More

    ಕೊಪ್ಪಳದಲ್ಲಿ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ

    ಕೊಪ್ಪಳ: ಚುನಾವಣೆ ಜನತಂತ್ರ ಉತ್ಸವ. ಎಲ್ಲೂ ಭಾಗವಹಿಸಿ ಮತದಾನ ಮಾಡಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಮನವಿ ಮಾಡಿದರು.

    ಜಿಲ್ಲಾಡಳಿತದಿಂದ ನನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದದ ಮತದಾನ ಜಾಗೃತಿ ವಾಕ್​ಥಾನ್​ನಲ್ಲಿ ಮಾತನಾಡಿದರು.

    ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಪ್ರತಿಯೊಬ್ಬರು ವಿವೇಚನೆಯಿಂದ ಮತ ಚಲಾಯಿಸಬೇಕು. ಮತದಾನ ಮಾಡುವುದರಿಂದ ಯಾರೊಬ್ಬರೂ ದೂರ ಉಳಿಯಬೇಡಿ. ಎಲ್ಲರ ಮತಕ್ಕೂ ಮೌಲ್ಯವಿದೆ. ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲರೂ ಸಹಕರಿಸಿ. ನೊ ಯುವರ್​ ಕ್ಯಾಂಡಿಯೆಟ್ಸ್​ ಆ್ಯಪ್​ ಮೂಲಕ ಚುನಾವಣೆಯಲ್ಲಿರುವ ಅಭ್ಯರ್ಥಿಗಳ ಮಾಹಿತಿ ತಿಳಿದುಕೊಳ್ಳಿ ಎಂದರು.

    ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನ ಜಾಗೃತಿ ರಾಯಭಾರಿಗಳಾಗಿ ಆಯ್ಕೆಯಾದ ಡಾ.ಶಿವಕುಮಾರ ಮಾಲಿ ಪಾಟೀಲ್​, ಪೂರ್ಣಿಮಾ ಏಳುಬಾವಿ, ರಮ್ಯಾ ಹಾಗೂ ಮೆಹಬೂಬ್​ ಕಿಲ್ಲೆದಾರ್​ ಮತದಾನ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಸಹಿ ಸಂಗ್ರಹ ಬೋರ್ಡ್​ನಲ್ಲಿ ಡಿಸಿ, ಸಿಇಒ, ಎಸ್ಪಿ ಸೇರಿ ಎಲ್ಲ ಅಧಿಕಾರಿಗಳು ಸಹಿ ಮಾಡಿ ಅಭಿಯಾನಕ್ಕೆ ಕೈ ಜೋಡಿಸಿದರು.

    ಕಾಲ್ನಡಿಗೆ ಜಾಥಾ ತಾಲೂಕು ಕ್ರೀಡಾಂಗಣದಿಂದ ಆರಂಭವಾಗಿ, ಸಾಲಾರ ಜಂಗ್​ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತವರೆಗೆ ಸಾಗಿತು. ಎಸ್ಪಿ ಯಶೋದಾ ವಂಟಗೋಡಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್​, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ ಇತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts