More

    ತರಬೇತಿ ಕಾರ್ಯಾಗಾರದಲ್ಲಿ ಶಿಕ್ಷಕರ ಸಂಘದ ಆಕ್ಷೇಪ


    ಕೊಪ್ಪಳ:ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಣೆಗಾಗಿ ಸೋಮವಾರ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಶಿಕ್ಷಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

    ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರನ್ನು ಆಹ್ವಾನಿಸಲಾಗಿತ್ತು. ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಿದ್ದು, ವೇದಿಕೆ ಮೇಲೆ ಕರೆದಿಲ್ಲ. ಸ್ವಾಗತ ಭಾಷಣದಲ್ಲೂ ಹೆಸರು ಉಲ್ಲೇಖಿಸದೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದಾರೆ.

    ಲಿತಾಂಶ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಆಹ್ವಾನ ನೀಡಿದ್ದಕ್ಕೆ ತರಗತಿ ಬಿಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ದೆವು ಎಂದು ಸಂದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ಬಾಬುಸಾಬ್​ ಲೈನ್​ದಾರ್​ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಡಿಪಿಐ ಶ್ರೀಶೈಲ ಬಿರಾದಾರ್​ಗೆ ಮನವಿ ಸಲ್ಲಿಸಿದರು.

    ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ, ಕಾರ್ಯದರ್ಶಿ ಶಂಕರಗೌಡ ಮಾಲಿ ಪಾಟೀಲ್​, ರಾಜ್ಯ ಉಪಾಧ್ಯಕ್ಷ ಜಾಕೀರ ಹುಸೇನ್​ ಇತರರಿದ್ದರು.

    ಕಾದು ಸುಸ್ತಾದ ಶಿಕ್ಷಕರು: ತರಬೇತಿ ಕಾರ್ಯಗಾರ ಸಂಬಂಧ ಬೆಳಗ್ಗೆ 10 ಗಂಟೆಗೆ ಶಿಕ್ಷಕರು ಆಡಿಟೋರಿಯಂ ಹಾಲ್​ಗೆ ಬಂದಿದ್ದರು. ಬೇರೊಂದು ಸಭೆ ಕಾರಣ ಡಿಸಿ ನಲಿನ್​ ಅತುಲ್​ ಹಾಗೂ ಇತರ ಅಧಿಕಾರಿಗಳು ಕಾರ್ಯಾಗಾರಕ್ಕೆ ಆಗಮಿಸಿರಲಿಲ್ಲ. ಮಧ್ಯಾಹ್ನದವರೆಗೂ ವಿವಿಧ ಅಧಿಕಾರಿಗಳನ್ನು ಮಾತನಾಡಿಸಲಾಯಿತು. ಮಧ್ಯಾಹ್ನ ಊಟದ ವ್ಯವಸ್ಥೆಯನ್ನೂ ಕೈಗೊಂಡಿರಲಿಲ್ಲ. ಇದರಿಂದ ಕೆಲ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು. ಮಧ್ಯಾಹ್ನ ಬಳಿಕ ಡಿಸಿ ಆಗಮಿಸಿ ಕಾರ್ಯಾಗಾರ ಮುಂದುವರೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts