More

    ಶ್ರೀ ರಾಮೇಶ್ವರ ಶಿವಲಿಂಗದ ದಿವ್ಯ ದರ್ಶನ

    ಹುಬ್ಬಳ್ಳಿ : ಮಹಾಶಿವರಾತ್ರಿ ದಿನವಾದ ಮಾ. 8ರಂದು ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ ಮೈದಾನದಲ್ಲಿ ಹಿಂದುಗಳ ಪವಿತ್ರ ಕ್ಷೇತ್ರ ಅಯೋಧ್ಯಾ ಪ್ರಭು ಶ್ರೀರಾಮ ಮಂದಿರದ ಮಾದರಿಯಲ್ಲಿ ಶ್ರೀ ರಾಮೇಶ್ವರ ಶಿವಲಿಂಗದ ದಿವ್ಯ ದರ್ಶನದೊಂದಿಗೆ ಮಹಾಶಿವರಾತ್ರಿ ಆಚರಿಸುವ ಸೌಲಭ್ಯವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಲ್ಪಿಸಿದ್ದಾರೆ.

    ಅಂದು ಬೆಳಗ್ಗೆ ಹಿರೇಮಠದ ಪಂ. ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಮಹಾಶಿವನ ಪೂಜಾ ಕಾರ್ಯಗಳು ಜರುಗಲಿವೆ. ಶಿವಪುರಾಣದಲ್ಲಿ ಪರಶಿವನು ಪಾರ್ವತಿಗೆ ‘ಶಿವರಾತ್ರಿಯಂದು ನನ್ನನ್ನು ಪೂಜಿಸುವ ಭಕ್ತರಿಗೆ ನಾನು ವಿಶೇಷವಾಗಿ ಅನುಗ್ರಹಿಸುತ್ತೇನೆ’ ಎಂದು ಸ್ವತಃ ಪರಮೇಶ್ವರ ಹೇಳಿದ್ದಾನೆ. ಅಂತೆಯೇ ಕೈಲಾಸವಾಸಿ ಶಿವನ ಪರಮಪ್ರಿಯ ಮಹಾಶಿವರಾತ್ರಿಯನ್ನು ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ವಿಶೇಷವಾಗಿ ಆಚರಿಸುವಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಹಾಶಿರಾತ್ರಿಯ ದಿನ ನಮ್ಮೆಲ್ಲರ ಪುಣ್ಯಕ್ಷೇತ್ರ ಶ್ರೀ ರಾಮೇಶ್ವರ ಶಿವಲಿಂಗ ಪ್ರತಿಷ್ಠಾಪನೆಯ ಮೂಲಕ ಭಕ್ತರಿಗೆಲ್ಲ ದಿವ್ಯದರ್ಶನ ಭಾಗ್ಯವನ್ನು ಮತ್ತು ಅಯೊಧ್ಯೆಯ ಪ್ರಭು ಶ್ರೀ ರಾಮನ ದೇವಸ್ಥಾನದ ಮಾದರಿಯನ್ನು ಈ ಬಾರಿ ಹುಬ್ಬಳ್ಳಿಯಲ್ಲಿ ನಿರ್ವಿುಸಲಾಗಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

    ಇಡೀ ನಗರದ ಶಿವನ ಭಕ್ತರನ್ನು ಶಿವಧ್ಯಾನದ ಸಂಗೀತ ಸರೋವರದಲ್ಲಿ ಮೀಯಲು ಅವಕಾಶ ಮಾಡಿಕೊಟ್ಟಿದ್ದಾರೆ.

    ರಾಮೇಶ್ವರನನ್ನು ಪ್ರತಿಷ್ಠಾಪಿಸಿ ಆಕರ್ಷಕವಾಗಿ ಕಾಣಲು ಹಾಗೂ ಕಣ್ಮನ ಸೆಳೆಯಲು ಜಗಮಗಿಸುವ ವಿದ್ಯುತ್ ದೀಪದ ಅಲಂಕಾರವನ್ನೂ ಮಾಡಲಾಗಿದೆ. ಈ ಸಮಯದಲ್ಲಿ ಭಕ್ತರಿಗೆ ಅಹೋರಾತ್ರಿ ಪ್ರಸಾದ ವಿನಿಯೋಗ ಇರುತ್ತದೆ. ಇದರೊಂದಿಗೆ ಭಕ್ತರಿಗೆ ಉಚಿತವಾಗಿ ಪಂಚಮುಖಿ ರುದ್ರಾಕ್ಷಿ ವಿತರಣೆ ಮಾಡಲಾಗುವುದು.

    ಅಂದು ಸಂಜೆ 6.30ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ‘ಸಂಗೀತದೊಂದಿಗೆ ಶಿವನಾಮ ಸ್ಮರಣೆ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಾಡಿನ ಹೆಸರಾಂತ ವಿವಿಧ ಕಲಾವಿದರುಗಳಿಂದ ಭಕ್ತಿ ಸಂಗೀತದ ರಸದೌತಣ ಏರ್ಪಡಿಸಲಾಗಿದೆ. ಸಂಗೀತ ಶಿವಾರಾಧನೆ ಹೆಸರಿನಡಿಯಲ್ಲಿ ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ರಾತ್ರಿ 8 ಗಂಟೆಯಿಂದ ಗಾಯಕ ಯುವ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಹಾಗೂ ತಂಡದಿಂದ ಶಿವ ಸಂಗೀತ ಹಾಗೂ ಹುಬ್ಬಳ್ಳಿಯ ಕಲಾಸುಜಯ ತಂಡದಿಂದ ರಾತ್ರಿ 7 ರಿಂದ 8 ಗಂಟೆವರೆಗೆ ಶಿವತಾಂಡವ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.

    ಸಂಗೀತಾಸಕ್ತರು ಹಾಗೂ ಭಕ್ತಾಧಿಗಳು ಕಾರ್ಯಕ್ರಮಕ್ಕೆ ಆಗಮಿಸಲು ಸಚಿವ ಪ್ರಲ್ಹಾದ ಜೋಶಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts