

ಬೆಂಗಳೂರು: ಆ.11ರ ರಾತ್ರಿ ರಾಜ್ಯ ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಸಂಬಂಧ ತನಿಖೆ ಚುರುಕುಗೊಂಡಿದ್ದು, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಹಿಂದಿರೋ ಮಾಸ್ಟರ್ ಪ್ಲ್ಯಾನ್ ಯಾರದ್ದು? ತಣ್ಣಗಿದ್ದ ಬೆಂಗಳೂರಿಗೆ ಬೆಂಕಿ ಇಟ್ಟದ್ದು ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಗೆರಿಲ್ಲಾ ಮಾದರಿಯಲ್ಲಿ ಅಟ್ಯಾಕ್ ನಡೆಸಲು ಪುಂಡರು ತಯಾರಿ ಮಾಡಿಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಅಲ್ಲದೆ ಪೊಲೀಸ್ ಠಾಣೆಗೆ ಬೆಂಕಿ ಇಟ್ಟದ್ದು ಕಾಂಗ್ರೆಸ್ ಮುಖಂಡ ಎಂಬ ಆಘಾತಕಾರಿ ಅಂಶವೂ ಬಯಲಾಗಿದೆ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿಯೊಬ್ಬ ಫೇಸ್ಬುಕ್ನಲ್ಲಿ ಇಸ್ಲಾಂ ಧರ್ಮಗುರುವಿನ ಬಗ್ಗೆ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಬಗ್ಗೆ ದೂರು ಕೊಡುವ ನೆಪದಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದ ಉದ್ರಿಕ್ತರ ಗುಂಪು ಕ್ಷಣಾರ್ಧದಲ್ಲೇ ಪೊಲೀಸ್ ಠಾಣೆ ಮುಂದೆ ಸಾವಿರಾರು ಜನರನ್ನು ಸೇರಿಸಿ ದಾಂಧಲೆ ನಡೆಸಿತ್ತು. ಈ ಗಲಭೆಯ ಕಿಂಗ್ಪಿನ್ ಕಾಂಗ್ರೆಸ್ ಮುಖಂಡ!
ಇದನ್ನೂ ಓದಿರಿ ಬೆಂಗಳೂರು ಗಲಭೆಕೋರರು ಬಳ್ಳಾರಿ ಜೈಲಿಗೆ ಶಿಫ್ಟ್
ಕಾಂಗ್ರೆಸ್ನಲ್ಲಿ ಸಕ್ರಿಯನಾಗಿದ್ದ, ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರ ಜೊತೆ ಗುರುತಿಸಿಕೊಂಡಿದ್ದ ಫೈರೋಜ್ ಖಾನ್ ಎಂಬಾತನೇ
ಗಲಭೆಯ ಪ್ರಮುಖ ಆರೋಪಿ ಮುಜಾಯಿದ್ ಪಾಷ ಬಂಧನದ ವೇಳೆ ಫೈರೋಜ್ ವಾಟ್ಸ್ಆ್ಯಪ್ ಕಾಲ್ ಮಾಡಿರೋದು ಬೆಳಕಿಗೆ ಬಂದಿದೆ. ತಾಂತ್ರಿಕ ವಿಭಾಗದಿಂದ ಫೈರೋಜ್ನ ಮೊಬೈಲ್ ಕಾಲ್ ಡೀಟೆಲ್ಸ್ ಚೆಕ್ ಮಾಡಿದಾಗ ಸಾಕಷ್ಟು ಮಂದಿಗೆ ಈತ ಕರೆ ಮಾಡಿರೋದು ಬೆಳಕಿಗೆ ಬಂದಿದೆ.