More

    ಸಿಎಂ ಬಿಎಸ್​ವೈ ಈ ಕೆಲಸ ಮಾಡಲಿಲ್ಲ ಅಂದ್ರೆ ಬದುಕಿದ್ದೂ ಸತ್ತಂತೆ: ಡಿ.ಕೆ.ಶಿವಕುಮಾರ್​

    ಬೆಂಗಳೂರು: ಕರೊನಾ ವಿಚಾರದಲ್ಲಿ ರಾಜಕಾರಣ ಮಾಡಬಾರದೆಂದು ಸುಮ್ಮನಿದ್ದೆ. ಈ ಕ್ಷಣದಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಸದಾಶಿವನಗರದ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದವಾರ ಅಕ್ಕಿಯನ್ನು ವಶಪಡಿಸಿಕೊಂಡೆವು. ಬಹಳ ದೊಡ್ಡ ಪ್ರಯತ್ನ ಪಟ್ಟು ಈ ವಿಚಾರವನ್ನು ಮುಚ್ಚಿಹಾಕುವ ಕೆಲಸ ಮಾಡಿದರು. ಆಹಾರ ಸಚಿವ ಗೋಪಾಲಯ್ಯರಿಗೆ ಕೆಣಕ ಬೇಡವೆಂದು ಎಚ್ಚರಿಕೆ ನೀಡಿದ್ದೆ. ಯಾವ ಯಾವ ಜಿಲ್ಲೆಗೆ ಎಷ್ಟು ಲೋಡ್ ಅಕ್ಕಿ ಹೋಗ್ತಿದೆ ಎಂಬುದು ನನಗೆ ಗೊತ್ತಿದೆ. ಸಿಎಂ ಮತ್ತು ಪಿಎಂ ಮೋದಿ ಫೋಟೋ ಹಾಕಿ ಹಂಚಿಕೆ ಮಾಡಿದ್ದಾರೆ. ಅದನ್ನು ಹಿಡಿದು ಕೊಟ್ಟಿದ್ದೇವೆ. ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಿ‌ ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ಕಂಟೇನ್​ಮೆಂಟ್​ ಹೊರತಾಗಿ ಇತರ ವಲಯಗಳಲ್ಲಿ ಏನೇನು ಇರುತ್ತವೆ?

    ಸಿಎಂ ಯಡಿಯೂರಪ್ಪ ಅವರದ್ದೇ ತಪ್ಪೆಂದು ಹೇಳುತ್ತಿಲ್ಲ. ಅವರ ಹಿಂದೆ ಇರೋರು ಏನು ಮಾಡುತ್ತಿದ್ದಾರೆಂದು ನನಗೆ ತಿಳಿದಿದೆ. ಮಕ್ಕಳು ಮತ್ತು ಮಹಿಳೆಯರಿಗೆ ಕೊಡಬೇಕಾದ ಪದಾರ್ಥಗಳ ದುರುಪಯೋಗ ಆಗುತ್ತಿದೆ ಎಂದು ಆರೋಪಿಸಿ ಮಾಧ್ಯಮಗಳಿಗೆ ದಾಖಲೆ ಸಮೇತ ಬಿಡುಗಡೆ ಮಾಡಿದರು.

    ಸರ್ಕಾರಕ್ಕೆ ನಾಚಿಕೆ ಆಗಬೇಕು. ಮಾನ ಮರ್ಯಾದೆ ಇದ್ದರೆ, ಐದು ನಿಮಿಷದಲ್ಲಿ ಅವರನ್ನು ಬಂಧಿಸಬೇಕು. ಸರ್ಕಾರ ಕೊಟ್ಟ ಪ್ಯಾಕೆಟ್​ ತಗೊಂಡು ಅದಕ್ಕೆ ಬಿಜೆಪಿ ಲೆಬಲ್ ಹಚ್ಚಿಕೊಂಡು ಕಳಿಸುತ್ತಿದ್ದಾರೆ. ಇನ್ಮುಂದೆ ಮನವಿ ಮಾಡೋದೆಲ್ಲ ಹೋಯ್ತು. ಇನ್ನೇನಿದ್ದರು ಹೋರಾಟ ಮಾಡೋದಷ್ಟೇ. ಅವರನ್ನು ಬಂಧಿಸಲಿಲ್ಲ ಅಂದ್ರೆ ನಿಮಗೆ ಮುಹೂರ್ತ ಇಡಬೇಕಾಗುತ್ತದೆ. ಸ್ಯಾನಿಟರಿಯಿಂದ ಹಿಡಿದು ಎಲ್ಲದರಲ್ಲೂ ಲೂಟಿ ಆಗಿದೆ. ಸಂಜೆ ಒಳಗೆ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಅಂದರೆ, ನಮ್ಮ ನಡೆ ನಿರ್ಧಾರ ಮಾಡುತ್ತೇವೆಂದು ತಿಳಿಸಿದರು.

    ಜನರನ್ನು ಉಚಿತವಾಗಿ ಅವರವರ ಊರುಗಳಿಗೆ ಕಳುಹಿಸಿಕೊಡಿ. ಕೂಲಿ ಇಲ್ಲದಿರುವುದರಿಂದ ಅವರೆಲ್ಲ ದುಡ್ಡು ಎಲ್ಲಿಂದ ತರಬೇಕು. ನಿಮ್ಮ ಕೈಯಲ್ಲಿ ಆಗಲಿಲ್ಲ ಅಂದ್ರೆ ಹೇಳಿ ರಸ್ತೆಯಲ್ಲಿ ಭಿಕ್ಷೆ ಎತ್ತಿ ಸರ್ಕಾರಕ್ಕೆ ಕಳುಹಿಕೊಡ್ತೀನಿ. ಈ ಎಲ್ಲ ಕೆಲಸ ಮಾಡದಿದ್ದರೆ, ಸಿಎಂ ಯಡಿಯೂರಪ್ಪ ಅವರು ಬದುಕಿದ್ದೂ ಸತ್ತಂತೆ. ಸಿಎಂ ಅಕ್ಕಿ ವಿಚಾರದಲ್ಲಿ ಕ್ರಮ ಕೈಗೊಳ್ಳದಿದ್ರೆ, ಪ್ರಧಾನಿ ಮೋದಿಗೆ ಕಳುಹಿಸಿ ಕೊಡಬೇಕಾಗುತ್ತದೆ ಎಂದು ಡಿಕೆಶಿ ಎಚ್ಚರಿಕೆ ನೀಡಿದರು.

    ಇದನ್ನೂ ಓದಿ: ಮುಂಬೈನಿಂದ ಶವ ತಂದು ಅಂತ್ಯಕ್ರಿಯೆ ಮಾಡಿದ ಪ್ರಕರಣ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು

    ಸುದ್ದಿಗೋಷ್ಟಿಯಲ್ಲಿ ಸಂಸದ ಡಿಕೆ ಸುರೇಶ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಸಲೀಂ ಅಹಮದ್, ಶಾಸಕ ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ದಿಗ್ವಿಜಯ ನ್ಯೂಸ್​)

    500 ಕಿ.ಮೀ. ದೂರದ ಸ್ವಗ್ರಾಮಕ್ಕೆ ಕಾಲ್ನಡಿಗೆಯಲ್ಲೇ ಹೊರಟವರು ಸ್ಮಶಾನ ಸೇರಿದ್ರು, ಮಾರ್ಗಮಧ್ಯೆ ಆಗಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts