More

    ಖೋ-ಖೋ ಪಂದ್ಯಾವಳಿ: ಹರದನಹಳ್ಳಿ, ಕುರುಬೂರು ಪಾರಮ್ಯ


    ಮೈಸೂರು:
    ಟೂರ್ನಿಯುದ್ದಕ್ಕೂ ಸಾಂಘಿಕ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದ ಹರದನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಕುರುಬೂರಿನ ನಿರ್ವಾಣಸ್ವಾಮಿ ಪ್ರೌಢಶಾಲೆ ತಂಡಗಳ ಕ್ರಮವಾಗಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿದವು.


    ಅಂತೆಯೇ, ಬಾಲಕಿಯರ ವಿಭಾಗದಲ್ಲಿ ಕೆ.ಪುಟ್ಟಸ್ವಾಮಿ, ಹರದನಹಳ್ಳಿಯ ಸರ್ಕಾರಿ ಪ್ರೌಢಶಾಲಾ ತಂಡಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದವು. ಪಂದ್ಯಾವಳಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ಕುರುಬೂರಿನ ನಿರ್ವಾಣಸ್ವಾಮಿ ಪ್ರೌಢಶಾಲೆಯ ಸ್ಮಿತಾ ಆಲ್‌ರೌಂಡರ್ ಪ್ರಶಸ್ತಿ ಪಡೆದರು. ಕೆ.ಪುಟ್ಟಸ್ವಾಮಿ ತಂಡ ಕಾವ್ಯಾ ಬೆಸ್ಟ್ ಚೇಸರ್ ಹಾಗೂ ಹರದನಹಳ್ಳಿ ಶಾಲಾ ತಂಡ ಅನಿತಾ ಬೆಸ್ಟ್ ಡಿಫೆಂಡರ್ ಪ್ರಶಸ್ತಿಗೆ ಭಾಜನರಾದರು.


    ಬಾಲಕರ ವಿಭಾಗದಲ್ಲಿ ಕುರುಬೂರಿನ ನಿರ್ವಾಣಸ್ವಾಮಿ ಪ್ರೌಢಶಾಲೆ, ಕೆ.ಪುಟ್ಟಸ್ವಾಮಿ ತಂಡಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದವು. ಹರದನಹಳ್ಳಿಯ ಶಾಲೆಯ ವಿಜಯ್ ಆಲ್‌ರೌಂಡರ್, ಕುರುಬೂರಿನ ನಿರ್ವಾಣಸ್ವಾಮಿ ಪ್ರೌಢಶಾಲೆಯ ಮೋಹನ್ ಕುಮಾರ್ ಬೆಸ್ಟ್ ಚೇಸರ್ ಹಾಗೂ ಹರದನಹಳ್ಳಿ ಶಾಲಯಯ ಅಜಯ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿಗೆ ಭಾಜನರಾದರು.
    ದಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪೆವಿಲಿಯನ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯಾವಳಿಯ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಹರದನಹಳ್ಳಿ ಶಾಲಾ ತಂಡವು 3 ಅಂಕ ಮತ್ತು ಇನಿಂಕ್ಸ್‌ನಿಂದ ಕುರುಬೂರಿನ ನಿರ್ವಾಣಸ್ವಾಮಿ ಪ್ರೌಢಶಾಲೆ ವಿರುದ್ಧ ಭರ್ಜರಿ ಜಯ ಸಾಧಿಸಿತು.


    ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಕುರುಬೂರಿನ ನಿರ್ವಾಣಸ್ವಾಮಿ ಪ್ರೌಢಶಾಲೆ ತಂಡವು 10 ಅಂಕಗಳಿಂದ ಕೆ.ಪುಟ್ಟಸ್ವಾಮಿ ಶಾಲಾ ತಂಡದ ವಿರುದ್ಧ ಜಯ ಸಾಧಿಸಿತು.

    ಪ್ರಶಸ್ತಿ ವಿತರಣೆ: ಗೆಲುವು ಪಡೆದ ತಂಡಗಳಿಗೆ ದಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಬಹುಮಾನ ವಿತರಿಸಿದರು. ವಿಜೇತ ತಂಡಗಳಿಗೆ ಮೊದಲ ಬಹುಮಾನವಾಗಿ 25 ಸಾವಿರ ರೂ., ಎರಡನೇ ಬಹುಮಾನವಾಗಿ 15 ಸಾವಿರ ರೂ., 3ನೇ ಬಹುಮಾನವಾಗಿ 10 ಸಾವಿರ ರೂ. ನಗದು ಮತ್ತು ಆಕರ್ಷಕ ಪಾರಿತೋಷಕ ನೀಡಲಾಯಿತು.ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ ಮಹದೇವಪ್ಪ, ಸಚ್ಚಿದಾನಂದ, ಖೋ ಖೋ ಮಾಜಿ ಆಟಗಾರ ಗುರುದತ್, ವಿಶ್ವನಾಥ್, ಕರ್ನಲ್ ಶ್ಯಾಮ್ ಸುಂದರ್, ಎಸ್.ವಿಜಯ್ ಪ್ರಕಾಶ್, ನಟರಾಜನ್, ಎಂ.ಆರ್.ಸುರೇಶ್ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts