

ಮುಳ್ಳೇರಿಯ: ಶಿಕ್ಷಣದ ಜ್ಞಾನವು ಪಠ್ಯಪುಸ್ತಕಗಳಲ್ಲಿ ಪಡೆದ ವಾಹಿತಿ ಮಾತ್ರವಲ್ಲ ವಿದ್ಯಾರ್ಥಿಗಳು ನಾಡಿನ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಕಲಿಸುವುದೇ ಶಿಕ್ಷಣ. ಶಾಲೆ ಕೇವಲ ಕಟ್ಟಡವಲ್ಲ, ಅದು ನಾಡಿನ ಆತ್ಮ, ಭರವಸೆ ಮತ್ತು ಭವಿಷ್ಯ. ಇದು ಪ್ರೀತಿ, ಸಹಬಾಳ್ವೆ ಮತ್ತು ಏಕತೆಯ ಕೊಂಡಿಗಳನ್ನು ಬೆಸೆಯುವ ಸ್ಥಳವಾಗಿದೆ ಎಂದು ಸ್ಥಳೀಯಾಡಳಿತ ಸಚಿವ ಕೆ.ಎಂ.ಶಾಜಿ ಹೇಳಿದರು.
ಕಾರಡ್ಕ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯ (ಜಿವಿಎಚ್‌ಎಸ್‌ಎಸ್) ನೂತನ ಶೈಕ್ಷಣಿಕ ಬ್ಲಾಕ್ ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಕಲ್ಲಟ್ರ ವಾಹಿನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ ಮುಖ್ಯಅತಿಥಿಯಾಗಿದ್ದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಬಾಲನ್, ಕಾರಡ್ಕ ಗ್ರಾಪಂ ಅಧ್ಯಕ್ಷೆ ಎಂ.ಜನನಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು, ಜಿಪಂ ಸದಸ್ಯೆ ವತ್ಸಲಾ, ಬ್ಲಾಕ್ ಪಂಚಾಯಿತಿ ಸದಸ್ಯ ಎಸ್.ಆರ್.ಸತ್ಯವತಿ, ಗ್ರಾಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಬಾಲಕೃಷ್ಣನ್, ಗ್ರಾಪಂ ಸದಸ್ಯರಾದ ಮೋಹನನ್ ಕಾಡಗಂ, ಟಿ.ಭಾಸ್ಕರನ್, ಎ.ವಿಜಯಕುವಾರ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಕೆ.ಜಯನ್, ಕೆ.ಪುರುಷೋತ್ತಮನ್, ಎಂ.ರತ್ನಾಕರ, ಎಂ.ಕೃಷ್ಣನ್, ಮಹಮ್ಮದ್, ವಾಹಿನ್ ಕೇಳೋಟ್, ಎಸ್‌ಎಂಸಿ ಅಧ್ಯಕ್ಷ ಕೆ.ಸುರೇಶ್ ಕುವಾರ್, ಪಿಟಿಎ ಅಧ್ಯಕ್ಷ ಕೆ.ಸುರೇಶ್ ಕುವಾರ್, ಎಂ.ಪಿ.ರಂಜಿನಿ, ರಂಜಿತ್ ಕಾಡಗಂ, ಎಂ.ಸಂಜೀವ, ಎ.ಜ್ಯೋತಿಕುವಾರಿ, ಪಿ.ಕುಂಜಂಬು, ಕೆ.ಆಶ್ರಿತಾ ಮತ್ತಿತರರು ಉಪಸ್ಥಿತರಿದ್ದರು.
ಸ್ಥಳೀಯಾಡಳಿತ ಬ್ಲಾಕ್ ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಕೆ.ರಾಜೇಶ್ ವರದಿ ಮಂಡಿಸಿದರು. ಮುಖ್ಯಶಿಕ್ಷಕ ಬಿ.ಎಸ್.ಸಂದೀಪ್ ಸ್ವಾಗತಿಸಿದರು. ಪಿಟಿಎ ಅಧ್ಯಕ್ಷ ಸುರೇಶ್ ಮೂಡಂಕುಳ ವಂದಿಸಿದರು.
ಕಿಫ್ಬಿಯ 3.9 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ಮೂರು ಅಂತಸ್ತಿನ ಶೈಕ್ಷಣಿಕ ಬ್ಲಾಕ್ ನಿರ್ಮಿಸಲಾಗಿದೆ. ಈ ಕಟ್ಟಡವು ತರಗತಿ ಕೊಠಡಿಗಳು, ಸಿಬ್ಬಂದಿ ಕೊಠಡಿ, ಕಚೇರಿ ಸೌಲಭ್ಯಗಳು, ಪ್ರಯೋಗಾಲಯಗಳು, ಐಟಿ ವ್ಯವಸ್ಥೆಗಳು ಮತ್ತು ಶೌಚಗೃಹ ಒಳಗೊಂಡಿದೆ. 32,000 ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ಟ್ಯಾಂಕ್ ಮತ್ತು 1,000 ಲೀಟರ್ ಸಾಮರ್ಥ್ಯದ ಅಗ್ನಿಶಾಮಕ ಟ್ಯಾಂಕ್ ಕೂಡ ನಿರ್ಮಿಸಲಾಗಿದೆ.