More

    “ಡೋಲೋ 650 ಮಾತ್ರೆ, ಬಿಸಿ ರಾಗಿ ಮುದ್ದೆ” ಖ್ಯಾತಿ ಶಶಿರೇಖಾ ಈಗ ಕನ್ನಡ ಸಿನಿಮಾ ಹೀರೋಯಿನ್

    ಬೆಂಗಳೂರು: ಕೊರೊನಾ ಸೋಂಕಿನಿಂದ ಜನರು ಆತಂಕಕ್ಕೆ ಒಳಗಾಗಿದ್ದ ವೇಳೆ ಅವಧಿಯಲ್ಲಿ ಗ್ರಾಮೀಣ ಶೈಲಿಯಲ್ಲಿ ‘ಕರೊನಾ ಹೋಗಬೇಕು ಅಂದ್ರೆ ಡೋಲೋ 650 ಮಾತ್ರೆ, ಬಿಸಿ ರಾಗಿಮುದ್ದೆ ತಿಂದ್ರೆ ಸಾಕು’ ಎಂದು ಹೇಳಿದ್ದ ಶಶಿರೇಖಾ ಡೈಲಾಗ್​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿತ್ತು. ಸೋಶಿಯಲ್​​ ಮೀಡಿಯಾದಲ್ಲಿ ಹವಾ ಕ್ರೀಯೆಟ್​ ಮಾಡಿದ್ದ ಶಶಿರೇಖಾಗೆ ಲಕ್ಕು ಕುಲಾಯಿಸಿದ್ದು, ಸಿನಿಮಾಗೆ ನಟಿಯಾಗಿ ಆಯ್ಕೆ ಯಾಗಿದ್ದಾರೆ.

    ಇದೀಗ ಈ ಮಹಿಳೆ ಖ್ಯಾತಿ ಸೋಶಿಯಲ್​ ಮೀಡಿಯಾಗೆ ಮಾತ್ರ ಸಿಮೀತವಾಗಿದ್ದ ಈಕೆ ಟ್ಯಾಲಂಟ್​​ ತೆರೆ ಮೇಲೆ ಮೋಡಿ ಮಾಡಲು ಸಿದ್ಧವಾಗಿದ್ದಾಳೆ. ಶಶಿರೇಖಾ ಅವರು ನಟಿಸುತ್ತಿರುವ ಮೊದಲ ಚಿತ್ರದ ಶೀರ್ಷಿಕೆಯನ್ನು ಮೈಸೂರಿನ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ‘ಸೌಜನ್ಯ’ ಹೆಸರಿಡಲಾಗಿದ್ದು, ಇದು ಆರಂಭ ಮಾತ್ರ ಅಂತ್ಯವಲ್ಲ ಎಂಬ ಅಡಿಬರಹ ನೀಡಲಾಗಿದೆ. ಹೆಚ್‌.ಡಿ.ಕೋಟೆ ಮೂಲದ ಚೇತನ್ ದೇವರಾಜ್ ಅವರು ಕಥೆ, ಚಿತ್ರಕಥೆ, ನಿರ್ದೇಶನ ಮಾಡುತ್ತಿದ್ದಾರೆ. ದೋಸ್ತಿ ಕ್ರಿಯೇಷನ್ಸ್‌ ನಿರ್ಮಾಣ ಮಾಡುತ್ತಿದೆ. ಸೌಜನ್ಯ ಚಿತ್ರದ ಹೆಸರನ್ನು ಕೇಳಿದರೆ ಇದು ಅತ್ಯಾಚಾರ ಪ್ರಕಣದ ಕಥಾ ಹಂದರವನ್ನು ಹೊಂದಿದ ಚಿತ್ರ ಎಂದು ಊಹಿಸಬಹುದು.

    ಕೊರೊನಾ ಅವಧಿಯಲ್ಲಿ ಎಲ್ಲರೂ ಭಯಭೀತರಾಗಿ ಕೋವಿಡ್ ಲಸಿಕೆ ಹಾಗೂ ಮಾಸ್ಕ್‌ ಧರಿಸಿ ಓಡಾಡುತ್ತಿದ್ದರು. ಆದರೆ, ಶಶಿರೇಖಾ ಅವರು ಕೊರೊನಾ ಹೋಗಬೇಕಂದ್ರೆ ಏನೂ ಮಾಡಬೇಕಿಲ್ಲ. ಡೋಲೋ 650 ಮಾತ್ರೆ, ಬಿಸಿ ರಾಗಿ ಮುದ್ದೆ ತಿಂದ್ರೆ ಸಾಕು ಎಂದು ಹೇಳಿದ್ದರು.ಶಶಿರೇಖಾ ಅವರು ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡುವಾಗ ನೀಡಿದ ಹೇಳಿ ರಾಜ್ಯಾದ್ಯಂತ ಭಾರಿ ವೈರಲ್ ಆಗಿತ್ತು. ಇದಾದ ಕೆಲವು ದಿನಗಳು ಶಶಿರೇಖಾ ಎಲ್ಲೇ ಸಿಕ್ಕರೂ ಡೋಲೋ 650 ಎಂದು ಕರೆಯುತ್ತಿದ್ದರು.

    ತನ್ನ ಆಪ್ತರ ಸಲಹೆಗಳನ್ನು ಪಡೆದ ಶಶಿರೇಖಾ ತನ್ನ ವರಸೆಯನ್ನೇ ಬದಲಿಸಿದಳು. ಡೋಲೋ 650 ಎನ್ನುವುದನ್ನೇ ತನ್ನ ಗುರುತನ್ನಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ ಪ್ರವೇಶ ಕೊಟ್ಟರು. ಸಾಮಾಜಿಕ ಜಾಲತಾಣಗಳಾದ ಯ್ಯೂಟೂಬ್ ಮತ್ತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿ ಒಂದೊಂದೇ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾ ಬಂದರು. ಈಗ ಶಶಿರೇಖಾ ಅವರಿಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ 1.75 ಲಕ್ಷ  ಫಾಲೋವರ್ಸ್‌ಗಳಿದ್ದಾರೆ.

    ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿ ಆಡಿ ಬೆಳೆದ ನಟಿ ಈಗ ಕ್ರೈಸ್ತ ಧರ್ಮದ ಕೌನ್ಸಿಲರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts