More

    ಮನುಷ್ಯರನ್ನು ಮಿಸ್​ ಮಾಡಿಕೊಳ್ಳುತ್ತಿವೆ ಡಾಲ್ಫಿನ್​ಗಳು, ಗಿಫ್ಟ್​ ತಂದುಕೊಟ್ಟು ನಮ್ಮೊಂದಿಗೆ ಆಟವಾಡಿ ಎನ್ನುತ್ತಿವೆ…!

    ಸಮುದ್ರತಟದ ವಿಹಾರಕ್ಕೆ ಹೋದಾಗ ಅಲ್ಲಿರುವ ಬೋಟುಗಳ ಮಾಲೀಕರು ಸಮುದ್ರದೊಳಗೆ ನಮ್ಮನ್ನು ಕರೆದೊಯ್ದು ಡಾಲ್ಫಿನ್​ಗಳನ್ನು ತೋರಿಸುತ್ತಾರೆ. ಶಿಳ್ಳೆ ಹೊಡೆದು ಅವನ್ನು ಕರೆದು ಆಟವಾಡಿಸಿ, ತಿನ್ನಲು ಏನಾದರೂ ಕೊಡುತ್ತಾರೆ. ಯಾವುದೇ ದೇಶದ ಸಮುದ್ರ ತಟಗಳಿಗೂ ಹೋದರೂ ಇದು ಸಾಮಾನ್ಯ.

    ಮನುಷ್ಯರನ್ನು ಮಿಸ್​ ಮಾಡಿಕೊಳ್ಳುತ್ತಿವೆ ಡಾಲ್ಫಿನ್​ಗಳು, ಗಿಫ್ಟ್​ ತಂದುಕೊಟ್ಟು ನಮ್ಮೊಂದಿಗೆ ಆಟವಾಡಿ ಎನ್ನುತ್ತಿವೆ...!

    ಆದರೆ, ಕೋವಿಡ್​-19 ಲಾಕ್​ಡೌನ್​ನಿಂದಾಗಿ ಜನರು ಮನೆಯಿಂದ ಹೊರಬರುವುದೇ ಅಪರೂಪವಾಗುತ್ತಿದೆ. ಸಮುದ್ರ ತಟಗಳಿಗೆ ವಿಹಾರಕ್ಕೆ ಹೋಗುವುದನ್ನೂ ನಿರ್ಬಂಧಿಸಲಾಗಿದೆ. ಹೀಗಾಗಿ ಸಮುದ್ರದಲ್ಲಿರುವ ಡಾಲ್ಫಿನ್​ಗಳು ಮನುಷ್ಯರ ಒಡನಾಟವನ್ನು ಮಿಸ್​ ಮಾಡಿಕೊಳ್ಳಲಾರಂಭಿಸಿವೆ. ತಮ್ಮನ್ನು ನೋಡಲು ಏಕೋ ಬರುತ್ತಿಲ್ಲ ಎಂದು ಬೇಸರಿಸಿಕೊಂಡು, ಆಳ ಸಮುದ್ರಕ್ಕೆ ಹೋಗಿ ಅಲ್ಲಿ ಸಿಗುವ ಶಂಖು, ಹವಳ ಮತ್ತಿತರ ವಸ್ತುಗಳನ್ನು ದಡಕ್ಕೆ ತಂದು ಅಲ್ಲಿ ಕಾಣಿಸುವ ತಟರಕ್ಷಕರಿಗೆ ಕೊಟ್ಟು, ನಮ್ಮೊಂದಿಗೆ ಆಟವಾಡಿ… ನಮಗೂ ಒಂದಷ್ಟು ಆಹಾರ ಕೊಡಿ ಎಂದು ಕೇಳುತ್ತಿವೆಯಂತೆ!

    ಮನುಷ್ಯರನ್ನು ಮಿಸ್​ ಮಾಡಿಕೊಳ್ಳುತ್ತಿವೆ ಡಾಲ್ಫಿನ್​ಗಳು, ಗಿಫ್ಟ್​ ತಂದುಕೊಟ್ಟು ನಮ್ಮೊಂದಿಗೆ ಆಟವಾಡಿ ಎನ್ನುತ್ತಿವೆ...!

    ಇದು ಆಸ್ಟ್ರೇಲಿಯಾದ ಕ್ವೀನ್ಸ್​ ಲ್ಯಾಂಡ್​ನ ಟಿನ್​ ಕ್ಯಾನ್​ ಬೇ ಎಂಬ ಸಮುದ್ರ ತಟದಲ್ಲಿ ಕಂಡುಬರುತ್ತಿರುವ ದೃಶ್ಯ ಎಂದು ತಟರಕ್ಷಕ ಲ್ಯಾನ್​ ಮೆಕ್​ಪೆರ್ಸನ್​ ಎಂಬುವರು ಫೇಸ್​ಬುಕ್​ನಲ್ಲಿ ಫೋಟೋ ಸಮೇತ ಮಾಹಿತಿ ನೀಡಿದ್ದಾರೆ.

    ಮಿಸ್ಟಿಕ್​ ಎಂಬ ಹೆಸರಿನ 29 ವರ್ಷದ ಡಾಲ್ಫಿನ್​ ತನ್ನ ಗುಂಪಿನೊಂದಿಗೆ ವಿವಿಧ ವಸ್ತುಗಳೊಂದಿಗೆ ಬರುತ್ತಿದೆ. ಅವುಗಳನ್ನು ಕೊಟ್ಟು, ಒಂದು ಮೀನನ್ನು ಪಡೆದುಕೊಂಡು ಹೋಗುತ್ತದೆ. ಈ ರೀತಿ ನಡೆದುಕೊಳ್ಳಲು ನಾವು ಇವುಗಳಿಗೆ ಯಾವುದೇ ತರಬೇತಿ ನೀಡಿಲ್ಲ. ಆದರೆ, ಈಗ ಅವು ಮನುಷ್ಯರನ್ನು ಮಿಸ್​ ಮಾಡಿಕೊಂಡು, ಹೀಗೆ ನಮಗೇ ವಿಭಿನ್ನವಾದ ತರಬೇತಿ ನೀಡುತ್ತಿವೆ ಎಂದು ಲ್ಯಾನ್​ ಮೆಕ್​ಪೆರ್ಸನ್​ ಹೇಳಿದ್ದಾರೆ.
    ಮಿಸ್ಟಿಕ್​ ಡಾಲ್ಫಿನ್​ ಬಳಿ ಉಡುಗೊರೆಗಳ ದೊಡ್ಡ ಸಂಗ್ರಹವೇ ಇದ್ದಂತಿದೆ. ಅದು ಒಮ್ಮೊಮ್ಮೆ ದಿನಕ್ಕೆ ಹತ್ತಾರು ಉಡುಗೊರೆ ತಂದುಕೊಡುತ್ತದೆ ಎಂದು ಅವರು ತಿಳಿಸಿದ್ದಾರೆ.

    ಮನುಷ್ಯರನ್ನು ಮಿಸ್​ ಮಾಡಿಕೊಳ್ಳುತ್ತಿವೆ ಡಾಲ್ಫಿನ್​ಗಳು, ಗಿಫ್ಟ್​ ತಂದುಕೊಟ್ಟು ನಮ್ಮೊಂದಿಗೆ ಆಟವಾಡಿ ಎನ್ನುತ್ತಿವೆ...!

    ಫೇಸ್​ಬುಕ್​ನಲ್ಲಿ ಇವರು ಹಾಕಿರುವ ಹತ್ತಾರು ಫೋಟೋಗಳನ್ನು ನೋಡಿ ಜನರು ಡಾಲ್ಫಿನ್​ಗಳ ಮೇಲೆ ಫುಲ್​ ಫಿದಾ ಆಗಿದ್ದಾರೆ. ನಾವು ಕೂಡ ಸಮುದ್ರತಟದ ಬಳಿ ಇರುವಂತೆ ಆಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

     

     

    ಮನುಷ್ಯರನ್ನು ಮಿಸ್​ ಮಾಡಿಕೊಳ್ಳುತ್ತಿವೆ ಡಾಲ್ಫಿನ್​ಗಳು, ಗಿಫ್ಟ್​ ತಂದುಕೊಟ್ಟು ನಮ್ಮೊಂದಿಗೆ ಆಟವಾಡಿ ಎನ್ನುತ್ತಿವೆ...!

    ಚಂಡಮಾರುತದಲ್ಲಿ ಬುಡಮೇಲಾಗಿದ್ದ ಮರದ ಮರುನಾಟಿ, ಸೌರವ್​ ಗಂಗೂಲಿ ದಿ ಹೀರೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts