More

    ಯಗಚಿ ಕಾಲುವೆ ಅಭಿವೃದ್ಧಿಗೆ 180 ಕೋಟಿ ರೂ. ಪ್ರಸ್ತಾವನೆ

    ಚಿಕ್ಕಮಗಳೂರು: ನಗರದಲ್ಲಿ ಹಾದುಹೋಗಿರುವ ಯಗಚಿ ಕಾಲುವೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ತಯಾರಿ ನಡೆಸಿದೆ. ಕಾಲುವೆ ಒತ್ತುವರಿ ತೆರವುಗೊಳಿಸಿ ಸ್ವಚ್ಛಗೊಳಿಸಲು ಸರ್ಕಾರಕ್ಕೆ 180 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಿದೆ.

    ಯಗಚಿ ನಾಲೆಯ 7.5 ಕಿಮೀ ಚಿಕ್ಕಮಗಳೂರು ಭಾಗಕ್ಕೆ ಸೇರಿದ್ದು, ಇದರಲ್ಲಿ 3.5 ಕಿಮೀ ಕಾಲುವೆ ನಗರದ ನಡುವೆ ಹಾದುಹೋಗಿದೆ. ಈ ನಾಲೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ರಾಮೇಶ್ವರ ಕೆರೆ ಮತ್ತು ಗಿರಿತಪ್ಪಲಿನಲ್ಲಿ ಸುರಿಯುವ ಮಳೆ ನೀರು ಸರಾಗವಾಗಿ ಹರಿದು ಯಗಚಿ ಜಲಾಶಯ ಸೇರುವಂತೆ ಮಾಡುವ ಚಿಂತನೆ ನಡೆಸಲಾಗಿದೆ.

    ಕಾಲುವೆಯ ಎರಡೂ ಬದಿಯಲ್ಲಿ ಕಾಂಕ್ರೀಟ್ ವಾಲ್ ನಿರ್ವಿುಸಲಾಗುವುದು. ಕಾಲುವೆ ನಡುವೆ ಒಂದೆರಡು ಕಡೆ 3ರಿಂದ 4 ಗುಂಟೆಯಷ್ಟು ಜಾಗ ಲಭ್ಯವಿದ್ದು, ಅಲ್ಲಿ ಶುದ್ಧೀಕರಣ ಘಟಕ ನಿರ್ವಿುಸಿ ನೀರನ್ನು ಶುದ್ಧೀಕರಿಸಿ ಮತ್ತೆ ಕಾಲುವೆಗೆ ಬಿಡಲಾಗುವುದು.

    ಕಾಲುವೆ ಆಸುಪಾಸಿನ ಒತ್ತುವರಿ ಜಾಗ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದ್ದು, ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿದ್ದಾರೆ. ರಾಮೇಶ್ವರ ಕೆರೆ ಸಮೀಪದಿಂದ ಕೆಎಂ ರಸ್ತೆಯ ಕಾಫಿ ಡೇ ಪಕ್ಕದ ಮೂರುಮನೆಹಳ್ಳಿ ರಸ್ತೆಯವರೆಗೆ ಹಾದುಹೋಗಿರುವ ಕಾಲುವೆ ಪ್ರದೇಶವನ್ನು ಸಮೀಕ್ಷೆ ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts