More

    ಫ್ಲೈಓವರ್​ಗಾಗಿ ಪಾಲಿಕೆ ಆಸ್ತಿ ಮಾರಬೇಡಿ

    ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದಲ್ಲಿ ನಿರ್ವಿುಸಲು ಉದ್ದೇಶಿಸಿರುವ ಫ್ಲೈಓವರ್​ಗೆ ಹಣ ಹೊಂದಿಸಲು ಮಹಾನಗರ ಪಾಲಿಕೆಯ ಆಸ್ತಿ ಮಾರಾಟ ಮಾಡಲು ಮುಂದಾಗಿರುವ ಅಧಿಕಾರಿಗಳ ಕ್ರಮ ಖಂಡಿಸಿ ನವನಗರದ ವಲಯ ಕಚೇರಿ 4ರ ಎದುರು ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

    ನವನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಸರಿಯಾದ ರಸ್ತೆಗಳಿಲ್ಲ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂಬ ನೆಪ ಹೇಳುವ ಮಹಾನಗರ ಪಾಲಿಕೆ ತನ್ನ ಆಸ್ತಿ ಮಾರಾಟ ಮಾಡಿ ಫ್ಲೈಓವರ್​ಗೆ ಬಳಸುವುದು ಸರಿಯಲ್ಲ. ಸರ್ಕಾರ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು. ಪಾಲಿಕೆ ಆಸ್ತಿಯನ್ನು ಮೂಲ ಸೌಲಭ್ಯ ಒದಗಿಸಲು ಬಳಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಆಸ್ತಿ ಮಾರಾಟ ಮಾಡಲು ಮುಂದಾದ ಪಾಲಿಕೆ ವಿರುದ್ಧ ಫಲಕ ಹಿಡಿದು ಘೋಷಣೆ ಕೂಗಿದರು. ಪಾಲಿಕೆ ಆಸ್ತಿ ಮಾರಾಟ ನಿರ್ಧಾರದಿಂದ ಅಧಿಕಾರಿಗಳು ಹಿಂದೆ ಸರಿಯಬೇಕು. ಇಲ್ಲದಿದ್ದರೆ ಗಂಭೀರ ಹೋರಾಟ ನಡೆಸುವುದಾಗಿ ಪಾಲಿಕೆ ಮಾಜಿ ಸದಸ್ಯೆ ದೀಪಾ ಗೌರಿ ಎಚ್ಚರಿಸಿದರು.

    ಪಾಲಿಕೆ ಮಾಜಿ ಸದಸ್ಯ ಕರಿಯಪ್ಪ ಬೀಸಗಲ್ಲ, ನಾಗರಾಜ ಗೌರಿ, ಹನುಮಂತ ಕೊರವರ, ಷಣ್ಮುಖ ಬೆಟಗೇರಿ, ರಮೇಶ ಅಸುಂಡಿ, ಜ್ಯೋತಿ ವಾಲಿಕಾರ, ಲಕ್ಷ್ಮಿ, ಅಕ್ಕಮ್ಮ ಕಂಬಳಿ, ವೀರಣ್ಣ ನೀರಲಗಿ, ರಫೀಕ ಸಾವಂತನವರ, ಬಸವರಾಜ ಶಿಸನಳ್ಳಿ, ಇತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts