More

    ಜಿಲ್ಲಾಧಿಕಾರಿ ಗನ್​ವ್ಯಾನ್ ಅಮಾನತಿಗೆ ಆಗ್ರಹ

    ಧಾರವಾಡ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಗನ್​ವ್ಯಾನ್ ಪ್ರಕಾಶ ಮಾಳಗಿಮನಿ (ಫಕೀರಪ್ಪ) ಎಂಬಾತ ಅಧಿಕಾರ ದುರ್ಬಳಕೆ ಮಾಡಿಕೊಂಡು ತಾಲೂಕಿನ ಯಾದವಾಡ ಗ್ರಾಮದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾನೆ. ಆತನನ್ನು ಕೂಡಲೆ, ಅಮಾನತು ಮಾಡಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಪ್ರಕಾಶ ಮಾಳಗಿಮನಿ ಡಿಎಆರ್ ಪೇದೆಯಾಗಿದ್ದು, ಯಾದವಾಡ ಗ್ರಾಮದಲ್ಲಿ ನೆಲೆಸಿದ್ದಾನೆ. ಗ್ರಾಮದಲ್ಲಿ ಬೈಕ್ ರಿಪೇರಿ ಅಂಗಡಿ ಇಟ್ಟಿರುವ ಯುವಕನನ್ನು ಥಳಿಸಿ ದೌರ್ಜನ್ಯ ಎಸಗಿದ್ದಾನೆ. ಗ್ರಾಮದಲ್ಲಿರುವ ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸುತ್ತಿದ್ದಾನೆ. ಗಣೇಶ ಹಬ್ಬ, ಮೊಹರಂ, ಹೋಳಿ ಹಬ್ಬ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗುಂಪುಗಾರಿಕೆ ಮಾಡಿ ಸಮಾಜಘಾತುಕ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದ್ದಾನೆ. ಗ್ರಾಮದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ತಡೆ ಉಂಟು ಮಾಡಿದ್ದಾನೆ. ಕೂಡಲೆ, ಈತನ ವಿರುದ್ಧ ತನಿಖೆ ನಡೆಸಬೇಕು. ಅಲ್ಲಿಯವರೆಗೆ ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

    ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಗೃಹಸಚಿವರಿಗೆ ಮನವಿ ರವಾನಿಸಿದರು.

    ಪರಮೇಶ ಕೋಯಪ್ಪನವರ, ಶೇಕಣ್ಣ ಕುಂಬಾರ, ಶ್ರೀಶೈಲ ಬೆಂಡಿಗೇರಿ, ಮಡಿವಾಳಪ್ಪ ದಿಂಡಲಕೊಪ್ಪ, ರಾಚಯ್ಯ ಹಳ್ಳಿಗೇರಿಮಠ, ಈರಣ್ಣ ಬಡಿಗೇರ, ಅಣ್ಣಪ್ಪ ಬೆಟಗೇರಿ, ಮಾಬೂಲಿ ದಿಡ್ಡಿ, ಅಜ್ಜಪ್ಪ ಬೆಂಡಿಗೇರಿ, ಸುರೇಶ ತೋಟಗೇರ, ನಾಗೇಶ ಯಲಿಗಾರ, ಸಿದ್ದಪ್ಪ ಗಡಾದ, ಬಸವರಾಜ ಕೇಶಗೊಂಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts