ಕೊಪ್ಪ ಪಿಕಾರ್ಡ್ ಬ್ಯಾಂಕ್‌ಗೆ 62.22 ಲಕ್ಷ ರೂ. ಲಾಭ

ಹೆಚ್.ಎಸ್ ಇನೇಶ್
ಹೆಚ್.ಎಸ್ ಇನೇಶ್
Published on
ಕೊಪ್ಪ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಕಾರ್ಡ್) ಪ್ರಸಕ್ತ ಸಾಲಿನಲ್ಲಿ 62.22 ಲಕ್ಷ ರೂ.ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಇನೇಶ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025-26 ಸಾಲಿನ ಮಾರ್ಚ್ ವೇಳೆಗೆ ಒಟ್ಟು ಶೇ.71.12 ರಷ್ಟು ವಸೂಲಾತಿ ಸಾಧಿಸಿದೆ. ಚಾಲ್ತಿ ಸಾಲ ಶೇ.97.20 ವಸೂಲಾತಿಯಾಗಿದೆ. ನಬಾರ್ಡ್ ಯೋಜನೆಯಿಂದ 96 ರೈತರಿಗೆ 6.9 ಕೋಟಿ ರೂ. ದೀರ್ಘಾವಧಿ ಸಾಲ ರೂ.ಸಾಲ ನೀಡಲಾಗಿದೆ. ಸ್ವಂತ ಬಂಡವಾಳ ಯೋಜನೆಯಲ್ಲಿ 7 ಜನರಿಗೆ 12.50 ಲಕ್ಷ ರೂ.ಸಾಲ ವಿತರಿಸಲಾಗಿದೆ ಎಂದರು.
ರಾಜ್ಯ ಬ್ಯಾಂಕ್‌ಗೆ ನಮ್ಮ ಬ್ಯಾಂಕ್ ಯಾವುದೇ ರೀತಿಯ ಸುಸ್ತಿಯಾಗಿಲ್ಲ. ಇದರಿಂದ 2026-27ನೇ ಸಾಲಿನಲ್ಲಿ ನಮ್ಮ ಬ್ಯಾಂಕ್‌ಗೆ ಹೊಸದಾಗಿ 7.24 ಕೋಟಿ ರೂ. ಲಕ್ಷ ಸಾಲದ ಆರ್ಥಿಕ ಹಂಚಿಕೆಯಾಗಿದೆ. ಸಹಕಾರ ಇಲಾಖೆಯಿಂದ ಅನುಮತಿ ಪಡೆದು ನಮ್ಮ ಬ್ಯಾಂಕಿನ ಹಳೆಯ ಕಟ್ಟಡ ನೆಲಸಮಗೊಳಿಸಿದ್ದು, ಈ ಜಾಗದಲ್ಲಿ 70.66 ಲಕ್ಷ ರೂ. ವೆಚ್ಚದಲ್ಲಿ ಹೊಸ ಗೋದಾಮು ಕಟ್ಟಡ ನಿರ್ಮಾಣ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಹಲವು ವರ್ಷಗಳ ಹಿಂದೆ ಸ್ವಂತ ಬಂಡವಾಳದ ಯೋಜನೆಯಲ್ಲಿ ಶೇ.20, 18, 15 ರಂತೆ ವಿವಿಧ ಯೋಜನೆಗಳಲ್ಲಿ ನೀಡಿರುವ ಸಾಲಗಳಿಗೆ ಸಹಕಾರ ಸಂಘಗಳ ನಿಬಂಧಕರು ಸುತ್ತೋಲೆಯಂತೆ ಏಕಕಾಲಿಕ ಸಾಲ ತೀರುವಳಿ ಯೋಜನೆಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದರು.
ಆಡಳಿತ ಮಂಡಳಿ ಹಿರಿಯ ಸದಸ್ಯ ಹೊಲಗೋಡು ಬಡಿಯಣ್ಣ, ಬಿ.ಎಸ್.ಸತೀಶ್, ನಾಮ ನಿರ್ದೇಶಿತ ಸದಸ್ಯ ಗಣಪತಿ, ನಿರ್ದೇಶಕರಾದ ಆದರ್ಶ, ಪ್ರಪುಲ್ ಚಂದ್ರ, ನಿರ್ದೇಶಕರಾದ ನುಗ್ಗಿ ನಾಗೇಶ್, ಸಾಯಿನಾಥ್, ಗೋಪಾಲ್‌ನಾಯ್ಕ, ಬಿಲಗದ್ದೆ ಬಡಿಯಣ್ಣ, ವಿಷಯ ಪರಿಣಿತ ನಿರ್ದೇಶಕ ಜೆ.ಎಂ.ಶ್ರೀಹರ್ಷ, ವ್ಯವಸ್ಥಾಪಕ ಶ್ರೀಮಂತ ಎಂ.ವಾಲಿಕರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net