More

    ರಕ್ತದಲ್ಲಿ ಪತ್ರ ಬರೆದು ಪ್ರತಿಭಟಿಸಿದ ಕೊಪ್ಪಳ ಅತಿಥಿ ಉಪನ್ಯಾಸಕರು !

    ಕೊಪ್ಪಳ: ಸೇವಾ ಕಾಯಂಗೆ ಆಗ್ರಹಿಸಿ 28 ದಿನಗಳಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಬುಧವಾರ ರಕ್ತದಲ್ಲಿ ಪತ್ರ ಬರೆವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

    ಸೇವಾ ಕಾಯಂಗೊಳಿಸುವುದು, ಸೇವಾ ಭದ್ರತೆ ಒದಗಿಸುವಿಕೆಗೆ ಆಗ್ರಹಿಸಿ 28 ದಿನಗಳಿಂದ ನಿಂತರ ಮುಷ್ಕರ ನಡೆಸುತ್ತಿದ್ದಾರೆ. ಪ್ರತಿಭಟನಾ ಮೆರವಣಿಗೆ, ಮನವಿ ಸಲ್ಲಿಸುವಿಕೆ, ತರಗತಿ ಬಹಿಷ್ಕಾರ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ.

    ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ನೀಡಿದ್ದ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಸರ್ಕಾರದ ನಡೆ ಖಂಡಿಸಿ ಇಂದು ರಕ್ತದಲ್ಲಿ ಸಿಎಂಗೆ ಪತ್ರ ಬರೆದು ಆಕ್ರೋಶ ವ್ಯಕ್ಯಪಡಿಸಿದರು.

    ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆ ಭರವಸೆ ಈಡೇರಿಸಬೇಕು. ಸೇವಾಕಾಯಂಗೊಳಿಸಬೇಕು. ಖಾಲಿ ಉಪನ್ಯಾಸಕರ ಹುದ್ದೆ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.

    ಅತಿಥಿ‌ ಉಪನ್ಯಾಸಕರಾದ ವಿಜಯ ಕುಮಾರ್, ವೀರಣ್ಣ ಸಜ್ಜನರ, ಬಸವರಾಜ ಕರುಗಲ್, ವಾದುದೇವ, ಶಿವಕುಮಾರ್, ಪ್ರಕಾಶ ಬಳ್ಳಾರಿ, ಅಕ್ಕಮಹಾದೇವಿ, ಗಿರಿಜಾ, ಸಾವಿತ್ರಿ, ಗೀತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts