More

    ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್​ ನಂಬರ್​ ಒನ್, ಮೋದಿ ನಂಬರ್​ ಟು, ಟ್ವೀಟ್​ ಮಾಡಿದ ಅಮೆರಿಕ ಅಧ್ಯಕ್ಷ; ಆದರೆ ಇದು ಸುಳ್ಳು!

    ನವದೆಹಲಿ: ಭಾರತಕ್ಕೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ಗೆ ಈಗ ಅದೇ ಧ್ಯಾನ. ದೇಶಕ್ಕೆ ಭೇಟಿ ನೀಡುವ ಮುನ್ನ ಈ ಸಂಬಂಧ ಟ್ವೀಟ್​ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್​ಗೆ ಭೇಟಿ ನೀಡಲಿದ್ದಾರೆ ಟ್ರಂಪ್​. ಈಗ ಟ್ರಂಪ್​ ಮಾಡಿರುವ ಟ್ವೀಟ್​ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿರುವುದು ವಿಶೇಷ.

    ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ಹೇಳಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್​ ನಂಬರ್​ ಒನ್​ ಅಂತೆ. ಇನ್ನು ಎರಡನೇ ಸ್ಥಾನದಲ್ಲಿದ್ದಾರಂತೆ ಪ್ರಧಾನಿ ನರೇಂದ್ರ ಮೋದಿ. ಇದು ಅವರ ಫಾಲೋವರ್ಸ್​ ಎಷ್ಟಿದ್ದಾರೆ ಎಂಬ ಲೆಕ್ಕಾಚಾರದ ಮೇಲೆ ಹೇಳಲಾಗಿದೆ.

    ಆದರೆ ಈ ಲೆಕ್ಕಾಚಾರ ಅಪದ್ಧ ಎನ್ನುತ್ತದೆ ಇಲ್ಲೊಂದು ವರದಿ. ಟ್ವಿಪ್ಲೊಮಸಿಯ 2019ರ ರ‍್ಯಾಂಕಿಂಗ್​ ಪ್ರಕಾರ ವಿಶ್ವದ ನಾಯಕರಲ್ಲಿ ನರೇಂದ್ರ ಮೋದಿ ಅವರೇ ಪ್ರಥಮ ಸ್ಥಾನದಲ್ಲಿದ್ದಾರೆ. ಮೋದಿ ಅವರಿಗೆ ವಿಶ್ವದಾದ್ಯಂತ 44 ಮಿಲಿಯ​ನ್​ ಫಾಲೋವರ್ಸ್​ ಇದ್ದಾರೆ. ಅದೇ ರೀತಿ ಅವರು ಎರಡನೇ ಸ್ಥಾನದಲ್ಲಿದ್ದಾರೆ (26 ಮಿಲಿಯನ್​ ಫಾಲೋವರ್ಸ್​).

    ಆದರೆ ಈ ಸಾಲಿನಲ್ಲಿ ಬರಾಕ್​ ಒಬಾಮಾ ಅವರನ್ನು ಸೇರಿಸಲಾಗಿಲ್ಲ. ಏಕೆಂದರೆ ಅವರೀಗ ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಆದರೆ ಅವರಿಗೆ ಫೇಸ್​ಬುಕ್​ನಲ್ಲಿ 55 ಮಿಲಿಯನ್​ ಫಾಲೋವರ್ಸ್​ ಇದ್ದಾರೆ.

    ಅಮೆರಿಕ ಅಧ್ಯಕ್ಷ ಟ್ರಂಪ್​ ಅವರು ಇದೇ 24ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಎರಡು ದಿನದ ಕಾರ್ಯಕ್ರಮದಲ್ಲಿ ಅವರು, ಅಹಮದಾಬಾದ್​ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ. ಅಂದಹಾಗೆ ಟ್ರಂಪ್​ ಅಮೆರಿಕ ಅಧ್ಯಕ್ಷರಾದ ಮೇಲೆ ಭಾರತಕ್ಕೆ ಇದು ಅವರ ಮೊದಲ ಪ್ರವಾಸ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts