More

    ಕಾಮಗಾರಿಗೆ ಅನುದಾನ ನೀಡದ ಶಾಸಕ

    ಕೊಪ್ಪ: ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿಗಳಿಗೆ ಶಾಸಕರು ಅನುದಾನ ನೀಡದ ಕಾರಣ ಸ್ಥಳೀಯ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ದಿವ್ಯಾ ದಿನೇಶ್ ಆರೋಪಿಸಿದರು.

    ನುಗ್ಗಿ ಗ್ರಾಪಂ ವ್ಯಾಪ್ತಿಯ ಮಾರಿಗಂಡಿ ಹಾಗೂ ಹೊಟ್ಟನಕುಡಿಗೆ ಸಂರ್ಪಸುವ ಸೇತುವೆ ಉದ್ಘಾಟಿಸಿ ಮಾತನಾಡಿ, ಗ್ರಾಪಂ, ತಾಪಂ, ಜಿಪಂ ಅನುದಾನ ಬಳಸಿಕೊಂಡು ಕೆಲಸ ಪೂರ್ಣಗೊಳಿಸಲಾಗಿದೆ ಎಂದರು.

    ನುಗ್ಗಿ ಗ್ರಾಪಂ ಅಧ್ಯಕ್ಷ ಎಚ್.ಆರ್.ಜಗದೀಶ್ ಮಾತನಾಡಿ, ಹಂತುವಾನೆ, ಹೊಟ್ಟನಕೊಡಿಗೆ ಗ್ರಾಮದ ಜನರು ಮೊದಲು ಒಂದು ಸುತ್ತು ಹಾಕಿಕೊಂಡು ಬಪ್ಪುಂಜಿಗೆ ಬರಬೇಕಿತ್ತು. ಮಾಜಿ ಸಚಿವ ಡಿ.ಎನ್.ಜೀವರಾಜ್ ಈ ಸಮಸ್ಯೆ ಕಂಡು ಮಾರಿಗಂಡಿಯಲ್ಲಿ ಸೇತುವೆ ನಿರ್ವಿುಸಲು ಅನುದಾನ ನೀಡಿದ್ದರು. ಇದರಿಂದ ಕೇವಲ ಎರಡು ಕಿಮೀನಲ್ಲಿ ಬಪ್ಪುಂಜಿಯಿಂದ ಹಂತುವಾನೆ ತಲುಪುವಂತಾಗಿದೆ. ಕಳೆದ ವರ್ಷ ಅತಿವೃಷ್ಟಿಯಲ್ಲಿ ಸೇತುವೆ ಕೊಚ್ಚಿಹೋದಾಗ ಸಂಸದರು, ಶಾಸಕರು ಭೇಟಿ ನೀಡಿ ದುರಸ್ತಿಯ ಭರವಸೆ ನೀಡಿದ್ದರು. ಆದರೆ ಅನುದಾನ ದೊರೆಯಲಿಲ್ಲ. ಸ್ಥಳೀಯ ಗ್ರಾಪಂನಿಂದ 9 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ವಿುಸಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts