ಸಚಿವ ಮಾಧುಸ್ವಾಮಿಗೆ ಎಚ್ಚರಿಕೆ ನೀಡಿದ ಸಿಎಂ ಬಿಎಸ್​ವೈ

Madhuswamy BSY
Published on

ಬೆಂಗಳೂರು: ರೈತ ಮಹಿಳೆಯರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲ ಬೆಳವಣಿಗೆಯನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಹೆಣ್ಣು ಮಗಳ ಬಗ್ಗೆ ಮಾಧುಸ್ವಾಮಿ ಹಾಗೇ ಮಾತಾಡಿದ್ದು ಸರಿಯಲ್ಲ. ನಾನು ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಆ ಹೆಣ್ಣು ಮಗಳನ್ನು ಕರೆದು ನಾನು ಮಾತನಾಡುತ್ತೇನೆ ಎಂದರು.

ಮಾಧುಸ್ವಾಮಿ ಅವರಿಂದ ರಾಜೀನಾಮೆ ಪಡೆಯಬೇಕೆಂಬ ಕಾಂಗ್ರೆಸ್ ಆಗ್ರಹ ವಿಚಾರವಾಗಿ ಸಿಎಂ ಬಿಎಸ್​ವೈ ಪ್ರತಿಕ್ರಿಯೆ ನೀಡದೆ ಹೊರಟರು.

ನಿನ್ನೆ ಕೋಲಾರ ತಾಲೂಕಿನ ಎಸ್​ ಅಗ್ರಹಾರ ಕೆರೆ ವೀಕ್ಷಿಸಲು ಆಗಮಿಸಿದ್ದ ವೇಳೆ ಅಹವಾಲು ಸಲ್ಲಿಸಲು ಬಂದಿದ್ದ ರೈತ ಮಹಿಳೆಯರಿಗೆ ಕಾನೂನು ಸಚಿವ ಮಾಧುಸ್ವಾಮಿ ರಾಸ್ಕಲ್​ ಎಂದು ಜರಿಯುವ ಮೂಲಕ ವಿವಾದ ಸೃಷ್ಟಿಸಿಕೊಂಡರು. ಕೆರೆಗಳ ಒತ್ತುವರಿಯನ್ನು ತೆರವು ಮಾಡಲು ಮಹಿಳೆಯರು ಮನವಿ ಮಾಡಿ ಚರ್ಚಿಸುವಾಗ ಹೇ ರಾಸ್ಕಲ್​ ಮುಚ್ಚುಬಾಯಿ ಎಂಬ ಪದ ಪ್ರಯೋಗ ಮಾಡಿದ್ದು, ಈ ವೇಳೆ ಕೆರಳಿದ ಮಹಿಳೆಯರು ಮಾಧುಸ್ವಾಮಿ ಅವರಿಗೆ ಘೇರಾವ್​ ಹಾಕಿದ ಪ್ರಸಂಗ ನಡೆಯಿತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net