಿಕ್ಕ ಜೀವಿ ಕಂಡು ಬೆರಗಾದ ವೈದ್ಯರು​!

    ಕರೊನಾ ವೈರಸ್ ವುಹಾನ್‌ನ ಮಾಂಸ ಮಾರುಕಟ್ಟೆಯಿಂದ ವ್ಯಾಪಿಸಿದೆ ಎಂದು ಚೀನಾ ಹೇಳಿದೆಯಾದರೂ ಈ ಬಗ್ಗೆ ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಸಂಶಯವಿದೆ. ಕೆಲ ವರದಿಗಳ ಪ್ರಕಾರ, ಕರೊನಾ ವೈರಸ್ ಕುರಿತು ವುಹಾನ್‌ನ ಲ್ಯಾಬ್‌ನಲ್ಲಿ ಅಧ್ಯಯನ ನಡೆಸುವಾಗ ಸೋಂಕು ಸೋರಿಕೆಯಾಗಿ, ಮೊದಲು ಅಲ್ಲಿನ ತಜ್ಞರಿಗೆ ಹಬ್ಬಿತ್ತು. ಬಳಿಕ ವುಹಾನ್ ಪ್ರಾಂತ್ಯದಲ್ಲಿ ವ್ಯಾಪಿಸಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    VIDEO| ವಾರ್ನರ್ ದಂಪತಿಯ ಬುಟ್ಟ ಬೊಮ್ಮ ಮಸ್ತ್​​​ ಸ್ಟೆಪ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts