More

    ಕಾಗವಾಡದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

    ಕಾಗವಾಡ: ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಜ.30 ಹಾಗೂ 31ರಂದು ಬೆಳಗಾವಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಡಾ.ಶಿವಗೌಡ ಕಾಗೆ ಹೇಳಿದ್ದಾರೆ.

    ಶಿವಾನಂದ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಳಗಾವಿ ಜಿಲ್ಲಾ 14 ನೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಂತೆ ಗಡಿಭಾಗದ ಕಾಗವಾಡ ಪಟ್ಟಣದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನ ಯಶಸ್ವಿಗೊಳಿಸಲು ಕನ್ನಡಪರ ಮನಸ್ಸುಗಳು ಶ್ರಮಿಸುವಂತೆ ಮನವಿ ಮಾಡಿದರು.

    ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಭದ್ರವಾಗಿದ್ದರೆ ರಾಜ್ಯ ಸುಭದ್ರವಾಗಿರುತ್ತದೆ. ಆ ಕಾರಣದಿಂದಲೇ ಕಾಗವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು. ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಮಾತನಾಡಿ, ಕನ್ನಡಪರ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಯಾವತ್ತೂ ಇದೆ. ಕನ್ನಡ ಬೆಳೆಸುವ, ಗಟ್ಟಿಗೊಳಿಸುವ ಕೆಲಸ ನಿರಂತರವಾಗಬೇಕು ಸಮ್ಮೇಳನ ಜರುಗುವ ಸ್ಥಳ, ಊಟ-ವಸತಿ ವ್ಯವಸ್ಥೆ, ಹಣಕಾಸಿನ ಸಂಗ್ರಹ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು. ಸಾಹಿತ್ಯಾಭಿಮಾನಿಗಳು ಅನಿಸಿಕೆ ವ್ಯಕ್ತಪಡಿಸಿದರು.

    ಬಿಇಒ ಎಂ.ಆರ್.ಮುಂಜೆ, ಅಥಣಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ಉಕಲಿ, ಜ್ಯೋತಿ ಬದಾಮಿ, ಪಾಂಡುರಂಗ ಜಟಗಣ್ಣವರ, ಮಹಾಂತೇಶ ಮೆಣಸಿನಕಾಯಿ, ಶಶಿಕಲಾ ಯಲಿಗಾರ, ಹೇಮಾ ಹೊನ್ನಳ್ಳಿ, ಬಿ.ಎ.ಪಾಟೀಲ, ಡಿ.ಡಿ.ನಗರಕರ, ಜ್ಯೋತಿಕುಮಾರ ಪಾಟೀಲ, ಕಾಕಾಸಾಬ ಪಾಟೀಲ, ರಾಜು ಪಾಟೀಲ, ಆನಂದ ಪಾಟೀಲ, ರಾಜಗೌಡ ಪಾಟೀಲ, ಎಂ.ಡಿ.ಅಲಾಸೆ, ಸಿದ್ದು ವಡೆಯರ ಸೇರಿ ಕರ್ನಾಟಕ ರಕ್ಷಣಾ ವೇದಿಕೆ, ರಣಧೀರ ಪಡೆ, ಜೈ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts