More

    ಕೊಳ್ಳೇಗಾಲದಲ್ಲಿ ದೀಪಾವಳಿ ಹಬ್ಬ ಜೋರು


    • ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನಾದ್ಯಂತ ಬೆಳಕಿನ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಸೋಮವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಜನರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯ ನೆರವೆರಿಸಿದರು. ಪಟಾಕಿ ಮಳಿಗೆಗಳಲ್ಲಿ ವ್ಯಾಪಾರ ಭರಾಟೆ ಜೋರಾಗಿತ್ತು. ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪಟಾಕಿ ಅಂಗಡಿಗಳಲ್ಲಿ ಪಟಾಕಿ ಖರೀದಿ ಮಾಡಲಾಗುತ್ತಿದೆ.

    • ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟನೆ ಹೆಚ್ಚಾಗಿಯೇ ಇತ್ತು. ಜನರು ಹೂ, ಹಣ್ಣು, ಪೂಜಾ ಸಾಮಗ್ರಿ ಖರೀದಿಸುವಲ್ಲಿ ತೊಡಗಿದ್ದರು. ವಿಶೇಷವಾಗಿ ಮಣ್ಣಿನ ದೀಪಗಳ ಖರೀದಿ ಹೆಚ್ಚಾಗಿತ್ತು.

    • ಅಮಾವಾಸ್ಯೆ ಹಿನ್ನೆಲೆಯಲ್ಲಿ ಜನರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿದರು. ಮರಡಿಗುಡ್ಡ ಮಹದೇಶ್ವರ ದೇವಾಲಯ, ಶ್ರೀ ಕ್ಷೇತ್ರ ಕುರುಬನಕಟ್ಟೆ, ಮರಳೇಶ್ವರ ದೇವಾಲಯದ, ವರಸಿದ್ಧಿ ವಿನಾಯಕ ದೇವಾಲಯ, ವೀರಾಂಜನೇಯ ದೇವಾಲಯ, ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯ ಹೀಗೆ ಪಟ್ಟಣ ಸೇರಿದಂತೆ ತಾಲೂಕಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಮನೆ ಬಾಗಿಲು, ಅಂಗಳದಲ್ಲಿ ದೀಪ ಹಚ್ಚುವ ಮೂಲಕ ನೀರೆಯರು ಹಬ್ಬ ಆಚರಣೆ ಮಾಡಿದರು. ಮಕ್ಕಳು, ಯುವಕರು ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜನರು ಭಾನುವಾರದಿಂದಲೇ ಪಟಾಕಿ ಹೊಡೆಯುವುದನ್ನು ಪ್ರಾರಂಭಿಸಿದ್ದು, ಸೋಮವಾರ ರಾತ್ರಿಯೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಯಿತು. ಬಣ್ಣ ಬಣ್ಣದ ಪಟಾಕಿಗಳು ಆಗಸದಲ್ಲಿ ಚಿತ್ತಾರ ಮೂಡಿಸಿತು.

    ಫೋಟೋ ಕಳುಹಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts