More

    ಸೋಮವಾರದಿಂದ ದೇಶೀಯ ವಿಮಾನಯಾನ ಆರಂಭವಾಗುವುದು ಅನುಮಾನ

    ನವದೆಹಲಿ: ಲಾಕ್​ಡೌನ್​ 4.0 ಮೇ 31ರವರೆಗೆ ಜಾರಿಯಲ್ಲಿದೆ. ಆದರೂ ಕೇಂದ್ರ ಸರ್ಕಾರ ಸೋಮವಾರದಿಂದ (ಮೇ 25) ದೇಶಿಯ ವಿಮಾನ ಸಂಚಾರ ಆರಂಭಿಸಲು ಉತ್ಸುಕತೆ ತೋರುತ್ತಿದೆ. ಇದಕ್ಕಾಗಿ ಅದು ಟಿಕೆಟ್​ ದರಗಳನ್ನು ನಿರ್ಧರಿಸಿದೆ. ಅಲ್ಲದೆ, ಅಗತ್ಯವಾದ ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಆದರೂ, ನಿಗದಿಯಂತೆ ಸೋಮವಾರದಿಂದ ದೇಶಿಯ ವಿಮಾನ ಸಂಚಾರ ಆರಂಭವಾಗುವುದು ಅನುಮಾನವಾಗಿದೆ.

    ದೇಶಿಯ ವಿಮಾನ ಸಂಚಾರ ಆರಂಭಿಸಲು ಮಹಾರಾಷ್ಟ್ರ, ತಮಿಳುನಾಡು ಸೇರಿ ಕೆಲವೊಂದು ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವುದು ಇದಕ್ಕೆ ಕಾರಣ.

    ಮೇ 31ರವರೆಗೆ ಲಾಕ್​ಡಾನ್​ 4.0 ಜಾರಿಯಲ್ಲಿರುತ್ತದೆ. ಮಹಾರಾಷ್ಟ್ರದಲ್ಲಿ ಕೋವಿಡ್​-19 ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ, ಕರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೇ 31ರವರೆಗೆ ಕಟ್ಟುನಿಟ್ಟಾಗಿ ಲಾಕ್​ಡೌನ್​ ಅನುಷ್ಠಾನಗೊಳಿಸಲು ತಾನು ಬದ್ಧವಾಗಿರುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ದೇಶಿಯ ವಿಮಾನ ಸಂಚಾರಕ್ಕೆ ರಾಜ್ಯದಲ್ಲಿ ಅವಕಾಶ ಮಾಡಿಕೊಡದಿರಲು ಅದು ನಿರ್ಧರಿಸಿದೆ.

    ಇದನ್ನೂ ಓದಿ: ಸಮುದ್ರದಾಳದಿಂದ ಮನುಷ್ಯರಿಗೆ ಗಿಫ್ಟ್​ ತರುತ್ತಿರುವ ಡಾಲ್ಫಿನ್​ ಗುಂಪು!

    ಅದರಂತೆ ತಮಿಳುನಾಡಿನಲ್ಲೂ ಕೋವಿಡ್​-19 ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ, ಲಾಕ್​ಡೌನ್​ 4.0ದಿಂದಾಗಿ ರಾಜ್ಯಾದ್ಯಂತ ನಗರ ಸಾರಿಗೆ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶಿಯ ವಿಮಾನ ಸಂಚಾರ ಆರಂಭವಾದರೆ, ಜನರಿಗೆ ತಮ್ಮ ಮನೆಗಳಿಗೆ ತಲುಪಿಕೊಳ್ಳಲು ಕಷ್ಟವಾಗುತ್ತದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಈ ಕಾರಣದಿಂದಾಗಿ ತಮಿಳುನಾಡಿನಲ್ಲಿ ಕೂಡ ದೇಶಿಯ ವಿಮಾನ ಸಂಚಾರ ಆರಂಭವಾಗುವುದು ಅನುಮಾನವಾಗಿದೆ.

    ಈ ನಡುವೆ ಕರ್ನಾಟಕ ಮತ್ತು ಕೇರಳ ಸೇರಿ ಆರು ರಾಜ್ಯಗಳು ತಮ್ಮಲ್ಲಿಗೆ ಬರುವ ವಿಮಾನ ಪ್ರಯಾಣಿಕರನ್ನು ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸುವುದಾಗಿ ಹೇಳಿವೆ. ಇದು ಕೂಡ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

    ಆದರೆ ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್​ ಪುರಿ ಸ್ಪಷ್ಟನೆ ನೀಡಿದ್ದು, ಆರೋಗ್ಯ ಸೇತು ಆ್ಯಪ್​ ಹೊಂದಿದ್ದು, ಅದು ಹಸಿರು ತೋರಿಸುತ್ತಿದ್ದರೆ ಮಾತ್ರ ವಿಮಾನ ನಿಲ್ದಾಣ ಪ್ರವೇಶಿಸಲು ಜನರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಒಂದು ವೇಳೆ ಅದು ಕೆಂಪು ತೋರಿಸಿದರೆ, ಅಂಥವರನ್ನು ತಕ್ಷಣವೇ ಕ್ವಾರಂಟೈನ್​ಗೆ ಕಳುಹಿಸಲಾಗುವುದು. ಹಾಗಾಗಿ, ವಿಮಾನ ಪ್ರಯಾಣಿಕರನ್ನು ಕ್ವಾರಂಟೈನ್​ಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

    ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರದಲ್ಲೇ ಸೋಮವಾರದಿಂದ ದೇಶಿಯ ವಿಮಾನ ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೂ ಈಗ ಈ ವಿಷಯವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದು ಸಲ್ಲ. ಅದೇನೇ ಆದರೂ ವಿಮಾನ ಸಂಚಾರ ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಹೀಗಿದ್ದರೂ, ವಿವಿಧ ರಾಜ್ಯಗಳ ವಿರೋಧದ ಧ್ವನಿ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶಿಯ ವಿಮಾನ ಸಂಚಾರ ಆರಂಭವಾಗುವುದು ಅನುಮಾನವಾಗಿದೆ.

    ಕೇರಳದಲ್ಲಿ ಮತ್ತೊಂದು ಸೆಕ್ಸ್ ಹಗರಣ: ಮಹಿಳೆ ಜತೆ ಸಿಕ್ಕಿಬಿದ್ದ ಫಾದರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts