More

    ಕರ್ನಾಟಕದಲ್ಲಿ ಪ್ರಧಾನಿ ಮೋದಿ ಜತೆ ನಟ ಅಕ್ಷಯ್​ ಕುಮಾರ್ ಉಪಸ್ಥಿತಿ?; ಕಾಲ್ ಮಾಡಿದ ಬಾಲಿವುಡ್ ‘ಖಿಲಾಡಿ’ ಹೇಳಿದ್ದೇನು?

    ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿ ಸದ್ಯದಲ್ಲೇ ಕರ್ನಾಟಕಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಅವರೊಂದಿಗೆ ಬಾಲಿವುಡ್ ನಟ ಅಕ್ಷಯ್​ಕುಮಾರ್ ಕೂಡ ಉಪಸ್ಥಿತರಿರಲಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ವಿಶೇಷವೆಂದರೆ ಈ ಕುರಿತು ಖುದ್ದು ಅಕ್ಷಯ್​ಕುಮಾರ್ ಕರೆ ಮಾಡಿ ಮಾತನಾಡಿದ್ದಾರೆ.

    ಧಾರವಾಡದಲ್ಲಿ ಜ.12ರಿಂದ 16ವರೆಗೆ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದ್ದು, ಈ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

    ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವ ಸಪ್ತಾಹದ ಭಾಗವಾಗಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಇದು ಐದು ದಿನಗಳ ಕಾಲ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಜೋಶಿ ತಿಳಿಸಿದರು.

    ದೇಶಾದ್ಯಂತದಿಂದ 7,500 ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲೂ 3,500 ಜನರು ನೇರವಾಗಿ ಭಾಗಿಯಾಗಲಿದ್ದಾರೆ. ಕರ್ನಾಟಕ ಕಾಲೇಜು ಆವರಣದಲ್ಲಿ ಹಲವಾರು ವೇದಿಕೆಗಳಲ್ಲಿ ಬಹುತೇಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ಥಳೀಯ ಕಲಾವಿದರಿಗೂ ಅವಕಾಶ ಇರಲಿದೆ ಎಂದು ಅವರು ಹೇಳಿದರು.

    ಈ ಉತ್ಸವದಲ್ಲಿ ದೇಶದ ಸಾಂಸ್ಕ್ರತಿಕ, ಭೂಗೋಳಿಕ ಐಕ್ಯತೆ ಇರಲಿದೆ. ವಿವಿಧತೆಯಲ್ಲಿ ಏಕತೆಯನ್ನು ಪ್ರತಿನಿಧಿಸುವ ಉತ್ಸವ ಇದಾಗಲಿದೆ. ಜ. 12ರಂದು ಮಧ್ಯಾಹ್ನ 1.30ಕ್ಕೆ‌ ಪ್ರಧಾನಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ಇರಲಿದೆ ಎಂದ ಜೋಶಿ, ಪ್ರಧಾನಿಯವರ ಕಾರ್ಯಕ್ರಮದ ಭದ್ರತೆಯೂ ಮುಖ್ಯವಾದ್ದರಿಂದ ಉದ್ಘಾಟನೆ ಸ್ಥಳ ಇನ್ನೂ ನಿಗದಿಯಾಗಿಲ್ಲ ಎಂದರು.

    ವಿಶೇಷವೆಂದರೆ ಈ ಯುವಜನೋತ್ಸವ ಕುರಿತ ಸುದ್ದಿಗೋಷ್ಠಿ ನಡೆಯುತ್ತಿರುವಾಗಲೇ ನಟ ಅಕ್ಷಯ್​ಕುಮಾರ್​ ಅವರಿಂದ ಜೋಶಿಗೆ ಕರೆ ಬಂದಿದೆ. ಈ ಉತ್ಸವಕ್ಕೆ ಅಕ್ಷಯ್​ಕುಮಾರ್​ ಅವರನ್ನು ಆಹ್ವಾನಿಸಲು ಜೋಶಿ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಈ ಕರೆ ಬಂದಿತ್ತು. ಉತ್ಸವವನ್ನು ಜ. 12ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದು, ತಾವು ಜ. 16ರಂದು ನಡೆಯುವ ಸಮಾರೋಪಕ್ಕೆ ಆಗಮಿಸುವಂತೆ ಜೋಶಿ ಕೋರಿದ್ದಕ್ಕೆ ಅಕ್ಷಯ್​ಕುಮಾರ್, ನಾನೂ ಜ. 12ರಂದೇ ಬರುತ್ತೇನೆ ಎಂದರು. ಆಗ ಪ್ರಧಾನಿ ಕಾರ್ಯಕ್ರಮದ ಭದ್ರತೆ ವಿಷಯ ಇರುತ್ತದೆ ಎಂದು ಜೋಶಿ ಹೇಳಿದರು. ಹೀಗಾಗಿ ಜ.12ರಂದು ಮೋದಿ ಜತೆ ಅಕ್ಷಯ್​ಕುಮಾರ್ ಉಪಸ್ಥಿತಿ ಕೂಡ ಇರಲಿದೆಯೇ ಎಂಬುದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

    ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts