More

    ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡ್ತಾರಾ ಟ್ರಂಪ್​? ಆ ಅಧಿಕಾರ ಅವರಿಗೆ ಇದೆಯಾ?

    ವಾಷಿಂಗ್ಟನ್​: ಕರೊನಾ ಸೋಂಕು ಜಗತ್ತನೇ ತಲ್ಲಣಗೊಳಿಸಿರುವ ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯೂ ಸಮೀಪಿಸುತ್ತಿದೆ. 2020ರ ಈ ಚುನಾವಣೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೂಡ್ತಾರಾ? ಹಾಗೊಂದು ಅಧಿಕಾರ ಅವರಿಗೆ ಇದೆಯಾ? ಅವರ ನಡೆ ಏನಿರಬಹುದು ಎಂಬಿತ್ಯಾದಿ ಕುತೂಹಲ ಕಾಡಿದೆ.

    ಇಂತಹ ಕುತೂಹಲದ ಪ್ರಶ್ನೆಗೆ ಕಾನೂನಿನಲ್ಲಿ ಇರುವ ಉತ್ತರ ಏನು ಗೊತ್ತ? ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವ ಅಥವಾ ರದ್ದುಮಾಡುವ ಅಧಿಕಾರ ಅಮೆರಿಕದ ಅಧ್ಯಕ್ಷರಿಗೆ ಇರುವುದಿಲ್ಲ.

    ಅಮೆರಿಕದ ಸಂವಿಧಾನ ಹೇಳುವ ಪ್ರಕಾರ, ಅಮೆರಿಕದ ಉದ್ದಗಲಕ್ಕೂ ಮತದಾನ ಯಾವಾಗ ನಡೆಯಬೇಕು? ಎಲೆಕ್ಟರ್ಸ್​ ಅನ್ನು ಯಾವ ಸಮಯದಲ್ಲಿ ಆಯ್ಕೆ ಮಾಡಬೇಕು ಎಂಬುದನ್ನು ನಿರ್ಣಯಿಸುವ ಅಧಿಕಾರ ಇರುವುದು ಅಲ್ಲಿನ ಕಾಂಗ್ರೆಸ್​ಗೆ.

    ಅಧ್ಯಕ್ಷ ಸ್ಥಾನದಲ್ಲಿರುವವರು ಕೆಲವೊಮ್ಮೆ ಸ್ವಹಿತಾಸಕ್ತಿಯನ್ನು ಕಾಪಾಡುವ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆಯಾದರೂ, ಕಾಂಗ್ರೆಸ್ ಆ ರೀತಿ ಮಾಡಲ್ಲ. ಸಂವಿಧಾನದತ್ತವಾಗಿ ಸಿಕ್ಕಿರುವ ಅಧಿಕಾರವನ್ನಷ್ಟೇ ಕಾಂಗ್ರೆಸ್ ಚಲಾಯಿಸುತ್ತದೆ. ಇದಕ್ಕೆ ಸಂಬಂಧಿಸಿದ ಕಾನೂನು 1948ರಲ್ಲಿ ಜಾರಿಗೆ ಬಂದಿದ್ದು ಅದು ಇಂತಿದೆ-

    ಪ್ರೆಸಿಡೆಂಟ್ ಮತ್ತು ವೈಸ್ ಪ್ರೆಸಿಡೆಂಟ್ ಅವರನ್ನು ನೇಮಕ ಮಾಡುವ ಎಲೆಕ್ಟರ್ಸ್​ ಅನ್ನು ಪ್ರತಿ ರಾಜ್ಯದಿಂದಲೂ ಆಯ್ಕೆ ಮಾಡುವ ಅವಧಿ ಸಾಮಾನ್ಯವಾಗಿ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನವೆಂಬರ್ ತಿಂಗಳ ಮೊದಲ ಸೋಮವಾರದ ನಂತರ ಬರುವ ಮಂಗಳವಾರ.

    ಹೀಗಿರುವಾಗ ಅಮೆರಿಕದ ಅಧ್ಯಕ್ಷೀಯ ಅವಧಿಯನ್ನು ಮುಂದೂಡುವ ನಿರ್ಣಯವನ್ನು ಅಲ್ಲಿನ ಕಾಂಗ್ರೆಸ್ಸೇ ತೆಗೆದುಕೊಳ್ಳಬೇಕಷ್ಟೆ. ಈ ಸಲ ಏನಾಗಬಹುದು ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ. (ಏಜೆನ್ಸೀಸ್)

    ಡ್ರಿಂಕ್ಸ್ ಖರೀದಿ, ಮಾರಾಟಕ್ಕೆ ಇದೆಯಾ ಅವಕಾಶ?- ಲಾಕ್​ಡೌನ್​2 ಮತ್ತು ಸಪ್ತಪದಿ ರಹಸ್ಯ…

    95 ಸಾವಿರ ರೂಪಾಯಿಗೆ ವಾಚ್ ಮಾರೋಕೆ ಹೋಗಿ ಒಂದೂ ಕಾಲು ಲಕ್ಷ ರೂಪಾಯಿ ಕಳಕೊಂಡ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts