More

    ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಕರ್ಫ್ಯೂ

    ವಿಜಯವಾಣಿ ಸುದ್ದಿಜಾಲ ಯಾದಗಿರಿ
    ಜಿಲ್ಲೆಯಲ್ಲಿ ದಿನಗಳೆದಂತೆ ಹೆಚ್ಚುತ್ತಿರುವ ಕರೊನಾ ಹರಡುವಿಕೆ ತಡೆಗೆ 31ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಹೇರಿರುವ ಜಿಲ್ಲಾಡಳಿತ, ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ.

    ಶಾಲಾ-ಕಾಲೇಜು, ಶೈಕ್ಷಣಿಕ ತರಬೇತಿ ಸಂಸ್ಥೆ ಇತ್ಯಾದಿ ಮುಚ್ಚಿರುತ್ತವೆ. ಆನ್ಲೈನ್ ಅಥವಾ ದೂರ ಶಿಕ್ಷಣ ಕಲಿಕೆಗೆ ಅನುಮತಿ ನೀಡಲಾಗಿದೆ. ಆರೋಗ್ಯ, ಪೊಲೀಸ್, ಸಕರ್ಾರಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಪ್ರವಾಸಿಗರನ್ನು ಒಳಗೊಂಡಂತೆ ಸಿಲುಕಿರುವ ವ್ಯಕ್ತಿಗಳು ತಂಗಿದ್ದ ಮನೆಗಳನ್ನು ಹೊರತುಪಡಿಸಿ ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಜಿಮ್, ಈಜುಕೊಳ, ಮನರಂಜನಾ ಪಾರ್ಕ್​, ಬಾರ್ ಮತ್ತು ಆಡಿಟೋರಿಯಂ ಇತರ ಸ್ಥಳಗಳು. ಕ್ರೀಡಾ ಸಂಕಿರಣಗಳು ಮತ್ತು ಸ್ಟೇಡಿಯಂ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸ್ಪಷ್ಟಪಡಿಸಿದ್ದಾರೆ.

    ಪ್ರಯಾಣಿಕರ ವಾಹನ ಮತ್ತು ಬಸ್ಗಳ ಅಂತಾರಾಜ್ಯ ಸಂಚಾರಕ್ಕೆ ಪರಸ್ಪರ ಒಪ್ಪಿಗೆಯೊಂದಿಗೆ ಅನುಮತಿ ನೀಡಲಾಗಿದೆ. ಎನ್ಈಕೆಆರ್ಟಿಸಿ ಬಸ್ಗಳ ಅಂತಾರಾಜ್ಯ ಸಂಚಾರಕ್ಕೆ ಮುಂಚಿತವಾಗಿ ಸಂಬಂಧಿಸಿದ ರಾಜ್ಯ ಒಪ್ಪಿಗೆ ಪಡೆಯತಕ್ಕದ್ದು. ಜಿಲ್ಲಾದ್ಯಂತ ಪ್ರವಾಸಿ ವಾಹನ, ರೈಲು ಮತ್ತು ಬಸ್ ಒಳಗೊಂಡಂತೆ ಸಾರಿಗೆ ಸೇವೆ, ಖಾಸಗಿ ವಾಹನಗಳು ಪರಸ್ಪರ ಅಂತರ ಕ್ರಮ ಕೈಗೊಂಡು ಸಂಚರಿಸಲು ಸೂಚಿಸಲಾಗಿದೆ. ಅಂತರ್ ಜಿಲ್ಲಾ ಸಂಚಾರಕ್ಕೆ ಯಾವುದೇ ಪಾಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಕಫ್ಯರ್ೂ ಹಿನ್ನೆಲೆಯಲ್ಲಿ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಎಲ್ಲ ಚಟುವಟಿಕೆ ಮತ್ತು ಜನಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಇರಲಿದೆ. ಎಲ್ಲರೂ ಆದೇಶ ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಕೋರಿದ್ದಾರೆ.

    ಕ್ಷೌರ, ಸ್ಪಾ ಮತ್ತು ಸಲೂನ್ ಸೇರಿ ಎಲ್ಲ ಅಂಗಡಿಗಳು ಕಾರ್ಯನಿರ್ವಹಿಸಬಹುದು. ಆರೋಗ್ಯ ಇಲಾಖೆ ಹೊರಡಿಸುವ ಪ್ರಯಾಣಿಕ ಕಾರ್ಯಾಚರಣಾ ವಿಧಾನದ ಪ್ರಕಾರ ಕ್ಷೌರ ಅಂಗಡಿಗಳು ಕಾರ್ಯ ನಿರ್ವಹಿಸಬಹುದು. ಈ ಮಾರ್ಗಸೂಚಿ ಮತ್ತು ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ನಿರ್ಧಿಷ್ಟ ಸಮಯದಲ್ಲಿ ಸಕರ್ಾರಿ, ಪುರಸಭೆ ಉದ್ಯಮಗಳು ಸಾರ್ವಜನಿಕರಿಗಾಗಿ ತೆರೆದಿರುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts