More

    ಕಾಫಿ ನಾಡಿನ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಜಿಲ್ಲಾ ಉತ್ಸವಕ್ಕೆ ಚಿಕ್ಕಮಗಳೂರು ಸಜ್ಜು

    ಚಿಕ್ಕಮಗಳೂರು: ಜಿಲ್ಲೆಯ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಜಿಲ್ಲಾ ಉತ್ಸವಕ್ಕೆ ನಗರ ಅಣಿಯಾಗುತ್ತಿದ್ದು, ಉತ್ಸವದ ಲಾಂಛನವನ್ನು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಬಿಡುಗಡೆಗೊಳಿಸಿ, ಫೇಸ್​ಬುಕ್ ಪುಟ ತೆರೆದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಹಬ್ಬದಲ್ಲಿ ಒಂದು ಸಾಂಸ್ಕೃತಿಕ ವಾತಾವರಣ ನಿರ್ವಣವಾಗಬೇಕು. ಒಂದು ತಂಡ ರಚನೆಗೊಂಡು ಈ ಜಿಲ್ಲೆ ಒಂದು ಸಾಂಸ್ಕೃತಿಕ ಕೇಂದ್ರವಾಗಬೇಕೆಂಬ ಆಶಯ ತಮ್ಮದು ಎಂದರು.

    ಜಿಲ್ಲಾ ಉತ್ಸವ ಜನರ ಸಹಭಾಗಿತ್ವದ ಹಬ್ಬವೇ ಹೊರತು ಸರ್ಕಾರಿ ಕಾರ್ಯಕ್ರಮವಲ್ಲ. ಈ ಉತ್ಸವದಲ್ಲಿ ಇದರ ಯಶಸ್ವಿ ಆಚರಣೆಗೆ ಅಗತ್ಯ, ಸಾಮರ್ಥ್ಯವಿರುವ ಯಾರೇ ವ್ಯಕ್ತಿಗಳನ್ನು ಸೇರಿಸಿಕೊಂಡು ಅವರ ಸಹಕಾರ ಪಡೆಯಬೇಕು. ಈ ಉತ್ಸವ ಒಂದು ರೀತಿ ಮಳೆ ಬಂದು ನಿಂತಂತೆ ಆಗಬಾರದು ಎಂದರು.

    ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಉತ್ಸವದ ಲಾಂಛನದಲ್ಲಿ ಜಿಲ್ಲೆಯ ಸ್ವರೂಪವನ್ನು ಸಾಂಕೇತಿಸುವ ಕಾಫಿ, ತೆಂಗು, ಅಡಕೆ ಹಾಗೂ ಇಲ್ಲಿನ ವನ್ಯಸಂಪತ್ತು ಮತ್ತು ಗಿರಿಶ್ರೇಣಿಯನ್ನು ಚಿತ್ರಿಸಲಾಗಿದೆ. ಅರ್ಥಪೂರ್ಣವಾದ ಲಾಂಛನವನ್ನು ಕಲಾವಿದ ವಿಶ್ವಕರ್ಮ ಆಚಾರ್ಯ ವಿನ್ಯಾಸಗೊಳಿಸಿದ್ದಾರೆ ಎಂದು ತಿಳಿಸಿದರು.

    ಇಂತಹ ಉತ್ಸವಗಳ ಹೆಚ್ಚಿನ ಅನುಭವ, ನಾಡಿನ ಸಂಸ್ಕೃತಿಯ ಅರಿವಿರುವ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಹಾಗೂ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅವರನ್ನು ಹೆಚ್ಚಿನ ಮಾರ್ಗದರ್ಶನ ಪಡೆಯುವ ಸಲುವಾಗಿ ಈ ಸಭೆಗೆ ಆಹ್ವಾನಿಸಿದ್ದಾಗಿ ತಿಳಿಸಿದರು.

    ಫೆ.28ರಿಂದ ಮಾ.1ರವರೆಗೆ ಜಿಲ್ಲಾ ಆಟದ ಮೈದಾನ ಹಾಗೂ ಕುವೆಂಪು ಕಲಾಮಂದಿರದಲ್ಲಿ ಮೂರು ದಿನ ನಡೆಯುವ ಕಾರ್ಯಕ್ರಮದ ಯಶಸ್ಸಿಗೆ ರಚಿಸಿರುವ 15 ಸಮಿತಿಗಳ ಪೂರ್ವಭಾವಿ ಸಿದ್ಧತೆ ಬಗ್ಗೆ ಸಚಿವರು ಪರಿಶೀಲಿಸಿದರು.

    ಉತ್ಸವದಲ್ಲಿ ಒಳಾಂಗಣ ಮತ್ತು ಹೊರಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಯಿತು. ಜಿಲ್ಲಾ ಆಟದ ಮೈದಾನದಲ್ಲಿ 10 ಸಾವಿರ ಆಸನದ ವ್ಯವಸ್ಥೆ ಹಾಗೂ ಬೃಹತ್ ವೇದಿಕೆ ನಿರ್ವಿುಸಲು ಹಾಗೂ ಎಲ್​ಇಡಿ ಪರದೆ ಅಳವಡಿಸಲು ತೀರ್ವನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts