More

    ಜೂ. ಹಾಕಿ ವಿಶ್ವಕಪ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಭಾರತ; ಪ್ರಶಸ್ತಿ ಗೆದ್ದ ಅರ್ಜೆಂಟೀನಾ

    ಭುವನೇಶ್ವರ: ಹಾಲಿ ಚಾಂಪಿಯನ್ ತಂಡವಾಗಿ ಅಭಿಯಾನ ಆರಂಭಿಸಿದ್ದ ಆತಿಥೇಯ ಭಾರತ ತಂಡ ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಂಚಿನ ಪದಕಕ್ಕಾಗಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 1-3 ಗೋಲುಗಳಿಂದ ಫ್ರಾನ್ಸ್ ವಿರುದ್ಧ ಸೋಲು ಅನುಭವಿಸಿತು.

    ಫ್ರಾನ್ಸ್ ನಾಯಕ ಟಿಮೊಥೀ ಕ್ಲೆಮೆಂಟ್ (26, 34, 47ನೇ ನಿಮಿಷ) ಹ್ಯಾಟ್ರಿಕ್ ಗೋಲು ಸಿಡಿಸಿ ಭಾರತಕ್ಕೆ ಆಘಾತ ನೀಡಿದರು. ಭಾರತ ಪರ ಸುದೀಪ್ ಚಿರ್ಮಾಕೊ 42ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು. ಟೂರ್ನಿಯ ಮೊದಲ ಪಂದ್ಯದಲ್ಲೂ ವಿವೇಕ್ ಸಾಗರ್ ಪ್ರಸಾದ್ ಪಡೆ ಫ್ರಾನ್ಸ್ ವಿರುದ್ಧ ಆಘಾತ ಎದುರಿಸಿತ್ತು. ಇದಕ್ಕೆ ಮುನ್ನ ಸೆಮೀಸ್‌ನಲ್ಲಿ ಭಾರತ, ಜರ್ಮನಿಗೆ ಮಣಿದಿತ್ತು.

    ಅರ್ಜೆಂಟೀನಾ ವಿಶ್ವಕಪ್ ಚಾಂಪಿಯನ್
    ಅರ್ಜೆಂಟೀನಾ ತಂಡ ಫೈನಲ್ ಪಂದ್ಯದಲ್ಲಿ 6 ಬಾರಿಯ ಚಾಂಪಿಯನ್ ಜರ್ಮನಿಗೆ 4-2ರಿಂದ ಸೋಲುಣಿಸಿ ಕಿರಿಯರ ವಿಶ್ವಕಪ್ ಹಾಕಿ ಪ್ರಶಸ್ತಿ ಜಯಿಸಿತು. 2005ರಲ್ಲಿ ಮೊದಲ ಬಾರಿ ವಿಶ್ವಕಪ್ ಗೆದ್ದಿದ್ದ ಅರ್ಜೆಂಟೀನಾಗೆ ಇದು 2ನೇ ಪ್ರಶಸ್ತಿ ಜಯವಾಗಿದೆ. ಲೌಟರೊ ಡೊಮೆನ್ ಹ್ಯಾಟ್ರಿಕ್ ಗೋಲು ಬಾರಿಸಿ ಅರ್ಜೆಂಟೀನಾ ಗೆಲುವಿನ ರೂವಾರಿ ಎನಿಸಿದರು.

    ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡಕ್ಕೆ 13-0 ಜಯ
    ಡ್ರಾೃಗ್ ಫ್ಲಿಕರ್ ಗುರ್ಜಿತ್ ಕೌರ್ (2, 14, 24, 25, 58ನೇ ನಿಮಿಷ) ಸಿಡಿಸಿದ 5 ಗೋಲುಗಳ ನೆರವಿನಿಂದ ಭಾರತ ತಂಡ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಥಾಯ್ಲೆಂಡ್ ವಿರುದ್ಧ 13-0ಯಿಂದ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಕಂಡಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4 ಗೋಲು ಸಿಡಿಸಿ ಮಿಂಚಿದ್ದ ಗುರ್ಜಿತ್ ಕೌರ್, ಪಂದ್ಯದ 2ನೇ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ ಭಾರತದ ಆಟಗಾರ್ತಿಯರು ಥಾಯ್ಲೆಂಡ್ ಗೋಲು ಪೆಟ್ಟಿಗೆಯ ಮೇಲೆ ನಿರಂತರ ದಾಳಿ ನಡೆಸಿದರು. ಲಿಲಿಮಾ (14, 24) ಮತ್ತು ಜ್ಯೋತಿ (15, 36) ತಲಾ 2 ಗೋಲು ಸಿಡಿಸಿದರೆ, ವಂದನಾ ಕಟಾರಿಯ (7), ರಾಜ್‌ವಿಂದರ್ (16), ಸೋನಿಕಾ (43) ಮತ್ತು ಮೋನಿಕಾ (55) ತಲಾ 1 ಗೋಲು ಬಾರಿಸಿದರು. ಟೋಕಿಯೊ ಒಲಿಂಪಿಕ್ಸ್ ಬಳಿಕ ಭಾರತದ ಮಹಿಳೆಯರು ಆಡಿದ ಮೊದಲ ಪಂದ್ಯ ಇದಾಗಿತ್ತು. ನಾಯಕಿ ರಾಣಿ ರಾಂಪಾಲ್‌ಗೆ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದ್ದು, ಗೋಲು ಕೀಪರ್ ಸವಿತಾ ಹಂಗಾಮಿ ನಾಯಕಿಯಾಗಿದ್ದಾರೆ. ಭಾರತ ತನ್ನ 2ನೇ ಪಂದ್ಯದಲ್ಲಿ ಸೋಮವಾರ ಮಲೇಷ್ಯಾ ವಿರುದ್ಧ ಆಡಬೇಕಿತ್ತು. ಆದರೆ ಮಲೇಷ್ಯಾ ತಂಡದ ಆಟಗಾರ್ತಿಯೊಬ್ಬರು ಪಾಸಿಟಿವ್ ಆಗಿರುವುದರಿಂದ ಪಂದ್ಯ ಮುಂದೂಡಲ್ಪಟ್ಟಿದೆ.

    VIDEO| 2002ರಲ್ಲಿ ಪರ್ಫೆಕ್ಟ್ 10 ಸನಿಹ ಬಂದಿದ್ದ ಮುರಳೀಧರನ್‌ಗೆ ನಿರಾಸೆ ತಂದಿದ್ದು ಯಾರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts