More

    ವಿಜೃಂಭಣೆಯ ಕರಿಯಮ್ಮ, ದೊಡ್ಡಮ್ಮ ಜಾತ್ರೆ

    ಸಾಲಿಗ್ರಾಮ: ತಾಲೂಕಿನ ಭೇರ್ಯ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಿಡಿ ಉತ್ಸವ ಹಾಗೂ ಬುಧವಾರ ಶ್ರೀ ಕರಿಯಮ್ಮ, ದೊಡ್ಡಮ್ಮ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.


    ಜಾತ್ರಾ ಮಹೋತ್ಸವ ಸಮಿತಿಯಿಂದ ಈ ಬಾರಿ ವಿಶೇಷವಾಗಿ ಜಾತ್ರೋತ್ಸವ ನಡೆಸಲಾಯಿತು. ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಮಂಗಳವಾರ ರಾತ್ರಿ ನಡೆದ ಸಿಡಿ ಉತ್ಸವದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಗ್ರಾಮದ ದೊಡ್ಡ ಕೆರೆಯ ಹತ್ತಿರದಿಂದ ದೊಡ್ಡಮ್ಮ ಕರಿಯಮ್ಮ ದೇವಸ್ಥಾನದವರೆಗೆ ಸುಮಾರು ಒಂದೂವರೆ ಕಿಲೋ ಮೀಟರ್ ದೂರದವರೆಗೆ ಸಿಡಿ ಉತ್ಸವದ ಮೆರವಣಿಗೆ ಸಾಗಿತು.
    ಮೆರವಣಿಗೆಯಲ್ಲಿ ಸಿಡಿ ಗೋಪುರದಲ್ಲಿ ಅಡಕೆ ಮರವನ್ನು ಕಟ್ಟಿ ಅದಕ್ಕೆ ಬಾಳೆ ತೂಗುಗೊನೆ ಮತ್ತು ಅಡಕೆ ಹೊಂಬಾಳೆ ಕಟ್ಟುವ ಮೂಲಕ ಭಕ್ತರು ಹರಕೆ ತೀರಿಸಿದರು. ಕೆಲ ಭಕ್ತರು ಮುಡಿ, ಬಾಯಿ ಬೀಗ ಮತ್ತು ಮಹಿಳೆಯರು ತಂಬಿಟ್ಟಿನ ಆರತಿ ಸೇರಿದಂತೆ ವಿವಿಧ ಹರಕೆಗಳನ್ನು ತೀರಿಸಿ ದೇವಿಯ ಕೃಪೆಗೆ ಪಾತ್ರರಾದರು.


    ಬುಧವಾರ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ಕರಿಯಮ್ಮ ದೊಡ್ಡಮ್ಮ ಮತ್ತು ಪಕ್ಕದಲ್ಲಿರುವ ಪಿರಿಯಾಪಟ್ಟಣದ ಅಮ್ಮ ಹಾಗೂ ಪಟ್ಟಲದಮ್ಮ ಮತ್ತು ನವಗ್ರಹಗಳಿಗೆ ಪೂಜೆ ಸಲ್ಲಿಸಿದರು. ಜಾತ್ರೆಯಲ್ಲಿ ಸಿಹಿ ತಿಂಡಿಗಳನ್ನು ಖರೀದಿಸಲು ಜನರು ಮುಗಿಬಿದ್ದರು. ದೇವಿಯ ದರ್ಶನಕ್ಕೆ ಎಲ್ಲ ಸೌಲಭ್ಯವನ್ನು ಟ್ರಸ್ಟ್ ವತಿಯಿಂದ ಕಲ್ಪಿಸಲಾಗಿತ್ತು. ದಾನಿಗಳು ಬಿಸಿಲ ಬೇಗೆಯನ್ನು ತಣಿಸಿಕೊಳ್ಳಲು ಮಜ್ಜಿಗೆ, ತಂಪು ಪಾನೀಯ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts