ನರೇಂದ್ರ ಮೋದಿಯವರ 25 ವರ್ಷಗಳ ನಿರಂತರ ಜನಸೇವೆ

ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಬಸ್ ತಂಗುದಾಣ ನವೀಕರಣ
ಕಲ್ಪನೆ ಬಳಿ ನವೀಕೃತ ಬಸ್ ತಂಗುದಾಣವನ್ನು ವೇದವ್ಯಾಸ ಕಾಮತ್ ಉದ್ಘಾಟಿಸಿದರು. ರಮೇಶ್ ಕಂಡೆಟ್ಟು,ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್,ಮಹೇಶ್ ಜೋಗಿ ಮೊದಲಾದವರಿದ್ದರು.
ಕಲ್ಪನೆ ಬಳಿ ನವೀಕೃತ ಬಸ್ ತಂಗುದಾಣವನ್ನು ವೇದವ್ಯಾಸ ಕಾಮತ್ ಉದ್ಘಾಟಿಸಿದರು. ರಮೇಶ್ ಕಂಡೆಟ್ಟು,ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್,ಮಹೇಶ್ ಜೋಗಿ ಮೊದಲಾದವರಿದ್ದರು.
Published on: 

ಮಂಗಳೂರು: ನಂತೂರಿನಿಂದ ಕುಡುಪು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಾಳು ಬಿದ್ದಿದ್ದ ಬಸ್ ತಂಗುದಾಣವನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣದ ಹಿಂದುಳಿದ ವರ್ಗಗಳ ಮೋರ್ಚಾದವರು ತಮ್ಮ ದುಡಿಮೆಯಿಂದಲೇ ನವೀಕೃತಗೊಳಿಸಿರುವುದು ಮಾದರಿ ಕಾರ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಶ್ಲಾಘಿಸಿದರು.

ನರೇಂದ್ರ ಮೋದಿಯವರ ಸಾರ್ಥಕ 25 ವರ್ಷಗಳ ನಿರಂತರ ಜನಸೇವೆಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕರಣಗೊಳಿಸಲಾದ ಬಸ್ ತಂಗುದಾಣ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಜಿಲ್ಲಾ ಕಾರ್ಯದರ್ಶಿ ದೀಪಿಕಾ ಮನೋಜ್, ಮಂಡಲದ ಒಬಿಸಿ ಮೋರ್ಚಾದ ಪ್ರಭಾರ ಅಧ್ಯಕ್ಷ ಅರುಣ್ ಉರ್ವ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ದೇವಾಡಿಗ ಹಾಗೂ ಸುಕೇಶ್ ಅಳಪೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ನಿಕಟ ಪೂರ್ವ ಪಾಲಿಕೆ ಸದಸ್ಯರುಗಳಾದ ಕಿಶೋರ್ ಕೊಟ್ಟಾರಿ, ಕಾವ್ಯ ನಟರಾಜ್ ಆಳ್ವ, ಪೂರ್ವ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿಚಂದ್ರ, ದಕ್ಷಿಣ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರವೀಣ್ ನಿಡ್ಡೆಲ್, ಪ್ರಮುಖರಾದ ರಾಘವೇಂದ್ರ, ಅಜಯ್ ಕುಲಶೇಖರ, ಜಯಕುಮಾರ್, ರಾಮ್ ಪ್ರಸಾದ್, ಪ್ರವೀಣ್ ಗುಂಡಳಿಕೆ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net