More

    8 ಸಾವಿರ ಸ್ಥಳಗಳಲ್ಲಿ 4 ಲಕ್ಷ ಜನರಿಂದ ಡಿಕೆಶಿ ಪದಗ್ರಹಣ ವೀಕ್ಷಣೆಗೆ ವ್ಯವಸ್ಥೆ!

    ಹಾವೇರಿ: ಕೆಪಿಸಿಸಿ ಅಧ್ಯಕ್ಷರಾಗಿ ಜೂನ್ 7ರಂದು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದು, ಈ ಸಮಾರಂಭವನ್ನು ಕಾಂಗ್ರೆಸ್ ಕಾರ್ಯಕರ್ತರು ನೇರ ವೀಕ್ಷಣೆ ಮಾಡಲು ಅನುವಾಗುವಂತೆ ರಾಜ್ಯದ 8 ಸಾವಿರ ಸ್ಥಳಗಳಲ್ಲಿ ವ್ಯವಸ್ಥೆ ಏರ್ಪಾಟಾಗಲಿದೆ.

    ಇದನ್ನೂ ಓದಿ: ನಿಸಾರ್ ಅಹಮದ್ ಶಿಕ್ಷಣ ಟ್ರಸ್ಟ್‌ಗೆ 2 ಎಕರೆ ಭೂಮಿ: ಸಚಿವ ಸಂಪುಟ ಅಸ್ತು

    ಕರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರನ್ನು ಸೇರಿಸುವುದಿಲ್ಲ. ಸೇರಿಸಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಕರೊನಾ ಸಂಬಂಧಿತ ನಿಯಮಗಳನ್ನು ಪಾಲಿಸುವುದು ಕಷ್ಟವಾಗುತ್ತದೆ.

    ಹೀಗಾಗಿ ರಾಜ್ಯಾದ್ಯಂತ 8 ಸಾವಿರ ಕಡೆಗಳಲ್ಲಿ ಜನರಿಗೆ ನೇರವಾಗಿ ದೊಡ್ಡ ದೊಡ್ಡ ಟಿವಿ ಪರದೆಗಳಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು.

    ಇದನ್ನೂ ಓದಿ: ಮಾವಿನ ಹಣ್ಣಿನಿಂದ ಕರೊನಾ ಬರೋದಿಲ್ಲ; ನಾರಾಯಣಗೌಡ

    ನಗರಸಭೆ, ಪುರಸಭೆ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಂದಾಜು 4 ಲಕ್ಷ ಜನರಿಗೆ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆಗೆ ಚಿಂತನೆ ನಡೆದಿದೆ. ಕಾರ್ಯಕರ್ತರು ಸಹಕಾರ ನೀಡಬೇಕು ಎಂದರು.

    VIDEO| ಮಿಡತೆ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಸಿನಿಮಾ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts