More

    ಬ್ರಾಹ್ಮಣ ಮಹಾಸಭಾದಿಂದ ಧಾರ್ಮಿಕ ಕಾರ್ಯಕ್ರಮ 21ರಿಂದ

    ಕೊಪ್ಪಳ: ಅಯೋಧ್ಯೆಯಲ್ಲಿ ಜ.22ರಂದು ರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಅದರ ಅಂಗವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಮಿತಿಯಿಂದ ಕೊಪ್ಪಳದಲ್ಲಿ ಜ.21 ಮತ್ತು 22ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಮಹಾಸಭಾದ ಪ್ರಮುಖ ಡಾ.ಕೆ.ಜಿ.ಕುಲಕರ್ಣಿ ತಿಳಿಸಿದರು.

    ಕೊಪ್ಪಳದ ಗೋವಿಂದರಾಯನ ಗುಡಿ ಹತ್ತಿರವಿರುವ ಬ್ರಾಹ್ಮಣ ವಿದ್ಯಾರ್ಥಿ ಸದಾಚಾರ ಭವನದಲ್ಲಿ ಶತಕೋಟಿ ರಾಮತಾರಕ ನಾಮಜಪ ಮಹಾಯಜ್ಞ ಮತ್ತು ಶ್ರೀರಾಮ ತಾರಕ ಮಹಾಯಾಗ ನಡೆಯಲಿದೆ. ಜ.21ರಂದು ಬೆಳಗ್ಗೆ 9 ಗಂಟೆಗೆ ಬೈಕ್​ ರ್ಯಾಲಿ ಹಮ್ಮಿಕೊಂಡಿದ್ದು, ಗದಗ ರಸ್ತೆಯ ಶ್ರೀರಾಮ ಮಂದಿರದಿಂದ ಬ್ರಾಹ್ಮಣ ವಿದ್ಯಾರ್ಥಿ ಸದಾಚಾರ ಭವನದವರೆಗೆ ಜರುಗಲಿದೆ.

    300ಕ್ಕೂ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಜೆ 5.30ಕ್ಕೆ ರಾಘವೇಂದ್ರ ಸ್ವಾಮಿ ಮಠದಿಂದ ವಾದ್ಯಗಳು ಮತ್ತು ಭಜನಾ ಮಂಡಳಿಗಳೊಂದಿಗೆ ಸದಾಚಾರ ಭವನದ ತನಕ ಶೋಭಾಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಸಂಜೆ 7 ಗಂಟೆಗೆ ವೇದಿಕೆ ಕಾರ್ಯಕ್ರಮ ಇರಲಿದೆ. ಕಾರ್ಯಕ್ರಮ ಮುಗಿದ ನಂತರ ಜನ ಮರಳಳು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಜ022ರಂದು ಬೆಳಗ್ಗೆ 9 ಗಂಟೆಗೆ ಪುಣ್ಯಾಹವಾಚನ ಮತ್ತು ದೇವತಾ ಸ್ಥಾಪನೆ, ಮಧ್ಯಾಹ್ನ 12.20ಕ್ಕೆ ಶ್ರೀರಾಮತಾರಕ ಮಹಾಯಾಗದ ಪೂರ್ಣಾಹುತಿ, 12.30ಕ್ಕೆ ಸಭಾ ಕಾರ್ಯಕ್ರಮ ಮತ್ತು 1.30ಕ್ಕೆ ಪ್ರಸಾದ ಇರಲಿದೆ.

    ರ್ಯಾಲಿ ಪಾಲ್ಗೊಳ್ಳುವವರು ವಿಜಯಕುಮಾರ ಪದಕಿ-7019913588, ಶತಕೋಟಿ ರಾಮತಾರಕ ನಾಮ ಜಪ ಮಾಡಿದ ಭಕ್ತರು, ಸಂಘಸಂಸ್ಥೆಗಳು, ಭಜನಾ ಮಂಡಳಿಗಳ ಜಪ ಸಂಖ್ಯೆಯನ್ನು ತಿಳಿಸಲು ವಿಶ್ವನಾಥ ದೀಕ್ಷಿತ್​-9591953716, ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಭಜನಾ ಮಂಡಳಿಗಳು ರವೀಂದ್ರ ಆಶ್ರಿತ-9845597977 ಹೆಸರು ನೋಂದಾಯಿಸಬಹುದುದೆಂದರು.

    ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತರಾವ್​ ದೇಶಪಾಂಡೆ, ಪ್ರಮುಖರಾದ ವೇಣುಗೋಪಾಲಚಾರ್​ ಜಹಗೀರದಾರ, ಮಲ್ಲಾರಭಟ್​ ಜೋಶಿ, ರಾಘವೇಂದ್ರ ನರಗುಂದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts