

ಬಾಳೆಹೊನ್ನೂರು: ಭಾರತದ ನೆಲೆಗಟ್ಟಾದ ಕಲೆ, ಸಂಸ್ಕೃತಿ, ಧಾರ್ಮಿಕತೆಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ ಎಂದು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಹೇಳಿದರು.
ದುರ್ಗಾದೇವಿ ಶರನ್ನವರಾತ್ರಿ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ನಾಡಿನ ಕಲೆ, ಸಂಸ್ಕೃತಿ, ವಿವಿಧ ಗ್ರಾಮೀಣ ಕಲಾ ಪ್ರಕಾರಗಳನ್ನು ನಾಡಿಗೆ ಪರಿಚಯಿಸಿ, ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸುವ ಕೆಲಸವನ್ನು ನವರಾತ್ರಿ ಸಮಿತಿ ಮಾಡುತ್ತಿದೆ. ಹನ್ನೊಂದು ದಿನಗಳ ಪರ್ಯಂತ ಧರ್ಮಾವಲಂಬಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಸಂಸ್ಕೃತಿ, ಸಂಪ್ರದಾಯಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದ್ದು, ಯುವಜನತೆ ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾರತೀಯ ಸನಾತನ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿದುಕೊಳ್ಳಬೇಕಿದೆ ಎಂದರು.
ಅ.14ರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗರುಡವಾಹಿನಿ, ವೈಷ್ಣವಿ ರೂಪಿಣಿ ಪೂಜಾ ಪಾರಾಯಣ ನಡೆಯಲಿದೆ.
ಸಂಜೆ 6ರಿಂದ 7.45ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಕಾಶವಾಣಿ ಕಲಾವಿದ ಸೊರಬದ ಶಿವರುದ್ರಪ್ಪ ಎನ್.ಜೋಗಿ ತಂಡದಿಂದ ಕಿನ್ನರಿ ಜೋಗಿ ಜಾನಪದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಪ್ರಾಯೋಜಕರಾದ ಕೋಕಿಲಮ್ಮ ಲಿಂಗಪ್ಪಗೌಡ, ರಾಘವೇಂದ್ರ, ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಕಾನೂನು ಸಲಹೆಗಾರ ಎಚ್.ಎಚ್.ಕೃಷ್ಣಮೂರ್ತಿ, ಪ್ರಮುಖರಾದ ಎಚ್.ಡಿ.ಸತೀಶ್, ನಾಗರಾಜ್ ಬರಗಲ್, ಡಿ.ಎನ್.ಸುಧಾಕರ್, ಕೆ.ನಾರಾಯಣ ಶೆಟ್ಟಿ, ಗಿರೀಶ್ ಬಂದಿಯಡ್ಕ, ಉಪೇಂದ್ರ ಆಚಾರ್ಯ, ಸುಂದರ್ ಇಟ್ಟಿಗೆ, ಶ್ರೀಕಾಂತ್, ಶಿವರಾಮ್ ಶೆಟ್ಟಿ ಇತರರಿದ್ದರು.