More

    ಜೂನ್​ನಿಂದ ವಿಮಾನ ಸೇವೆ ಆರಂಭ ನಿರೀಕ್ಷೆ; 10 ದಿನಗಳ ಮೊದಲು ಆರಂಭವಾಗುತ್ತೆ ಬುಕಿಂಗ್​

    ನವದೆಹಲಿ: ಕೋವಿಡ್​ 19 ಲಾಕ್​ಡೌನ್​ನಿಂದಾಗಿ ಸದ್ಯ ಸ್ಥಗಿತಗೊಂಡಿರುವ ವೈಮಾನಿಕ ಸೇವೆಗಳು ಜೂನ್​ನಿಂದ ಮರುಆರಂಭವಾಗುವ ಸಾಧ್ಯತೆ ಇದೆ. ಸೇವೆಗಳು ಮರುಆರಂಭವಾಗುವ 10 ದಿನಗಳ ಮೊದಲು ಬುಕಿಂಗ್​ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಯೊಬ್ಬರು, ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯನ್ನು ಅವಲಂಬಿಸಿ ವಿಮಾನ ಸೇವೆ ಮರುಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯದ ಪರಿಸ್ಥಿತಿ ಪ್ರಕಾರ ಜೂನ್​ ಮೊದಲ ವಾರದ ಸೇವೆಗಳು ಮರುಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

    ವಿಮಾನ ಸೇವೆ ಆರಂಭವಾಗುವ 10 ದಿನಗಳ ಮೊದಲು ಮುಂಗಡ ಟಿಕೆಟ್​ ಕಾಯ್ದಿರಿಸುವಿಕೆ ಪ್ರಕ್ರಿಯೆ ಆರಂಭವಾಗಲಿದೆ. ಸದ್ಯಕ್ಕೆ ದೇಶಿಯ ಸೇವೆಗಳನ್ನು ಆರಂಭಿಸುವ ಬಗ್ಗೆ ಗಮನ ಕೇಂದ್ರೀಕೃತವಾಗಿದ್ದು, ಅಂತಾರಾಷ್ಟ್ರೀಯ ಸೇವೆಗಳನ್ನು ಮರುಆರಂಭಿಸುವ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    10 ದಿನಗಳು ಸಾಲುವುದಿಲ್ಲ: ದೇಶಿಯ ವಿಮಾನ ಸೇವೆಗಳನ್ನು ಆರಂಭಿಸುವ 10 ದಿನಗಳ ಮೊದಲು ಬುಕಿಂಗ್​ ಆರಂಭಿಸುವ ಬಗ್ಗೆ ಸರ್ಕಾರ ಒಲವು ಹೊಂದಿದ್ದರೆ, ವೈಮಾನಿಕ ಸೇವೆ ಒದಗಿಸುವ ಸಂಸ್ಥೆಗಳ ಅಧಿಕಾರಿಗಳು ಮುಂಗಡ ಬುಕಿಂಗ್​ಗೆ 10 ದಿನಗಳ ಕಾಲಾವಕಾಶ ಸಾಲುವುದಿಲ್ಲ ಎಂದು ಹೇಳಿದ್ದಾರೆ.

    ವಿಮಾನಗಳನ್ನು ವ್ಯವಸ್ಥೆಗೊಳಿಸುವುದು, ಸುರಕ್ಷತಾ ಮಾರ್ಗಸೂಚಿಗಳನ್ನು ರೂಪಿಸಿ, ಜಾಗೃತಿ ಮೂಡಿಸುವುದು ಹಾಗೂ ಅಗತ್ಯ ಪ್ರಮಾಣದ ಬುಕಿಂಗ್​ ಆಗುವಂತೆ ಮಾಡಲು ಕನಿಷ್ಠ 15 ದಿನಗಳ ಕಾಲಾವಕಾಶ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

    ಟಿಕೆಟ್​ಗಳಿಗೆ ಭಾರಿ ಬೇಡಿಕೆ ನಿರೀಕ್ಷೆ: ಲಾಕ್​ಡೌನ್​ನಿಂದಾಗಿ ಸಾಕಷ್ಟು ಜನರು ವಿವಿಧೆಡೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಮರಳಲು ಹಾತೊರೆಯುತ್ತಿದ್ದಾರೆ. ಹಾಗಾಗಿ, ಬುಕಿಂಗ್​ ಆರಂಭವಾದ ಮೊದಲ ಮೂರು ದಿನಗಳಲ್ಲಿ ವಿಮಾನದ ಟಿಕೆಟ್​ಗಳಿಗೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.

    ವಾಸನೆಯಿಂದ ಕರೊನಾ ಪರೀಕ್ಷೆ ಮಾಡಲು ಬರ್ತಿವೆ ಶ್ವಾನಗಳು! ಇನ್ನು ನಾಯಿಗಳದ್ದೇ ಕಾರುಬಾರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts