More

    ಮುಸ್ಲಿಮರು, ದಲಿತರಿಗೆ ಕಾಂಗ್ರೆಸ್ ವಿಶ್ವಾಸದ್ರೋಹ- ಎಸ್‌ಡಿಪಿಐ ಆರೋಪ

    ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ಒಟ್ಟು ಮತ ಗಳಿಕೆಯಲ್ಲಿ ಶೇ.30ರಷ್ಟು ಮುಸ್ಲಿಂ, ಶೇ.25ರಷ್ಟು ದಲಿತ ಸಮುದಾಯದ ಮತ ಪಡೆದು ಸರ್ಕಾರ ರಚಿಸಿರುವ ರಾಜ್ಯ ಸರ್ಕಾರ ಈ ಎರಡೂ ಸಮುದಾಯಗಳಿಗೆ ವಿಶ್ವಾಸದ್ರೋಹ ಮಾಡುತ್ತಿದೆ ಎಂದು ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಜನ ಈ ಅಧಿಕಾರ ನೀಡಿಲ್ಲ. ಕಳೆದ ಅವಧಿಯಲ್ಲಿ ಬಿಜೆಪಿಯ ಆಡಳಿತ ವೈಫಲ್ಯ ಹಾಗೂ ಎಡವಟ್ಟುಗಳಿಂದ ಬೇಸತ್ತು ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ರಾಜ್ಯದಲ್ಲಿ ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಜಾರಿಯ ಕುರಿತು ಕಾಂಗ್ರೆಸ್ ಚುನಾವಣೆಗೆ ಮೊದಲು ಭರವಸೆ ನೀಡಿತ್ತು. ತಮಿಳುನಾಡು ಮಾದರಿ ಮೀಸಲಾತಿ ಜಾರಿಯಾದರೆ ಮುಸ್ಲಿಂ ಸಮುದಾಯಕ್ಕೆ ಶೇ.17ರಷ್ಟು ಮತ್ತು ದಲಿತರಿಗೆ ಶೇ.25ರಷ್ಟು ಮೀಸಲಾತಿ ಸಿಗುತ್ತಿತ್ತು. ಹೊಸ ಸರ್ಕಾರ ರಚನೆ ಬಳಿಕ 13 ಸಚಿವ ಸಂಪುಟ ಸಭೆ, 2 ಅಧಿವೇಶನ ಆಗಿದ್ದರೂ ಕಾಂಗ್ರೆಸ್ ಭರವಸೆ ಪೂರೈಸಿಲ್ಲ. ಇದು ನಂಬಿಕೆ ದ್ರೋಹ ಎಂದು ಟೀಕಿಸಿದರು.

    ಎಸ್‌ಡಿಪಿಐ ಮುಖಂಡರಾದ ಅನ್ವರ್ ಸಾದತ್, ಅಬೂಬಕರ್, ಜಮಾಲ್, ಅಶ್ರಫ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts