More

    ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಗೆದ್ದ ಮೀರಾಗೆ ಸಿಕ್ತು ಜೀವನಪೂರ್ತಿ ಪಿಜ್ಜಾ ಸವಿಯುವ ಅವಕಾಶ..!

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಡೋಮಿನೋಸ್ ಇಂಡಿಯಾ ಕಂಪನಿ ಬಂಪರ್ ಕೊಡುಗೆ ನೀಡಿದೆ.

    ನಿನ್ನೆ ನಡೆದ ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಮೀರಾ ಅವರು ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟರು.

    ಇದನ್ನೂ ಓದಿ: Tokyo Olympics| ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಸರ್ಕಾರಿ ಉದ್ಯೋಗದ ಜತೆಗೆ 1 ಕೋಟಿ ರೂ. ಬಹುಮಾನ!

    ಪದಕ ಸ್ವೀಕರಿಸಿದ ನಂತರ ಮಾತನಾಡಿ, ನನಗೆ ಪಿಜ್ಜಾ ಮತ್ತು ಐಸ್ ಕ್ರೀಂ ತಿನ್ನಲು ಇಷ್ಟ ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ ಡೋಮಿನೋಸ್ ಇಂಡಿಯಾ ಪಿಜ್ಜಾ ಕಂಪನಿ, ಮೀರಾಬಾಯಿ ಅವರಿಗೆ ಜೀವನಪೂರ್ತಿ ಉಚಿತವಾಗಿ ಪಿಜ್ಜಾ ನೀಡುವ ಭರವಸೆ ನೀಡಿದೆ.

    ಸರ್ಕಾರಿ ಕೆಲಸ, ಕೋಟಿ ರೂ. ಬಹುಮಾನ:

    ಮೀರಾಬಾಯಿ ಚಾನು ಸಾಧನೆಗೆ ತಲೆಬಾಗಿರುವ ಮಣಿಪುರ ಸರ್ಕಾರ ಬಹುಮಾನವಾಗಿ 1 ಕೋಟಿ ರೂಪಾಯಿಗಳನ್ನು ಘೋಷಿಸಿದೆ. ಮೀರಾಬಾಯಿ ಮಣಿಪುರ ಮೂಲದವರು. ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಗೌರವಪೂರ್ವಕವಾಗಿ ಮಣಿಪುರ ಮುಖ್ಯಮಂತ್ರಿ ಎನ್​. ಬೈರೆನ್​ ಸಿಂಗ್​ ಶನಿವಾರ ಒಂದು ಕೋಟಿ ಬಹುಮಾನ ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ರಾಜ್ಯ ಸರ್ಕಾರವು ಮೀರಾಬಾಯಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ. ಪ್ರಸ್ತುತ ಮೀರಾಬಾಯಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಟಿಕೆಟ್​ ಕಲೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts