More

    ಅಧಿಕಾರಿಗಳಿಗೆ ನಿವೃತ್ತಿ ಬಳಿಕ ಸರ್ಕಾರಿ ನಿವಾಸದಲ್ಲಿ ಉಳಿಯಲು ಬಿಡಬೇಡಿ.. ಹೈಕೋರ್ಟ್​ ಸೂಚನೆ..

    ಸರ್ಕಾರಿ ಅಧಿಕಾರಿಗಳು ನಿವೃತ್ತಿ ಬಳಿಕವೂ ಸರ್ಕಾರದ ನಿವಾಸದಲ್ಲೇ ತಿಂಗಳು-ವರ್ಷಗಟ್ಟಲೆ ವಾಸ್ತವ್ಯ ಮುಂದುವರಿಸುವುದು ಹೊಸ ವಿಷಯವೇನಲ್ಲ. ಅಂಥ ಹಲವು ಪ್ರಕರಣಗಳು ಇವೆ. ಈಗ ಅದಕ್ಕೆ ಕಡಿವಾಣ ಹಾಕಲು ನ್ಯಾಯಾಲಯವೇ ಮುಂದಾಗಿದೆ.

    ಅಧಿಕಾರಿಗಳು ನಿವೃತ್ತಿ ಆದ ಮೇಲೆ ಜಾಸ್ತಿ ದಿನ ಸರ್ಕಾರಿ ಬಂಗಲೆ ಅಥವಾ ನಿವಾಸದಲ್ಲಿ ವಾಸ್ತವ್ಯ ಮುಂದುವರಿಸಲು ಅವಕಾಶ ನೀಡಬಾರದು ಎಂದು ಹೈಕೋರ್ಟ್​ ಸೂಚನೆ ನೀಡಿದೆ. ಮಾತ್ರವಲ್ಲ ನಿಯೋಜಿತ ಅಧಿಕಾರಿ ತನ್ನ ಕಾರ್ಯವ್ಯಾಪ್ತಿಯಲ್ಲಿ ಮನೆ ಹೊಂದಿದ್ದರೆ ಸರ್ಕಾರದ ವತಿಯಿಂದ ಮತ್ತೆ ಪ್ರತ್ಯೇಕವಾಗಿ ವಸತಿ ನೀಡಬಾರದು ಎಂಬುದಾಗಿಯೂ ಉಚ್ಚ ನ್ಯಾಯಾಲಯ ಹೇಳಿದೆ.

    ಸರ್ಕಾರಿ ಅಧಿಕಾರಿಗಳು ನಿವೃತ್ತಿ ಬಳಿಕವೂ ಸರ್ಕಾರ ನೀಡಿದ್ದ ವಸತಿಯನ್ನು ಖಾಲಿ ಮಾಡದಿರುವ ಬಗ್ಗೆ ಸಲ್ಲಿಕೆಯಾಗಿದ್ದ ಪಿಐಎಲ್​ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್​ ಮತ್ತು ನ್ಯಾಯಮೂರ್ತಿ ಪ್ರತೀಕ್​ ಜಲನ್ ಅವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ಈ ಸೂಚನೆ ನೀಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts