More

    ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲಿ

    ಯಳಂದೂರು: ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸೇವೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್ ಹೇಳಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ತಿದ್ದುಪಡಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಸರ್ಕಾರಿ ನೌಕರರು ದೂರದೃಷ್ಟಿಯಿಂದ ಕೆಲಸ ಮಾಡಬೇಕು, ತಮ್ಮ ಅವಧಿಯಲ್ಲಿ ರಾಜಕೀಯೇತರ, ಜಾತ್ಯತೀತ, ಧರ್ಮಾತೀತವಾಗಿ ತಮ್ಮ ಕಾಯಕ ನಿರ್ವಹಿಸಬೇಕು. ಸರ್ಕಾರಿ ಕೆಲಸ ನಮ್ಮ ಯೋಗ್ಯತೆಯಿಂದ ಲಭಿಸುತ್ತದೆ. ಇದನ್ನು ಪಡೆದುಕೊಂಡ ಮೇಲೆ ಯಾವುದೇ ಆಮಿಷಗಳಿಗೆ ಒಳಪಡಬಾರದು, ನಮ್ಮ ಯೋಗ್ಯತೆಗೆ ಅನುಸಾರವಾಗಿ ಸರ್ಕಾರ ನಮಗೆ ಸಂಬಳ ನೀಡುತ್ತದೆ. ಇದು ಸಾರ್ವಜನಿಕರ ದುಡ್ಡಾಗಿರುತ್ತದೆ. ಇದಕ್ಕೆ ತಕ್ಕ ನಿಷ್ಠೆಯನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

    ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಲ್ಲೇ ಆದಲ್ಲಿ ಆರ್‌ಟಿಐ ಕಾರ್ಯಕರ್ತರಿಗೆ ಕೆಲಸ ಇಲ್ಲದಂತಾಗುತ್ತದೆ. ವಿನಾಕಾರಣ ಕೆಲಸ ಮಾಡಿಕೊಡಲು ಬಡ, ಕೂಲಿ ಕಾರ್ಮಿಕರನ್ನು ಅಲೆಸಬೇಡಿ, ಇದು ಮಾನವಹಕ್ಕುಗಳ ಶೋಷಣೆಯಾಗುತ್ತದೆ. ಮುಂದಿನ ಪೀಳಿಗೆಗೆ ಇರುವ ಸರ್ಕಾರಿ ಸ್ವತ್ತುಗಳನ್ನು ಜೋಪಾನ ಮಾಡುವ ಕೆಲಸ ಮಾಡಬೇಕು. ಯಾವುದೇ ಒತ್ತಡಕ್ಕೂ ಮಣಿಯಬಾರದು. ಲಂಚ ಎನ್ನುವುದು ಭಿಕ್ಷೆಯಾಗಿದ್ದು ಇದರಿಂದ ದೂರವಿರಬಾರದು ಎಂದರು.

    ನಮ್ಮ ಜಿಲ್ಲೆಯಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಇನ್ನೂ ಇದ್ದು, ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಇದಕ್ಕೆ ಕೈ ಜೋಡಿಸಬೇಕು. ಸಮಾಜದಲ್ಲಿರುವ ಮೂಢ ನಂಬಿಕೆ ಹೋಗಲಾಡಿಸಲು ಇಲಾಖೆಗಳೊಂದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮವನ್ನು ಜಿಪಂ ಉಪಕಾರ್ಯದರ್ಶಿ ಪಿ.ಲಕ್ಷ್ಮೀ ಉದ್ಘಾಟಿಸಿದರು. ತಹಸೀಲ್ದಾರ್ ಜಯಪ್ರಕಾಶ್, ಇಒ ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಬಿಇಒ ಕೆ.ಕಾಂತರಾಜು, ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಪಪಂ ಸದಸ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts