ನಟ ನಟಿಯರು, ಕ್ರೀಡಾಪಟುಗಳು ಭಾಗಿ

Actors, actresses, and athletes participate
ನಟ ನಟಿಯರು, ಕ್ರೀಡಾಪಟುಗಳು ಭಾಗಿ
Published on: 

ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಸ್ಯಾಂಡಲ್‌ವುಡ್ ತಾರೆಯರು, ಕ್ರೀಡಾಪಟುಗಳು ತೆರೆದ ವಾಹನ ಏರಿ ಸಾರ್ವಜನಿಕರ ಗಮನ ಸೆಳೆದರು. ಮೆರವಣಿಗೆಯಲ್ಲಿ ನೆಚ್ಚಿನ ಕ್ರೀಡಾ ತಾರೆ, ಚಿತ್ರತಾರೆಯರನ್ನು ಕಂಡ ಜನರು ಹರ್ಷೋದ್ಘಾರದ ಮೂಲಕ ಸಂಭ್ರಮಿಸಿದರು.

ಜಂಬೂ ಸವಾರಿ ಮೆರವಣಿಗೆಯಲ್ಲಿ ನಟ-ನಟಿಯರು ಕಾಣಿಸಿಕೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳು ನೆಚ್ಚಿನ ತಾರೆಯರ ಹೆಸರುಗಳನ್ನು ಕೂಗುತ್ತಾ ಜೈಕಾರ ಹಾಕಿದರು. ಮೊಬೈಲ್‌ಗಳಲ್ಲಿ ತಮ್ಮ ನೆಚ್ಚಿನ ನಟ, ನಟಿಯರ ಹಾಗೂ ಕ್ರೀಡಾಪಟುಗಳ ಫೋಟೊ ಹಾಗೂ ವಿಡಿಯೋ ಸೆರೆಹಿಡಿದರು. ದಸರಾ ಮೆರವಣಿಗೆಯ ಸಾಂಸ್ಕೃತಿಕ ವೈಭವದ ನಡುವೆ ಚಿತ್ರರಂಗದ ಕಲಾವಿದರ ಉಪಸ್ಥಿತಿಯೂ ಜನರಲ್ಲಿ ವಿಶೇಷ ಉತ್ಸಾಹ ಮೂಡಿಸಿತು.

ಓಪನ್ ಬಸ್‌ನಲ್ಲಿ ನಟರಾದ ರವಿಚಂದ್ರನ್, ಜಯಮಾಲಾ, ರಮೇಶ್, ಪ್ರಜ್ವಲ್ ದೇವರಾಜ್, ದುನಿಯಾ ವಿಜಯ್, ಡಾಲಿ ಧನಂಜಯ, ಶರಣ್, ರಾಗಿಣಿ, ಮುರುಳಿ, ದೇವರಾಜು, ವಶಿಷ್ಟ, ಸಾ.ರಾ.ಗೋವಿಂದ್, ಶ್ರೀರಾಮ್, ಸುಂದರಾಜು ಇರರಿದ್ದರು. ಮತ್ತೊಂದು ಬಸ್‌ನಲ್ಲಿ ಖ್ಯಾತ ಕ್ರೀಡಾಪಟುಗಳಾದ ಅನಿಲ್ ಕುಂಬ್ಳೆ, ಪ್ಯಾರಾ ಅಥ್ಲೀಟ್ ಶಿಲ್ಪಾ, ಅನೂಪ್ ಶ್ರೀಧರ್, ಶ್ರೇಯಾಂಕ ಪಾಟೀಲ್, ಡಾ.ಎ.ಬಿ.ಸುಬ್ಬಯ್ಯ, ತ್ರಿಲೋತ್ತಮಾ ಸೇನ್, ಮೋಹಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net