More

    ಇಸ್ಲಾಂನಲ್ಲಿಲ್ಲ ಅಹಿಂಸೆ ಪ್ರಚೋದಿಸುವ ಬೋಧನೆ: ಮೌಲಾನಾ ಯು.ಕೆ ಅಬ್ದುಲ್ ಅಝೀಝ್ ದಾರಿಮಿ

    ಬ್ರಹ್ಮಾವರ: ಮುಸ್ಲಿಂ ಅಂದರೆ ಒಂದು ಜೀವನ ಕ್ರಮ. ಇಲ್ಲಿ ಎಲ್ಲಿಯೂ ಅಹಿಂಸೆಯನ್ನು ಬೋಧಿಸಿಲ್ಲ. ಜನರ ಸೊತ್ತು ಮತ್ತು ಜೀವಕ್ಕೆ ರಕ್ಷಣೆ ನೀಡಬಲ್ಲ ವ್ಯಕ್ತಿಯೇ ರಾಜನಾಗಬಹುದು. ಅಥವಾ ಪ್ರವಾದಿಯಾಗಬಹುದು ಎಂದು ಚೊಕ್ಕಬೆಟ್ಟು ಜುಮ್ಮಾ ಮಸೀದಿಯ ಇಮಾಮ ಮೌಲಾನಾ ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.
    ಶುಕ್ರವಾರ ಬ್ರಹ್ಮಾವರದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬ್ರಹ್ಮಾವರ ತಾಲೂಕು ವತಿಯಿಂದ ಪ್ರವಾದಿ ಮಹಮ್ಮದ್ ಜೀವನ ಮತ್ತು ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಮ್ಮದ್ ಎನ್ನುವ ವ್ಯಕ್ತಿಯಲ್ಲಿ ಅನೇಕ ಗುಣಗಳ ಸಂಗಮ ಇರುವುದರಿಂದ ಅವರು ಪ್ರವಾದಿಯಾಗಿ ಮಾನವ ಕುಲಕ್ಕೆ ಉತ್ತಮ ಸಂದೇಶ ನೀಡಿದರು ಎಂದರು.

    ಮುಖ್ಯ ಅತಿಥಿ ಬ್ರಹ್ಮಾವರ ಎಸ್‌ಎಂಎಸ್ ಚರ್ಚ್‌ನ ಧರ್ಮಗುರು ಫಾಧರ್ ಲಾರೆನ್ಸ್ ಡೇವಿಡ್ ಕ್ರಾಸ್ತ ಮಾತನಾಡಿ ಎಲ್ಲ ಧರ್ಮಗಳು ಮತ್ತು ಯುಗಪುರುಷರು ಉತ್ತಮ ಸಂದೇಶ ನೀಡಿದ್ದಾರೆ. ಅದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಜೀವಿಸಬೇಕು ಎಂದರು.

    ಒಕ್ಕೂಟದ ಉಡುಪಿ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಯಾಸೀನ್ ಮಲ್ಪೆ, ಚಾರ್ಟಡ್ ಅಕೌಂಟರ್ ಇಸಾಕ್ ಪೂತ್ತೂರು ಮತ್ತು ಸ್ಥಳೀಯ ನಾನಾ ಸಂಘಟನೆಯ ಮುಖಂಡರಾದ ನಿತ್ಯಾನಂದ ಶೆಟ್ಟಿ, ಬಿ.ಎನ್ ಶಂಕರ ಪೂಜಾರಿ, ಶ್ಯಾಮರಾಜ್ ಬಿರ್ತಿ, ಶಂಕರ ಕುಂದರ್, ನರೇಂದ್ರ ಕುಮಾರ್ ಕೋಟ ಇನ್ನಿತರು ಉಪಸ್ಥಿತರಿದ್ದರು.
    ಮೌಲಾನಾ ಇಮ್ದಾದುಲ್ಲಾಹ್ ಖಾನ್ ಕುರಾನ್ ಪಠಣ ಮಾಡಿದರು. ಬ್ರಹ್ಮಾವರ ತಾಲೂಕು ಒಕ್ಕೂಟದ ಅಧ್ಯಕ್ಷ ಇಬ್ರಾಹಿಮ್ ಸಾಹೇಬ್ ಕೋಟ ಸ್ವಾಗತಿಸಿ ತಾಜುದ್ದೀನ್ ವಂದಿಸಿ ಮಹಮ್ಮದ್ ಅಝಾದ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts