More

    ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದೇ ಗುಂಪಿನಲ್ಲಿ ಕರ್ನಾಟಕ, ಮುಂಬೈ!

    ನವದೆಹಲಿ: ದೇಶೀಯ ಕ್ರಿಕೆಟ್‌ನ ಬಲಿಷ್ಠ ತಂಡಗಳಾದ ಕರ್ನಾಟಕ ಮತ್ತು ಮುಂಬೈ ತಂಡಗಳು ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20, ವಿಜಯ್ ಹಜಾರೆ ಟ್ರೋಫಿ ಏಕದಿನ ಮತ್ತು ರಣಜಿ ಟ್ರೋಫಿ ಟೂರ್ನಿಗಳಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

    ನವೆಂಬರ್ 4ರಿಂದ 22ರವರೆಗೆ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಡಿಸೆಂಬರ್ 8ರಿಂದ 27ರವರೆಗೆ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ, ಮುಂಬೈ ತಂಡಗಳು ಬಿ ಗುಂಪಿನಲ್ಲಿವೆ. ಮುಷ್ತಾಕ್ ಅಲಿಯಲ್ಲಿ ಟಿ20ಯಲ್ಲಿ ಬಲಿಷ್ಠವಾಗಿರುವ ಬರೋಡ ತಂಡ ಕೂಡ ಇದೇ ಗುಂಪಿನಲ್ಲಿದ್ದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಮತ್ತೊಂದು ಬಲಿಷ್ಠ ತಂಡ ತಮಿಳುನಾಡು ಕೂಡ ಅದೇ ಗುಂಪಿನಲ್ಲಿದೆ. ಜನವರಿ 5ರಿಂದ ಮಾರ್ಚ್ 20ರವರೆಗೆ ನಡೆಯಲಿರುವ ರಣಜಿ ಟ್ರೋಫಿಯಲ್ಲಿ ಕರ್ನಾಟಕ, ಮುಂಬೈ ತಂಡಗಳು ಸಿ ಗುಂಪಿನಲ್ಲಿದ್ದು, ಮತ್ತೊಂದು ಬಲಿಷ್ಠ ತಂಡ ದೆಹಲಿ ಕೂಡ ಇದೇ ಗುಂಪಿನಲ್ಲಿದೆ.

    ಟೂರ್ನಿಯಲ್ಲಿ ಪಾಲ್ಗೊಳ್ಳುವ 38 ತಂಡಗಳನ್ನು 6 ಗುಂಪಿನಲ್ಲಿ ವಿಂಗಡಿಸಲಾಗಿದ್ದು, 5 ಎಲೈಟ್ ಗುಂಪಿನಲ್ಲಿ ತಲಾ 6 ತಂಡಗಳಿದ್ದರೆ, ಪ್ಲೇಟ್ ಗುಂಪಿನಲ್ಲಿ 8 ತಂಡಗಳಿವೆ. ಟೂರ್ನಿಗೆ ಮುನ್ನ ಎಲ್ಲ ತಂಡದ ಆಟಗಾರರು 5 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಿದೆ.

    ರಣಜಿ ಗುಂಪುಗಳು:
    ಎ (ಮುಂಬೈ): ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಸರ್ವೀಸಸ್, ಅಸ್ಸಾಂ.
    ಬಿ (ಬೆಂಗಳೂರು): ಬಂಗಾಳ, ವಿದರ್ಭ, ಹರಿಯಾಣ, ಕೇರಳ, ತ್ರಿಪುರ, ರಾಜಸ್ಥಾನ.
    ಸಿ (ಕೋಲ್ಕತ): ಕರ್ನಾಟಕ, ಮುಂಬೈ, ದೆಹಲಿ, ಹೈದರಾಬಾದ್, ಮಹಾರಾಷ್ಟ್ರ, ಉತ್ತರಾಖಂಡ.
    ಡಿ (ಅಹಮದಾಬಾದ್): ಸೌರಾಷ್ಟ್ರ, ತಮಿಳುನಾಡು, ರೈಲ್ವೇಸ್, ಜಮ್ಮು-ಕಾಶ್ಮೀರ, ಜಾರ್ಖಂಡ್, ಗೋವಾ.
    ಇ (ತಿರುವನಂತಪುರ): ಆಂಧ್ರ, ಉತ್ತರ ಪ್ರದೇಶ, ಬರೋಡ, ಒಡಿಶಾ, ಛತ್ತೀಸ್‌ಗಢ, ಪುದುಚೇರಿ.
    ಪ್ಲೇಟ್ (ಚೆನ್ನೈ): ಚಂಡೀಗಢ, ಮೇಘಾಲಯ, ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ.

    ಬೆಂಗಳೂರಿನಲ್ಲಿ ರಣಜಿ ಲೀಗ್ ಪಂದ್ಯಗಳು
    ರಣಜಿ ಟ್ರೋಫಿಯ ಗುಂಪು ಹಂತದ ಪಂದ್ಯಗಳು ಬೆಂಗಳೂರು, ಮುಂಬೈ, ಕೋಲ್ಕತ, ಅಹಮದಾಬಾದ್, ತಿರುವನಂತಪುರ ಮತ್ತು ಚೆನ್ನೈನಲ್ಲಿ ನಡೆಯಲಿವೆ. ಕೋಲ್ಕತದಲ್ಲಿ ಫೆಬ್ರವರಿ 20ರಿಂದ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ. ಮಾರ್ಚ್ 16ರಿಂದ 20ರವರೆಗೆ ರಣಜಿ ಫೈನಲ್ ಕೂಡ ಕೋಲ್ಕತದಲ್ಲೇ ನಡೆಯಲಿದೆ. ಮುಷ್ತಾಕ್ ಅಲಿ ಟ್ರೋಫಿಯ ಲೀಗ್ ಪಂದ್ಯಗಳು ಲಖನೌ, ಗುವಾಹಟಿ, ಬರೋಡ, ದೆಹಲಿ, ಹರಿಯಾಣ ಮತ್ತು ವಿಜಯವಾಡದಲ್ಲಿ ನಡೆಯಲಿದ್ದು, ನಾಕೌಟ್ ಪಂದ್ಯಗಳು ದೆಹಲಿಯಲ್ಲಿ ನಿಗದಿಯಾಗಿವೆ. ವಿಜಯ್ ಹಜಾರೆ ಟ್ರೋಫಿಯ ತಾಣಗಳು ಇನ್ನೂ ಅಂತಿಮಗೊಂಡಿಲ್ಲ.

    2 ಹೊಸ ಐಪಿಎಲ್ ತಂಡಗಳಿಗೆ ಬಿಡ್ ಆಹ್ವಾನಿಸಿದ ಬಿಸಿಸಿಐ, ಮೂಲಬೆಲೆ ಎಷ್ಟು ಗೊತ್ತೇ?

    ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜಿನಲ್ಲಿ ಕನ್ನಡಿಗರಿಗೆ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts