More

    ಚೀನಾ ವಿರುದ್ಧ ಹಾಂಗ್​ಕಾಂಗ್​ಗೆ ಸಿಗಲಿದೆಯೇ ಅಮೆರಿಕದ ಅಸ್ತ್ರ..?

    ವಾಷಿಂಗ್ಟನ್​: ಚೀನಾ ದಬ್ಬಾಳಿಕೆ ಮುಂದುವರಿದಿದ್ದೇ ಆದಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ಕೇಂದ್ರವೆಂಬ ಸ್ಥಾನಮಾನವನ್ನು ಹಾಂಗ್​ಕಾಂಗ್ ಕಳೆದುಕೊಳ್ಳಲಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಚೀನಾ ಕ್ರಮದ ಬಗ್ಗೆ ‘ಅತ್ಯಂತ ಆಸಕ್ತಿದಾಯಕ’ ಪ್ರತಿಕ್ರಿಯೆ ನೀಡುವುದಾಗಿ ಭರವಸೆಯಿತ್ತಿದೆ.

    ಹಾಂಗ್​ಕಾಂಗ್​ ಮೇಲೆ ತನ್ನ ಹಿಡಿತವನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿರುವ ಚೀನಾ, ವಿಶೇಷ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಅದರಂತೆ ಹಾಂಗ್​ಕಾಂಗ್​ ಚೀನಾದಿಂದ ಬೇರ್ಪಡುವುದು, ಉಪಟಳ ಉಂಟು ಮಾಡುವುದು, ಭಯೋತ್ಪಾದನೆ ಹಾಗೂ ವಿದೇಶ ಹಸ್ತಕ್ಷೇಪವನ್ನು ನಿರ್ಬಂಧಿಸಲಾಗುತ್ತದೆ. ಆದರೆ, ಅಗತ್ಯ ಸ್ವಾತಂತ್ರ್ಯ ನೀಡಲಾಗುತ್ತದೆ ಎಂದು ಹಾಂಗ್​ಕಾಂಗ್​ನ ಮುಖ್ಯಾಧಿಕಾರಿ ಕ್ಯಾರಿ ಲ್ಯಾಮ್​ ಹೇಳಿದ್ದಾರೆ.

    ಇದನ್ನೂ ಓದಿ; ಅಕ್ರಮ ನುಸುಳುವಿಕೆಯಲ್ಲಿ ಪಾಕಿಸ್ತಾನವನ್ನು ಮೀರಿಸುತ್ತಿರುವ ಚೀನಾ? ಗಡಿಯಲ್ಲಿ ಸೇನೆ ಜಮಾವಣೆ 

    ಆದರೆ, ಚೀನಾ ಹಾಂಗ್​ಕಾಂಗ್​ನ್ನು ಅತಿಕ್ರಮಿಸಿದ್ದೇ ಆದಲ್ಲಿ, ಅದು ಆರ್ಥಿಕ ಚಟುವಟಿಕೆಯ ತಾಣವಾಗಿ ಉಳಿಯುವುದು ಕಷ್ಟವಾಗಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸ್ವತಃ ಈ ಎಚ್ಚರಿಕೆ ನೀಡಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ವಕ್ತಾರೆ ಕೇಲಿ ಮ್ಯಾಕ್​ ಎನಾನಿ ಹೇಳಿದ್ದಾರೆ.

    ಚೀನಾ ಮೇಲೆ ಅಮೆರಿಕ ದಿಗ್ಬಂಧನಗಳನ್ನು ವಿಧಿಸಲಿದೆಯೇ, ಚೀನಿ ವಿದ್ಯಾರ್ಥಿಗಳಿಗೆ ವೀಸಾ ನೀಡುವುದರ ಮೇಲೆ ನಿರ್ಬಂಧಗಳನ್ನು ಹಾಕಲಾಗುತ್ತದೆಯೇ ಎಂದು ಬಳಿಕ ಟ್ರಂಪ್​ ಅವರನ್ನೇ ವರದಿಗಾರರು ಪ್ರಶ್ನಿಸಿದರು. ಇದೊಂದು ತುಂಬಾ ಮುಖ್ಯವಾದ ಪ್ರಶ್ನೆ ಎಂದ ಟ್ರಂಪ್​, ಇದಕ್ಕೆ ಕೆಲ ಸಮಯದಲ್ಲಿ ಬಹುಶ: ಈ ವಾರಾಂತ್ಯದೊಳಗೆ, ಅತ್ಯಂತ ಶಕ್ತಿಯುತ ಉತ್ತರ ನಿಮಗೆ ಸಿಗಲಿದೆ ಎಂದರು. ಆದರೆ, ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ಬಗ್ಗೆ ಯಾವುದೇ ಸುಳಿವನ್ನೂ ನೀಡಲಿಲ್ಲ.

    ಇದನ್ನೂ ಓದಿ; ಈ ಬಾರಿ ಶಿಕ್ಷಣ ಸಂಸ್ಥೆಗಳಿಗೆ ಬೇಸಿಗೆ ರಜೆ ಮೊಟಕು; ಡಿಸಿಎಂ ಅಶ್ವತ್ಥನಾರಾಯಣ್​ ಮಾಹಿತಿ 

    ಚೀನಾ ಕಾಯ್ದೆ ಜಾರಿಗೊಳಿಸಲಿದೆ ಎಂಬ ಸುದ್ದಿಯಿಂದಾಗಿ ಹಾಂಗ್​ಕಾಂಗ್​ ಷೇರು ಮಾರುಕಟ್ಟೆ ಐದು ವರ್ಷಗಳ ಹಿಂದಿನ ಕನಿಷ್ಠ ಸೂಚ್ಯಂಕಕ್ಕೆ ಕುಸಿದಿದೆ. ಹೀಗಿದ್ದರೂ, ಕಾನೂನು ಉಲ್ಲಂಘಿಸುತ್ತಿರುವ ಕೆಲವೇ ಶಕ್ತಿಯನ್ನು ಈ ಕಾಯ್ದೆ ಗುರಿಯಾಗಿಸಿಕೊಂಡಿದೆ ಹಾಂಗ್​ಕಾಂಗ್​ ಮುಖ್ಯಾಧಿಕಾರಿ ಲ್ಯಾಮ್​ ಸಮರ್ಥಿಸಿಕೊಂಡಿದ್ದಾರೆ.

    ಪ್ರತ್ಯೇಕತೆಯನ್ನು ಪ್ರಚೋದಿಸುವ ಎಲ್ಲ ಕೃತ್ಯಗಳಿಗೂ ಶಿಕ್ಷೆಯಾಗಲಿದೆ ಎಂದು ಚೀನಾ ಸೇನಾಧಿಕಾರಿ ಚೆನ್​ ದಾವೋಕ್ಸಿಯಾಂಗ್​ ಹಾಂಗ್​ಕಾಂಗ್​ನಲ್ಲಿ ಹೇಳಿದ್ದಾರೆ. ಹೀಗಿದ್ದರೂ ಚೀನಾದ ಅತಿಕ್ರಮಣ ಖಂಡಿಸಿ ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಹೋರಾಟ ನಡೆಸುವುದು ಮುಂದುವರಿದಿದೆ. ಕಳೆದ ವರ್ಷ ಸತತ ಏಳು ತಿಂಗಳವರೆಗೆ ಹಾಂಗ್​ಕಾಂಗ್​ನಲ್ಲಿ ಸ್ವಾತಂತ್ರ್ಯ ಬಯಸಿ ಹೋರಾಟ ನಡೆದಿದ್ದವು. ಕರೊನಾದಿಂದಾಗಿ ಈ ಹೋರಾಟಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು.

    ಲಡಾಖ್​ ಗಡಿಯಲ್ಲಿ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿದ ಚೀನಾ, ಚೀನಿಯರನ್ನು ಕರೆಯಿಸಿಕೊಳ್ಳಲು ಮುಂದಾದ ರಾಯಭಾರ ಕಚೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts