ವಿದ್ಯುತ್​ ಪೂರೈಕೆಗೆ ಬೇನಚಿಂಚೋಳಿ ಗ್ರಾಮಸ್ಥರ ಮನವಿ

 ಹುಮನಾಬಾದ್​ ತಾಲೂಕಿನ ಬೇನಚಿಂಚೋಳಿ ಗ್ರಾಮದ ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್​ ಪೂರೈಕೆ ಹಾಗೂ ತುಕಾರಾಮ ಮಹಾರಾಜರ ಮಠಕ್ಕೆ ತೆರಳಲು ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹುಮನಾಬಾದ್​ನಲ್ಲಿ ಮಂಗಳವಾರ ಮಾಜಿ ಸಚಿವ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದರು. ಮಂಜುನಾಥ ಖೇರೋಜಿ, ಬಳಿರಾಮ ಜಮಾದಾರ, ಪುಂಡಲೀಕ ಭಂಡಾರಿ, ಶಿವಶರಣ ಕಟ್ಟಿಮನಿ ಇತರರಿದ್ದರು.

Published on: 

ಹುಮನಾಬಾದ್​: ಬೇನಚಿಂಚೋಳಿ ಗ್ರಾಮದ ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್​ ಪೂರೈಕೆ ಹಾಗೂ ತುಕಾರಾಮ ಮಹಾರಾಜರ ಮಠಕ್ಕೆ ತೆರಳಲು ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಮಾಜಿ ಸಚಿವ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದರು. ಹಲವು ದಿನಗಳಿಂದ ರೈತರ ಹೊಲಗಳಿಗೆ ಸಮರ್ಪಕವಾಗಿ ವಿದ್ಯುತ್​ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ಬೆಳೆಗಳು ಒಣಗುವ ಸ್ಥಿತಿ ನಿಮಾರ್ಣವಾಗಿದೆ. ರೈತರು ಹಾಗೂ ಜಾನುವಾರುಗಳಿಗೂ ಇದರಿಂದ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಮನವಿ ಸ್ವೀಕರಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ್​, ಬೇನಚಿಂಚೋಳಿ ಗ್ರಾಮದ ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್​ ಪೂರೈಕೆ ಹಾಗೂ ತುಕಾರಾಮ ಮಹಾರಾಜರ ಮಠಕ್ಕೆ ತೆರಳಲು ದಾರಿ ವ್ಯವಸ್ಥೆ ಕಲ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿ, ಗ್ರಾಮಸ್ಥರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರಮುಖರಾದ ಮಂಜುನಾಥ ಖೇರೋಜಿ, ಬಳಿರಾಮ ಜಮಾದಾರ, ಪುಂಡಲೀಕ ಭಂಡಾರಿ, ಶಿವಶರಣ ಕಟ್ಟಿಮನಿ, ಭೀಮಶಾ ಬೀರ್ಗಿ, ಪಂಡಿತ ಪಾಟೀಲ್​, ತುಕಾರಾಮ ಬಡಿಗೇರ್​, ಮಲ್ಲಿಕಾರ್ಜುನ ದಂಡೆ, ರಾಜು ಕಟ್ಟಿಮನಿ, ಯೋಗೇಶ ವಮಾರ್, ಅಂಬಣ್ಣ ಹಣಕುಣಿ, ನಾಗಣ್ಣ ಮೇತ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net