More

    ಪ್ರಕೃತಿ ಜತೆ ಬದುಕಿದರೆ ಜೀವಿಗಳ ಉಳಿವು

    ಚಿಕ್ಕಮಗಳೂರು: ಮನುಷ್ಯ ಪ್ರಕೃತಿ ಜತೆ ಬದುಕುವುದನ್ನು ಕಲಿಯದ ಕಾರಣ ಒಂದೊಂದೇ ಜೀವಿಗಳು ಕಣ್ಮರೆಯಾಗುತ್ತಿವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಬೇಸರ ವ್ಯಕ್ತಪಡಿಸಿದರು.

    66ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ಬೆಳಗಾವಿಯಿಂದ ಮುತ್ತೋಡಿ ಹಾಗೂ ಮುತ್ತೋಡಿಯಿಂದ ಬೆಂಗಳೂರು ಸೈಕಲ್ ಜಾಥಾಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ಮನುಷ್ಯ ಸಮಷ್ಠಿ ಹಿತದ ಜತೆಗೆ ಬದುಕುವುದನ್ನು ಮರೆತು ಸ್ವಾರ್ಥಿಯಾದಾಗ ಅವನ ಅಸ್ತಿತ್ವದ ನಾಶಕ್ಕೂ ಕಾರಣವಾಗುತ್ತದೆ. ಹಾಗಾಗದಂತೆ ಸಕಲ ಜೀವಿಗಳ ಜತೆ ಬದುಕಬೇಕು. ಅದಕ್ಕಾಗಿ ಈ ವರ್ಷದ ಥೀಮ್ ‘ಭವಿಷ್ಯಕ್ಕಾಗಿ ರಣಹದ್ದುಗಳು’ ಎಂದು ಇಡಲಾಗಿದೆ ಎಂದರು.

    ಪೂರ್ವಿಕರಲ್ಲಿದ್ದ ದೂರದೃಷ್ಟಿಯಲ್ಲಿ ಶೇ.1 ರಷ್ಟು ನಮ್ಮಲ್ಲಿ ಇಲ್ಲ. ನದಿಮೂಲ ಗುರುತಿಸಿ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸಂರಕ್ಷಿಸುವ ವ್ಯವಸ್ಥೆ ಮಾಡಿಕೊಂಡಿದ್ದರು. ಕಾಡನ್ನು ಸಂರಕ್ಷಿಸಲು ದೇವರಕಾಡು ಎಂದು ಹೆಸರಿಸಿದ್ದರು. ಕೆಲವರಿಗೆ ಇದು ಮೂಢನಂಬಿಕೆಯಾಗಿ ಕಾಣಬಹುದು. ಆದರೆ ಪ್ರಕೃತಿಯಿಂದ ಏನನ್ನೇ ಪಡೆಯಬೇಕಾದರೆ ಕೊಟ್ಟು ಪಡಿ ಎನ್ನುವ ತತ್ವ ಅಳವಡಿಸಿರುವುದು ಅದರ ಹಿಂದಿನ ಸತ್ಯ. ಇವೆಲ್ಲವನ್ನೂ ಮರೆತು ಸ್ವಾರ್ಥದಲ್ಲಿ ಮುಳುಗಿ ಪರಿಸರ ನಾಶಮಾಡಲು ಹೊರಟಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

    ಗುಬ್ಬಚ್ಚಿಗಳನ್ನು ಹುಡುಕಬೇಕಾದ ಸ್ಥಿತಿ ಇದೆ. ಊರಿನಲ್ಲಿ ಯಾವುದಾದರೂ ಪ್ರಾಣಿಗಳು ಮೃತಪಟ್ಟರೆ ಅದನ್ನು ಬಯಲಿಗೆ ಹಾಕಿದಾಗ ತಿನ್ನಲು ಬರುತ್ತಿದ್ದ ರಣಹದ್ದುಗಳನ್ನು ನೋಡುತ್ತಿದ್ದೆವು. ಎರಡು ದಶಕಗಳಿಂದ ರಣಹದ್ದುಗಳು ಕಣ್ಮರೆಯಾಗಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts