More

    ಕಾಂಗ್ರೆಸ್ ರಾಮ ಮಂದಿರ ವಿರೋಧಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ

    ಗಂಗಾವತಿ (ಕೊಪ್ಪಳ): ಕಾಂಗ್ರೆಸ್ ರಾಮ ವಿರೋಧ ಮಾಡುತ್ತಿದೆ. ಕೇವಲ ಒಂದು ಮತದವರ ಓಲೈಕೆಗೆ ಈ ಧೋರಣೆ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

    ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಪಾದಗಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

    ಕಾಂಗ್ರೆಸ್ ಪಕ್ಷವನ್ನು ದೇಶದ ಜನ ತಿರಸ್ಕರಿಸಿದ್ದಾರೆ. ರಾಮ ಮಂದಿರ ವಿರುದ್ಧ ಅವರಿದ್ದಾರೆ. ರಾಮ ಹುಟ್ಟಿದ ಸ್ಥಳ ಅಯೋಧ್ಯೆ ಎಂದು ಗೊತ್ತಿದೆ‌. ಹೀಗಿದ್ದರು ಅಲ್ಪಸಂಖ್ಯಾತರ ಒಲೈಕೆಗೆ ರಾಮನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕೇವಲ ಅಲ್ಪಸಂಖ್ಯಾತರ ಮತ ಇದ್ದರೆ ತಾವು ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ. ರಾಮ ಮಂದಿರ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೆಲ‌ ಅಂಧರು ಸಿದ್ದರಾಮಯ್ಯ ಅವರನ್ನೇ ರಾಮ ಎನ್ನುತ್ತಾರೆ ಎಂದು ಕಿಡಿ ಕಾರಿದರು.

    ಕಾಂಗ್ರೆಸ್ ರಾಮ ಮಂದಿರ ವಿರೋಧಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ

    ಪ್ರಧಾನಿ ನರೇಂದ್ರ ಮೋದಿ ಸಂಕಲ್ಪದಂತೆ ರಾಮ ಮಂದಿರ ನಿರ್ಮಾಣವಾಗಿದೆ. ನಾಳೆ ನಡೆವ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಿರ್ವಿಘ್ನವಾಗಿ ಜರುಗಲೆಂದು ಹನುಮಂತನಲ್ಲಿ ಬೇಡಿಕೊಂಡಿರುವೆ. ರಾಮ ಸೀತೆ ಹುಡುಕುತ್ತ ಬಂದಾಗ ನೆರವುಗೆ ಬಂದಿದ್ದು ಆಂಜನೇಯ. ಹನುಮ ಹುಟ್ಟಿದ್ದು ಇದೇ ಕಿಷ್ಕಿಂಧೆಯಲ್ಲಿ. ಇದೇ ಕಾರಣಕ್ಕೆ ಅಯೋಧ್ಯೆ ಶ್ರೀರಾಮನ ಮೂರ್ತಿ ರಚನೆಗೆ ರಾಜ್ಯದ ಶಿಲೆ ಬಳಸಲಾಗಿದೆ ಎಂದರು.
    ದೇಶ ಕಟ್ಟುವ ಪ್ರಧಾನಿ ಅವರ ಕೈ ಬಲಪಡಿಸಬೇಕಿದೆ. ನಾವೆಲ್ಲ ಕೈ ಜೋಡಿಸಿದ್ದೇವೆ‌. ದೇಶದಲ್ಲಿ ಶಾಂತಿ, ಸುಖದಲ್ಲಿ ನೆಲೆಸಲಿ ಎಂದು ದೇವರಲ್ಲಿ ಬೇಡಿಕೊಂಡಿರುವೆ ಎಂದು ತಿಳಿಸಿದರು.

    ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿರುಪಾಕ್ಷಪ್ಪ ಸಿಂಗನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts