More

    ಹಿಂದು ವಿರೋಧಿ ಸರ್ಕಾರ ವಿಸರ್ಜಿಸಿ, ಪ್ರಮೋದ ಮುತಾಲಿಕ್​ ಆಗ್ರಹ

    ಕೊಪ್ಪಳ: ರಾಜ್ಯದಲ್ಲಿ ಕೊಲೆಗಳು ಹೆಚ್ಚುತ್ತಿದ್ದು, ಕಾನೂನು&ಸುವ್ಯವಸ್ಥೆ ಹಾಳಾಗಿದೆ. ಹಿಂದುಗಳಿಹೆ ರಕ್ಷಣೆ ಇಲ್ಲದಂತಾಗಿದ್ದು ಹಿಂದು ವಿರೋಧಿ ಕಾಂಗ್ರೆಸ್​ ಸರ್ಕಾರ ವಿಸರ್ಜಿಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್​ ಆಗ್ರಹಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

    ಗದಗಿನಲ್ಲಿ ನಾಲ್ವರ ಹತ್ಯೆಯಾಗಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾಳನ್ನು ಹಾಡು ಹಗಲೇ ಕೊಲೆ ಮಾಡಲಾಗಿದೆ. ಚಿತ್ರದುರ್ಗ ಸೇರಿ ವಿವಿಧೆಡೆ ನಿರಂತರ ಹತ್ಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹಾಳಾಗಿದೆ. ಇಲ್ಲಿ ಜೈಶ್ರೀರಾಮ್​ ಹೇಳುವಂತಿಲ್ಲ. ಅಲ್ಲಾಹೋ ಅಕ್ಬರ್​, ಪಾಕಿಸ್ತಾನ ಜಿಂದಾಬಾದ್​ ಎನ್ನಬಹುದು. ಹಿಂದು ವಿರೋಧಿ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರ ಕಿತ್ತು ಬಿಸಾಕಬೇಕು. ಅದಕ್ಕೆ ರಾಜ್ಯಾದ್ಯಂತ ಸಂಚರಿಸಿ ಡಿಸಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಸರ್ಕಾರ ವಿಸರ್ಜಿಸಿ ರಾಜ್ಯಪಾಲರ ಆಡಳಿತ ಜಾರಿ ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.

    ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಗುರಿ. ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಮುಂದಾಗಿದ್ದೇವೆ. ಜತೆಗೆ ಮೋದಿ ಹೆಸರಲ್ಲಿ ಸಂಸದರಾದ ಮೇಲೆ 5 ವರ್ಷ ಸುಮ್ಮನೆ ಕೂಡುವಂತಿಲ್ಲ. ಚುನಾವಣೆ ಬಂದಾಗಲಷ್ಟೇ ಸಕ್ರಿಯವಾದರೆ ಇನ್ನು ಮುಂದೆ ಕೇಳುವುದಿಲ್ಲ. ನಾವು ಆಯ್ಕೆ ಮಾಡುವವರು ಏಕರೂಪ ನಾಗರಿಕ ಸಂಹಿತೆ, ಗೋಹತ್ಯೆ ನಿಷೇಧ ಕಾನೂನು, ವಕ್ಫ್​ ಬೋರ್ಡ್​ ರದ್ದು, ಗೋವು ರಾಷ್ಟ್ರೀಯ ಪ್ರಾಣಿ ಘೋಷಣೆ, ಅಕ್ರಮ ಚರ್ಚ್​, ಮಸೀದಿ, ದೇವಾಲಯಗಳನ್ನು ತೆರವುಗೊಳಿಸಬೇಕೆಂದು ಸದನದಲ್ಲಿ ದನಿ ಎತ್ತಬೇಕು ಎಂದು ತಾಕೀತು ಮಾಡಿದರು.

    ಮುಜರಾಯಿ ಇಲಾಖೆಯಿಂದ ಬರುವ ಕೋಟ್ಯಂತರ ರೂ.ಗಳನ್ನು ಸರ್ಕಾರ ಬಳಸಬಾರದು. ಬದಲಿಗೆ ಧಾರ್ಮಿಕ ಚಟುವಟಿಕೆ, ದೇವಾಲಯ ಅಭಿವೃದ್ಧಿಗೆ ಬಳಕೆ ಮಾಡಬೇಕು. ಹಿಂದು ವಿರೋಧಿ ಕಾನೂನುಗಳನ್ನು ರದ್ದು ಮಾಡಬೇಕು. 1947ರಲ್ಲಿ ಇದ್ದ ಧಾರ್ಮಿಕ ಸಂಸ್ಥೆಗಳು ಹಾಗೇ ಇರಬೇಕೆಂಬ ಕಾಯ್ದೆ ತಿದ್ದುಪಡಿಯಾಗಬೇಕು. ನಮ್ಮ ಮಂದಿರಗಳು ನಮಗೆ ಬೇಕೆಂದು ಹೋರಾಡಬೇಕು. ಅಯೋಧ್ಯೆ&ಅಂಜನಾದ್ರಿ ರೈಲು ಆರಂಭ, ಅಂಜನಾದ್ರಿ ಅಭಿವೃದ್ಧಿ, ಸರ್ಕಾರಿ ಆಸ್ಪತ್ರೆ, ಶಾಲೆಗಳ ಬಲವರ್ದನೆ, ಹಿಂದುತ್ವಕ್ಕಾಗಿ ಹೋರಾಡಿದವರ ಮೇಲಿನ ಕೇಸ್​ಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

    ನಾವು ಈ ಬಾರಿ ಅನೇಕ ಷರತ್ತು ಹಾಕಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇವೆ. ಅವರು ಅಧಿಕಾರಕ್ಕೆ ಬಂದ ಮೇಲೆ ಕೆಲಸ ಮಾಡಬೇಕು. ಇಲ್ಲದಿದ್ದರೆ ಅವರ ಮನೆ ಮುಂದೆ ಧರಣಿ ನಡೆಸುತ್ತೇವೆ. ನಾಲ್ಕೆ$ದು ಬಾರಿ ಗೆದ್ದವರು ಮೋದಿ ಹೆಸರೇಳುವುದು ಬೇಡ. ನಿಮ್ಮ ಸೇವೆ ಏನೆಂದು ತಿಳಿಸಿ. ಅದು ಬಿಟ್ಟು ಮೋದಿ ಎಂದು ಮತ ಕೇಳುವವರಿಗೆ ಚಪ್ಪಲಿ ಹೊಡೆಯಿರಿ ಎಂದು ಎರಡು ವರ್ಷದ ಹಿಂದೆ ಹೇಳಿದ್ದೆ.

    ಪ್ರಮೋದ ಮುತಾಲಿಕ್​. ಶ್ರೀರಾಮ ಸೇನೆ ಸಂಸ್ಥಾಪಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts