More

    ಬಾಳೆಹೊನ್ನೂರಿನಲ್ಲಿ ಹಬ್ಬದ ಸಂಭ್ರಮ

    ಬಾಳೆಹೊನ್ನೂರು: ಬೆಳಕಿನ ಹಬ್ಬ ದೀಪಾವಳಿಗೆ ಹೋಬಳಿಯಾದ್ಯಂತ ಸಂಭ್ರಮ ಕಳೆಗಟ್ಟಿದ್ದು ಹಬ್ಬ ಆಚರಣೆಗೆ ಭರದ ಸಿದ್ಧತೆ ನಡೆದಿದೆ.
    ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳು ತಲೆ ಎತ್ತಿದ್ದು ಮೂರ‌್ನಾಲ್ಕು ದಿನಗಳಿಂದ ವ್ಯಾಪಾರ ನಡೆಸುತ್ತಿವೆ. ಹದಿನೈದು ದಿನಗಳ ಹಿಂದಿನಿಂದಲೇ ಪಟ್ಟಣದ ಸುತ್ತಮುತ್ತ ದೀಪಾವಳಿ ಸಂಭ್ರಮ ಇಮ್ಮಡಿಗೊಳಿಸಲು ಪ್ರತಿ ವರ್ಷದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಂಪ್ರದಾಯಿಕ ಹುಲಿವೇಷ, ಸಿಂಹವೇಷಧಾರಿಗಳ ತಂಡ ಆಗಮಿಸಿ ಮನೆ ಮನೆಗೆ ಭೇಟಿ ನೀಡಿ ಮನರಂಜನೆ ನೀಡುತ್ತಿದೆ.
    ವಿವಿಧೆಡೆಯಿಂದ ಬಂದಿರುವ ಸಾಂಪ್ರದಾಯಿಕ ವೇಷಧಾರಿಗಳು, ಸ್ಥಳೀಯ ಯುವಕರ ಕರಡಿ ಕುಣಿತ, ಕೊರಗನ ನೃತ್ಯ ಹಾಗೂ ಸ್ಥಳೀಯ ಗ್ರಾಮೀಣ ಪ್ರದೇಶದವರ ಜನಪದ ಹಾಡಿನ ಕಾರ್ಯಕ್ರಮ ಎಲ್ಲ ಭಾಗಗಳಲ್ಲೂ ನಡೆಯುತ್ತಿದೆ.
    ಗ್ರಾಮೀಣ ಭಾಗಗಳಲ್ಲಿ ಶನಿವಾರ ನೀರು ತುಂಬುವ ಹಬ್ಬ ನಡೆಯುವುದರೊಂದಿಗೆ ದೀಪಾವಳಿಗೆ ವಿಧ್ಯುಕ್ತ ಚಾಲನೆ ದೊರೆತಿದೆ. ನ.12ರಂದು ಮುಂಜಾನೆ ಅಭ್ಯಂಜನ ಸ್ನಾನ ಹಾಗೂ ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಹಾಕುವ ಕಾರ್ಯ ನಡೆಯಲಿದೆ. ಈ ಬಾರಿ ಇದೇ ದಿನ ಅಮಾವಾಸ್ಯೆ ಬಂದಿರುವುದರಿಂದ ಪಟ್ಟಣದ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀಪೂಜೆ, ನ.13ರಂದು ಗೋಪೂಜೆ, ಬಲಿಪಾಡ್ಯಮಿ ನಡೆಯಲಿದೆ. ಕೆಲವೆಡೆ ನ.14ರಂದೂ ಗೋಪೂಜೆ, ಬಲಿಪಾಡ್ಯಮಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts