More

    ರೋಹಿಣಿ ಸಿಂಧೂರಿ ಮತ್ತು ನನ್ನ ಮಗ ಸ್ನೇಹಿತರು; ಒಂದೆರಡು ಬಾರಿ ನಮ್ಮ ಮನೆಗೆ ಬಂದಿದ್ದರು ಎಂದ ಡಿ.ಕೆ.ರವಿ ತಾಯಿ

    ರಾಮನಗರ: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಯಲ್ಲಿ ಮೃತ ಐಎಎಸ್ ಅಧಿಕಾರಿ ಡಿ.ಕೆ.ರವಿ ಹೆಸರು ಪ್ರಸ್ತಾಪವಾಗಿತ್ತು. ಅಧಿಕಾರಿಗಳ ಜಗಳದ ನಡುವೆ ಡಿ.ಕೆ.ರವಿ ಹೆಸರು ಬಳಸಿದ್ದಕ್ಕೆ ಇದೀಗ ಡಿ.ಕೆ.ರವಿ ತಾಯಿ ಗೌರಮ್ಮ ಗರಂ ಆಗಿದ್ದಾರೆ.

    ರೂಪ ಅವರು ಈಗ ನನ್ನ ಮಗನ ಹೆಸರು ತಂದಿದ್ದಾರೆ, ಇದು ಸರಿಯಲ್ಲ. ನನ್ನ ಮಗ ಮೃತಪಟ್ಟು 8 ವರ್ಷ ಕಳೆದಿವೆ. ಆದರೆ ಈಗ ಯಾಕೆ ನನ್ನ ಮಗನನ್ನು ಬೀದಿಗೆ ತರುತ್ತಿದ್ದಾರೆ. ಈಗ ರೂಪಾ ಯಾಕೆ ನನ್ನ ಮಗನ ಸುದ್ದಿ ತರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ರೋಹಿಣಿ ಸಿಂಧೂರಿ ಹಾಗೂ ನನ್ನ ಮಗ ಸ್ನೇಹಿತರು. ಒಂದೆರಡು ಬಾರಿ ನಮ್ಮ ಮನೆಗೆ ಬಂದಿದ್ದರು. ಪದೇ ಪದೇ ನನ್ನ ಮಗನ ಹೆಸರು ಪ್ರಸ್ತಾಪಿಸಿ ನನಗೆ ನೋವು ಕೊಡಬೇಡಿ. ನಿಮ್ಮ ವ್ಯವಹಾರ ಮಾಡಿಕೊಳ್ಳಿ, ನನ್ನ ಮಗನ ವಿಚಾರ ತರಬೇಡಿ ಎಂದು ರೂಪ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿ ಕಾರಿದ್ದಾರೆ.

    ನಿನ್ನೆ ರೂಪ ಮೌದ್ಗಿಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರೋಹಿಣಿ ಸಿಂಧೂರಿ ಅವರಿಗೆ ಆರಂಭದಲ್ಲಿ ನಾನು ಅವರಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಡಿ.ಕೆ.ರವಿ ಆತ್ಮಹತ್ಯೆಯ ವಿಚಾರ ಬಂದಾಗಲೇ ರೋಹಿಣಿ ಸಿಂಧೂರಿ ಎಡವಿದ್ದರು. ಅವತ್ತೇ ನಾನು ಮಾತನಾಡಿದ್ದೆ ಎಂದು ಹೇಳಿದ್ದರು.

    ಇದರ ಬೆನ್ನಲ್ಲೇ ಡಿ.ಕೆ.ರವಿ ಪತ್ನಿ ಕಾಂಗ್ರೆಸ್ ನಾಯಕಿ ಟ್ವಿಟರ್​ನಲ್ಲಿ “Karma will get back to you,sooner or later it surely will” ಎಂದು ಬರೆದುಕೊಂಡಿದ್ದಾರೆ. ತಾನು ಮಾಡಿರುವ ಪಾಪ ತನಗೆ ವಾಪಸ್ಸು ಹಿಂತಿರುಗುತ್ತದೆ. ಅದು ತಕ್ಷಣಕ್ಕೆ ಅಥವಾ ತಡವಾಗಿ ಆಗಬಹುದು. ಪಾಪ ತಟ್ಟುವುದು ಮಾತ್ರ ಖಂಡಿತ ಎಂದು ರೋಹಿಣಿ ಸಿಂಧೂರಿಗೆ ಟಾಂಗ್ ಕೊಟ್ಟಿರುವ ಟ್ವೀಟ್ ಇದೀಗ ಸುಡುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು.

    ಕುಸಮಾ ಮಾಡಿರುವ ಟ್ವಿಟ್​ಗೆ ರೂಪ ಮೌದ್ಗಿಲ್ ಪ್ರತಿಕ್ರಿಯಿಸಿ, ಕುಸುಮಾ ನಿಮ್ಮ ನೋವು ನನಗೆ ಅರ್ಥ ಆಗುತ್ತದೆ.
    ಒಂದು ಹೆಣ್ಣಾಗಿ ನಿಮ್ಮ ನೋವು ನನಗೆ ಅರ್ಥ ಆಗುತ್ತೆ. ಕೆಲವು ಮಹಿಳೆಯರು ಇನ್ನೂ ಅಸಾಯಕರಾಗಿದ್ದಾರೆ.
    ಆದರೆ ಅಂತಿಮವಾಗಿ ಆರೋಪಿ ವಿರುದ್ಧ ನಿಲ್ಲಲೇ ಬೇಕು ಅಲ್ಲವೇ? ಅದು ಹೆಣ್ಣಾದರು ಸರಿ… ಈ ಹಿಂದೆ ಮಾಡಿದಂತಹ ತಪ್ಪುಗಳು ಆಕೆಯಿಂದ ಮರುಕಳಿಬಾರದು ಎಂದು ಹೋರಾಡುತ್ತಿದ್ದೇನೆ ಎಂದು ಟ್ವಿಟರ್​ನಲ್ಲ ಬರೆದಾಡಿಕೊಂಡಿದ್ದಾರೆ.

    ಡಿ.ಕೆ ರವಿ ಮೃತಪಟ್ಟಿರುವುದು ಮಾನಸಿಕ ಅಸ್ವಸ್ಥತೆಯಿಂದ ಎಂದು ರೋಹಿಣಿ ಸಿಂಧೂರಿ ಹೇಳಿಕೊಂಡಿದ್ದಾರೆ. ಡಿ.ಕೆ.ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೇ? ನನ್ನ ಪ್ರಶ್ನೆ ಇಷ್ಟೇ… ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್​ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಎಂದು ರೂಪ ಮೌದ್ಗಿಲ್ ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts