More

    ಮಾವು ಪ್ರದರ್ಶನ, ಮಾರಾಟ ಮೇಳ ಮೇ 13ರಿಂದ

    ಕೊಪ್ಪಳ: ಕಳೆದ ವರ್ಷ ಮಳೆ ಕೊರತೆಯಿಂದ ತಾಪಮಾನ ಹೆಚ್ಚಳದ ಜತೆಗೆ ನಾನಾ ಅಡ್ಡ ಪರಿಣಾಮಗಳನ್ನು ಎದುರಿಸುವಂತಾಗಿದೆ. ಮಾವು ಬೆಳೆಗಾರರಿಗೂ ಬಿಸಿ ಮುಟ್ಟಿದ್ದು, ಇವಳುವರಿ ಕುಂಠಿತೊಂಡಿದೆ. ಅಲ್ಪ ಪ್ರಮಾಣದಲ್ಲಿ ಹಣ್ಣು ಬಂದಿದ್ದು, ತೋಟಗಾರಿಕೆ ಇಲಾಖೆ ಮೇ 13ರಿಂದ ಮೇಳ ಆಯೋಜಿಸುವ ಮೂಲಕ ಸೂಕ್ತ ಮಾರುಕಟ್ಟೆ ಕಲ್ಪಿಸಲು ಮುಂದಾಗಿದೆ.

    ಜಿಲ್ಲೆಯ ವಾತಾವರಣ ತೋಟಗಾರಿಕೆ ಬೆಳೆಗಳಿಗೆ ಸೂಕ್ತವಾಗಿದೆ. ಅದರಲ್ಲೂ 3 ಸಾವಿರ ಹೆಕ್ಟರ್​ಗಿಂತ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಕೇಸರ್​, ತೋತಾಪುರಿ, ಬೆನಶಾನ್​, ದಶಹರಿ, ಮಲ್ಲಿಕಾ ಸೇರಿ 10-12 ತಳಿ ಮಾವು ಬೆಳೆಯಲಾಗುತ್ತಿದೆ. ಅದರಲ್ಲೂ ಕೇಸರ್​ ಹಣ್ಣು ಪ್ರಸಿದ್ಧವಾಗಿದ್ದು, ತೋಟಗಾರಿಕೆ ಇಲಾಖೆಯಿಂದ “ಕೊಪ್ಪಳ ಬ್ರ್ಯಾಂಡ್​’ ಸೃಷ್ಟಿಸಿದ್ದು, ಹೊರ ದೇಶಕ್ಕೂ ರ್ತು ಮಾಡುವ ಮೂಲಕ ಬೇಡಿಕೆ ಸೃಷ್ಟಿಸಲಾಗಿದೆ. ಜತೆ ಜತೆಗೆ ಕಳೆದ 8 ವರ್ಷಗಳಿಂದ ಕೊಪ್ಪಳದಲ್ಲಿ ಮಾವು ಮೇಳ ಆಯೋಜಿಸುವ ಜತೆಗೆ ರೈತರಿಗೆ ಸ್ಥಳಿಯವಾಗಿ ಮಾರುಕಟ್ಟೆ ಸೃಷ್ಟಿ, ಹೊಸ ತಳಿ ಪರಿಚಯ, ರ್ತು, ಉಪ ಉತ್ಪನ್ನಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ.

    ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಮಾವು ಉತ್ಪಾದನೆಯಲ್ಲಿ ಏರಿಳಿತ ಸಹಜ. ವಾತಾವರಣ ಆಧರಿಸಿ ಬದಲಾವಣೆ ಆಗುತ್ತದೆ. ಆದರೆ, ಕಳೆದ ವರ್ಷ ಮಳೆ ಕೊರತೆ ತೀವ್ರ ಕಾಡಿದೆ. ಬಿಸಿಲಿನ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ ತಲುಪಿದೆ. ಪರಿಣಾಮ ಮಾವು ಬೆಳೆ ಮೇಲೆ ಅಡ್ಡ ಪರಿಣಾಮವಾಗಿದೆ. ಹೂ ಉತ್ತಮವಾಗಿ ಕಟ್ಟಿದ್ದರೂ ಬಿಸಿಲಿತ ಹೊಡೆತಕ್ಕೆ ಹೂ, ಕಾಯಿ ಉದುರುವಿಕೆ ಹೆಚ್ಚಾಗಿದೆ. ಇದರಿಂದ ಶೇ.50ರಷ್ಟು ಇಳುವರಿ ಕುಂಠಿತಗೊಂಡಿದೆ.

    ಹೀಗಾಗಿ ಗುತ್ತಿಗೆದಾರರು ಮಾವು ತೋಟ ಲೀಸ್​ಗೆ ಪಡೆಯಲು ಅಷ್ಟಾಗಿ ಮುಂದೆ ಬಂದಿಲ್ಲ. ಮುಂಗಡವಾಗಿ ಪಡೆದವರು ನಷ್ಟ ಅನುಭವಿಸುವಂತಾಗಿದೆ.
    ರೈತರ ಮೇಲೆ ಹೊರೆ ಹೆಚ್ಚಿದ್ದು, ಅಲ್ಪ ಬೆಳೆಯಲ್ಲಿಯೇ ನಷ್ಟ ಸರಿದೂಗಿಸುವ ಸವಾಲು ಎದುರಾಗಿದೆ. ಇನ್ನು ಕಳೆದ 8 ವರ್ಷದಿಂದ ಮಾವು ಮೇಳ ಆಯೋಜಿಸುತ್ತಿರುವ ತೋಟಗಾರಿಕೆ ಇಲಾಖೆ ಮೇ 13ರಿಂದ 21ವರೆಗೆ ಮೇಳ ಆಯೋಜನೆ ನಿರ್ಧರಿಸಿದೆ. ಈ ಮೂಲಕ ಸ್ಥಳಿಯವಾಗಿಯೇ ಮಾವು ಬೆಳೆಗಾರರಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿದೆ.

    ಹಣ್ಣುಗಳ ಉತ್ಪಾದನೆ ಕಡಿಮೆ ಇರುವ ಕಾರಣ ಮಾವಿನ ಉಪ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪರಿಚಯಿಸಲು ಯೋಜಿಸಿದೆ. ಮಾವು ಮೌಲ್ಯವರ್ಧನೆ ಮಾಡುವ ವಿಧಾನ ಮಾಹಿತಿ, ಸಂಬಂಧಿಸಿದ ಯೋಜನೆಗಳು, ಇಲಾಖೆ ನೆರವು ಹಾಗೂ ತಾಂತ್ರಿಕತೆ ಮಾಹಿತಿ ಮೇಳದಲ್ಲಿ ದೊರೆಯಲಿದೆ.

    ಮಿಯಾ ಜಾಕಿ ಆಗಮನ
    ಜಗತ್ತಿನ ದುಬಾರಿ ಮಾವು ಎಂದು ಖ್ಯಾತಿಯಾಗಿರುವ ಮಿಯಾ ಜಾಕಿ ತಳಿ ಮಾವು ಕಳೆದ ವರ್ಷ ನೋಡುಗರ ಗಮನ ಸೆಳೆದಿತ್ತು. ಅದರಿಂದ ಪ್ರೇರಿತರಾಗಿ ಅನೇಕ ರೈತರು ಮಾವು ನಾಟಿ ಮಾಡಿದ್ದಾರೆ. ಸಾಕಷ್ಟು ಬೇಡಿಕೆಯೂ ಸೃಷ್ಟಿಯಾಗಿದೆ. ಹೀಗಾಗಿ ಈ ವರ್ಷವೂ ಮೇಳದಲ್ಲಿ ಮಿಯಾಜಾಕಿ ಗಮನ ಸೆಳೆಯಲಿದೆ. ಸಸಿಗಳು ಲಭ್ಯವರಿಲಿದ್ದು, ಸ್ಥಳಿಯವಾಗಿ ಬೆಳೆದವರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಇದರಿಂದ ರೈತರಿಗೆ ಸ್ಥಳಿಯ ಬೆಳೆಗಾರರಿಂದಲೇ ತಾಂತ್ರಿಕ ನೆರವು ಲಭಿಸಲಿದೆ. ಸಾಧಕ&ಭಾದಕಗಳ ಪರಿಚಯವೂ ಆಗಲಿದೆ.

    ಕಳೆದ 8 ವರ್ಷದಿಂದ ಮಾವು ಮೇಳ ಆಯೋಜಿಸಲಾಗುತ್ತಿದೆ. ಈ ವರ್ಷ ಮಾವು ಇಳುವರಿ ಕುಂಠಿತವಾಗಿದೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೇ 13ರಿಂದ 21ವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ. ಮೇಳಕ್ಕೆ ಬೇಕಾಗುವಷ್ಟು ಮಾವು ಬರುವ ನಿರೀೆ ಇದೆ. ಪರಿಸ್ಥಿತಿ ನೋಡಿಕೊಂಡು ಮುಂದುವರಿಸಲಾಗುವುದು. ರೈತರು, ಗ್ರಾಹಕರು ಮೇಳದ ಉಪಯೋಗ ಪಡೆದುಕೊಳ್ಳಲಿ.

    ಕೃಷ್ಣ ಉಕ್ಕುಂದ. ತೋಟಗಾರಿಕೆ ಇಲಾಕೆ ಉಪ ನಿರ್ದೇಶಕ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts