More

    ತಾಲೂಕುವಾರು ಅಂತಿಮ ಮತದಾರರ ಪಟ್ಟಿ ಪ್ರಕಟ

    ಕೊಪ್ಪಳ: ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಡಿ.30ರಂದು ಪ್ರಕಟಿಸಿದ್ದು, ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ, ಎಸಿ ಕಚೇರಿ, ತಹಸೀಳ್ದಾರ್​ ಕಚೇರಿ ಅಥವಾ ಜಿಲ್ಲಾ ವೆಬ್​ಸೈಟ್​ ಜಠಿಠಿಟಠ://ಟಟಟಚ್ಝ.್ಞಜ್ಚಿ.ಜ್ಞಿ/ ನಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ತಿಳಿಸಿದ್ದಾರೆ.


    ಕುಷ್ಟಗಿ ತಾಲೂಕಿನಲ್ಲಿ 1,523 ಪುರುಷ, 620 ಮಹಿಳೆ ಸೇರಿ 2,143 ಪದವೀಧರ ಮತದಾರರು, ಕನಕಗಿರಿ 474 ಪುರುಷ, 182 ಮಹಿಳೆ ಸೇರಿ 656, ಕಾರಟಗಿ 767 ಪುರುಷ, 347 ಮಹಿಳೆ ಸೇರಿ 1,114, ಗಂಗಾವತಿ 1,908 ಪುರುಷ, 1,229 ಮಹಿಳೆ ಸೇರಿ 3,137, ಯಲಬುರ್ಗಾ 928 ಪುರುಷ, 380 ಮಹಿಳೆ ಸೇರಿ 1,308, ಕುಕನೂರು 718 ಪುರುಷ, 358 ಮಹಿಳೆ ಸೇರಿ 1,076, ಕೊಪ್ಪಳ 2,608 ಪುರುಷ, 1,363 ಮಹಿಳೆ ಸೇರಿ 3,971 ಮತದಾರರಿದ್ದಾರೆ.

    ಜಿಲ್ಲಾದ್ಯಂತ 8926 ಪುರುಷ, 4479 ಮಹಿಳೆ ಒಳಗೊಂಡು 13,405 ಪದವೀಧರ ಮತದಾರರ ಪಟ್ಟಿ ಅಂತಿಮಗೊಳಿಸಲಾಗಿದೆ. ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಪ್ರಕ್ರಿಯೆಯು ನಿರಂತರ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts