More

    ಕೊಪ್ಪಳದಲ್ಲಿ ಅನಧಿಕೃತ ಶೆಡ್​ ತೆರವುಗೊಳಿಸಿದ ನಗರಸಭೆ ಅಧಿಕಾರಿಗಳು

    ಕೊಪ್ಪಳ: ನಗರದ ಕುವೆಂಪು ನಗರದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್​ಗಳನ್ನು ನಗರಸಭೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.

    ಬಡಾವಣೆಯಲ್ಲಿ ಆಶ್ರಯ ಸಮಿತಿ ಹೆಸರಿನಲ್ಲಿ ಕೆಲವೆಡೆ ಖಾಲಿ ಜಾಗವಿದೆ. ಅಲ್ಲಿ ನಿವೇಶನ ನೀಡುವಂತೆ ಕೆಲವರು ಬೇಡಿಕೆ ಸಲ್ಲಿಸಿದ್ದಾರೆ. ಈ ಸಂಬಂಧ ತಿಂಗಳಿನಿಂದ ನಗರಸಭೆ ಮುಂಭಾಗದಲ್ಲಿ ಧರಣಿ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ರಾವೇಂದ್ರ ಹಿಟ್ನಾಳ್​ ಭರವಸೆ ಬೆನ್ನಲ್ಲೇ ಮುಷ್ಕರ ಹಿಂಪಡೆದಿದ್ದಾರೆ.

    ಡಿ.18ರಂದು ಆಶ್ರಯ ಸಮಿತಿ ಸಭೆ ನಡೆಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
    ಆದರೂ, ಗುರುವಾರ ಕೆಲವರು ಮತ್ತೆ ಶೆಡ್​ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ನಗರಸಭೆ ಅಧಿಕಾರಿಗಳು ಅದನ್ನು ತಡೆದಿದ್ದಾರೆ.

    ಈ ವೇಳೆ ಶೆಡ್​ ನಿರ್ಮಾಣಕ್ಕೆ ಮುಂದಾದವರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ತಿಂಗಳ ಹಿಂದೆ ನಿರ್ಮಸಿದ್ದ ಮತ್ತೆರೆಡು ಶೆಡ್​ಗಳನ್ನು ತೆರವುಗೊಳಿಸುವಂತೆ ನಗರಸಭೆಯಿಂದ ನ.8ರಂದು ನೋಟಿಸ್​ ಜಾರಿಗೊಳಿಸಲಾಗಿದೆ.

    ತಿಂಗಳಾದರೂ ತೆಗೆಯದ ಕಾರಣ ಶುಕ್ರವಾರ ಜೆಸಿಬಿಯೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.

    ನಗರದಲ್ಲಿನ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಭೂಮಿ ಖರೀದಿಗೆ ಟೆಂಡರ್​ ಕರೆದಿದ್ದೇವೆ. ಮುಷ್ಕರ ನಡೆಸುತ್ತಿದ್ದವರಿಗೆ ಸಭೆ ನಡೆಸಿ ನಿವೇಶನ ಹಂಚಿಕೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಆದರೂ, ಕೆಲವರು ಶೆಡ್​ ಹಾಕಲು ಮುಂದಾಗಿದ್ದು, ಅವುಗಳನ್ನು ತೆರವು ಮಾಡಿದ್ದೇವೆ. ತಿಂಗಳ ಹಿಂದೆ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್​ ತೆರವಿಗೆ ನೋಟಿಸ್​ ನೀಡಿದ್ದು, ತೆರವು ಮಾಡದ ಕಾರಣ ನಾವೇ ಮಾಡಿದ್ದೇವೆ.

    ಗಣಪತಿ ಪಾಟೀಲ್​. ನಗರಸಭೆ ಪೌರಾಯುಕ್ತ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts